ಶಿವಮೊಗ್ಗ

ಗೋವಿಂದೇಗೌಡ ದಂಪತಿಗೆ ಸನ್ಮಾನ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.18 ಮಲೆನಾಡು ಗಾಂಧಿ ಎಂದೇ ಪ್ರಸಿದ್ಧರಾದ ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡ ದಂಪತಿಗೆ ಜಿಲ್ಲಾ ಒಕ್ಕಲಿಗರ ಸಂಘದಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಚ್.ಜಿ. ಗೋವಿಂದೇಗೌಡ, ಬಡ ವಿದ್ಯಾವಂತರಿಗೆ ಆತಂಕದ ಸ್ಥಿತಿ ಇದ್ದಾಗ ರೋಸ್ಟರ್ ಪದ್ಧತಿ ಮೂಲಕ ಆರ್ಥಿಕ ಸ್ಥಿತಿ ಮತ್ತು ಮೆರಿಟ್ ಆಧರಿಸಿ ನೇರವಾಗಿ ಶಿಕ್ಷಕರ ಆಯ್ಕೆ ನಡೆಸಲಾಯಿತು. ಅದರಲ್ಲಿ ಶೇ.50 ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗಿತ್ತು. ಅದು ನನ್ನ ಕರ್ತವ್ಯವೂ ಆಗಿತ್ತು ಎಂದು ಅಧಿಕಾರದ ದಿನಗಳನ್ನು ಮೆಲುಕು ಹಾಕಿದರು.
ಸಂಘದ ಅಧ್ಯಕ್ಷ ಪ್ರೊ. ಜೆ.ಎಲ್. ಪದ್ಮನಾಭ್, ಗೋವಿಂದೇಗೌಡರು ಪ್ರಾಮಾಣಿಕ ಸೇವೆ, ಸರಳತೆ, ಸಜ್ಜನಿಕೆ, ಕ್ರಿಯಾಶೀಲತೆ ಮತ್ತು ಸ್ವಾಭಿಮಾನ ಯುವಜನರಿಗೆ ಸ್ಫೂರ್ತಿ ನೀಡುವಂತಿದೆ. ಇಂದಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಸ್ವಾರ್ಥ ತುಂಬಿದ ರಾಜಕೀಯ ಕ್ಷೇತ್ರದಲ್ಲಿ ಅವರ ಸೇವೆ ರಾಜ್ಯದ ಇತಿಹಾಸದಲ್ಲಿ ನೆನಪಿನಲ್ಲಿಡುವ ಅಧ್ಯಾಯವಾಗಿದೆ. ಅವರೊಬ್ಬ ಮಾದರಿ ವ್ಯಕ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಗೌರವ ಕಾರ್ಯದರ್ಶಿ ಎನ್.ಎ. ಮಾದೇಶ್ ಹೆಗ್ಡೆ, ಎಂ.ಎ. ರಮೇಶ್ ಹೆಗ್ಡೆ, ಎನ್. ಉಪೇಂದ್ರ, ಕೆ.ಪಿ. ಪುಟ್ಟಸ್ವಾಮಿ, ನಿರ್ದೇಶಕ ಕೆ.ಎಂ. ಗೋಪಾಲಗೌಡ, ಎಚ್.ಬಿ. ಆದಿಮೂರ್ತಿ, ಉಂಬ್ಳೇಬೈಲು ಮೋಹನ್, ಬೇಳೆಗದ್ದೆ ಪ್ರಭಾಕರ್ ಮೊದಲಾದವರು ಇದ್ದರು.
--
ಹಿರೇಕೆರೂರು ಘಟಕದಿಂದ ಹಾವೇರಿಗೆ ನೂತನ ಬಸ್
ಶಿರಾಳಕೊಪ್ಪ: ಹಾವೇರಿ ವಿಭಾಗದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರೇಕೆರೂರು ಘಟಕದಿಂದ ಹೊಸ ಮಾರ್ಗದಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗಿದೆ.
ಪ್ರತಿದಿನ ಬೆಳಗ್ಗೆ 7.15 ಗಂಟೆಗೆ ಹಿರೇಕೆರೂರಿನಿಂದ ಶಿರಾಳಕೊಪ್ಪಕ್ಕೆ ಬರುವ ಬಸ್ ನಂತರ ಶಿರಾಳಕೊಪ್ಪದಿಂದ 8 ಗಂಟೆಗೆ ಹೊರಟು ಹಾವೇರಿಗೆ 10.45 ಗಂಟೆಗೆ ತಲುಪುತ್ತದೆ. ಈ ಬಸ್ ಸಂಚಾರದಿಂದ ಶಿರಾಳಕೊಪ್ಪ ಭಾಗದ ಸುಣ್ಣದಕೊಪ್ಪ, ಮುತ್ತಿಗೆ ಶಿರಾಳಕೊಪ್ಪ ಮುಖಾಂತರ ದೇವಿಕೊಪ್ಪ, ಹೊಸೂರು, ಸೊರಬ ತಾಲೂಕಿನ ಕಬ್ಬೂರು, ತಲ್ಲೂರು, ನೆಗವಾಡಿ, ಎಣ್ಣೆಕೊಪ್ಪ, ಕಮ್ಮನಹಳ್ಳಿ ಹಾವೇರಿ ಜಿಲ್ಲೆಯ ಹೆರೂರು ಸಂಗೂರು ಮುಖಾಂತರ ಹಾವೇರಿ ತಲುಪಲಿದೆ. ಹಾವೇರಿಯಿಂದ 11 ಗಂಟೆಗೆ ಹೊರಡುವ ಬಸ್ ತಿಳವಳ್ಳಿ ಮುಖಾಂತರ ಶಿಕಾರಿಪುರಕ್ಕೆ ತಲುಪಲಿದೆ. ಶಿರಾಳಕೊಪ್ಪ-ಶಿಕಾರಿಪುರ ಪುನೇದಹಳ್ಳಿ, ಜಕ್ಕನಹಳ್ಳಿ ಮುಖಾಂತರ 2-30 ಗಂಟೆಗೆ ಶಿಕಾರಿಪುರ ತಲುಪಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.