ಶಿವಮೊಗ್ಗ

ಜಿಲ್ಲೆಯ ರೈಸ್‌ಮಿಲ್‌ಗಳು ಬಂದ್

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ಡಿ.16
ರಾಜ್ಯ ರೈಸ್ ಮಿಲ್ ಮಾಲೀಕರ ಸಂಘ ರಾಜ್ಯಾದ್ಯಂತ ಕರೆದಿದ್ದ ರೈಸ್ ಮಿಲ್ ಗಳ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ರೈಸ್‌ಮಿಲ್‌ಗಳನ್ನು ಸೋಮವಾರದಿಂದ ಅನಿರ್ಧಿಷ್ಟಾವಧಿ ಬಂದ್ ಮಾಡಲಾಯಿತು.
ರಾಜ್ಯ ಸರ್ಕಾರ ಏಕಪಕ್ಷೀಯವಾಗಿ 13 ಲಕ್ಷ ಟನ್ ಲೆವಿ ಅಕ್ಕಿ ಸಂಗ್ರಹಿಸುವ ತೀರ್ಮಾಣ ಕೈಗೊಂಡಿರುವ ನಿರ್ಧಾರವನ್ನು ವಿರೋಧಿಸಿ ಸಂಘ ಡಿ.16ರಿಂದ ರಾಜ್ಯ ವ್ಯಾಪ್ತಿ ರೈಸ್‌ಮಿಲ್‌ಗಳ ಬಂದ್ ಕರೆ ನೀಡಿದೆ.
ಅನ್ನಭಾಗ್ಯ ಯೋಜನೆಯಡಿ ವಿತರಿಸಲು ಮಾರ್ಚನಲ್ಲಿ 5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ವಿತರಿಸುವಂತೆ ಸರ್ಕಾರ ಮಾಡಿರುವ ಆದೇಶವನ್ನು ವಿರೋಧಿಸಿ ಬಂದ್ ಆಚರಿಸಲಾಗುತ್ತಿದೆ.
ಅನ್ನಭಾಗ್ಯ ಯೋಜನೆಗೆ ರೈಸ್‌ಮಿಲ್ ಮಾಲೀಕರಿಂದ 13.50 ಲಕ್ಷ ಟನ್ ಲೆವಿ ಅಕ್ಕಿ ಸಂಗ್ರಹಿಸಲು ನಿರ್ಧರಿಸಲಾಗಿತ್ತು. ಮಾರ್ಚ್ ವೇಳೆಗೆ 5 ಲಕ್ಷ ಟನ್ ಅಕ್ಕಿ ನೀಡಲು ಸಾಧ್ಯವೇ ಇಲ್ಲ ಎಂದು ಸಂಘ ತಿಳಿಸಿತ್ತು.
ರೈಸ್ ಮಿಲ್ ಮಾಲೀಕರ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹೀಗಾಗಿ ಅನಿರ್ಧಿಷ್ಟಾವಧಿಗೆ ರೈಸ್ ಮಿಲ್ ಬಂದ್‌ಗೆ ಕರೆ ನೀಡಲಾಗಿದೆ.
ರೈತರಿಗೆ ಸಂಕಟ: ರೈಸ್‌ಮಿಲ್‌ಗಳು ಬಂದ್ ಮಾಡಿದ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬೆಳೆದ ಬತ್ತವನ್ನು ಅಕ್ಕಿ ಮಾಡಿಸಲು ಬರುವ ರೈತರಿಗೆ ಇದು ನುಂಗಲಾರದ ತುತ್ತಾಗಿದೆ.
ದೂರದ ಊರುಗಳಿಂದ ರೈಸ್‌ಮಿಲ್‌ಗಳಿಗೆ ಬರುವ ರೈತರು ರೈಸ್‌ಮಿಲ್‌ಗಳಲ್ಲಿ ತಮ್ಮ ಬತ್ತದ ಮೂಟೆಗಳನ್ನು ಶೇಖರಣೆ ಮಾಡಿದ್ದಾರೆ. ಅಲ್ಲದೇ ರೈಸ್‌ಮಿಲ್‌ಗಳ ಕಾರ್ಮಿಕರಿಗೆ ಕೆಲಸ ಇಲ್ಲವಾಗಿದೆ.

ರೈತರು, ವ್ಯಾಪಾರಿಗಳ ಆತಂಕ
ಶಿರಾಳಕೊಪ್ಪ: ಹಿಂದೆ ರಾಜ್ಯದಲ್ಲಿ ಅಕ್ಕಿ ಬತ್ತಕ್ಕೆ ಪ್ರಸಿದ್ಧಿ ಪಡೆದಿದ್ದ ಶಿರಾಳಕೊಪ್ಪ ಪಟ್ಟಣ ಸೇರಿದಂತೆ ಸುತ್ತಮುತ್ತಲ ಭಾಗದ ಅಕ್ಕಿ ಮಿಲ್‌ಗಳು ಸಂಪೂರ್ಣ ಬಂದ್ ಮಾಡಲಾಗಿದೆ.
ಅಕ್ಕಿ ಮಿಲ್ ಮಾಲೀಕರ ಅನಿರ್ದಿಷ್ಟಾವಧಿ ಕಾಲದವರೆಗಿನ ಬಂದ್ ಆಚರಣೆಯಲ್ಲಿ ತೊಡಗಿದ್ದಾರೆ. ಅಕ್ಕಿ ಮಿಲ್‌ಗಳನ್ನು ನಂಬಿರುವ ರೈತರು, ವ್ಯಾಪಾರಿಗಳು ಮಾತ್ರ ತೀವ್ರ ಸಂಕಷ್ಟ ಪಡುವಂತಾಗಿದೆ.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಮಾಲೀಕರು ಸರ್ಕಾರ ಈ ಹಿಂದೆ ನಿಗದಿ ಮಾಡಿದ್ದಂತೆ ರೈಸ್ ಮಿಲ್‌ಗಳಿಂದ ಅಕ್ಕಿ ಸಂಗ್ರಹಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.