ಶಿವಮೊಗ್ಗ

ಭಾಷೆ ಉಳಿವಿಗೆ ಗ್ರಾಮ ಮಟ್ಟದಲ್ಲಿ ನಿತ್ಯೋತ್ಸವ

Published On :

ಕ.ಪ್ರ.ವಾರ್ತೆ, ಕಡೂರು,  ಡಿ.20
ಗ್ರಾಮ ಮಟ್ಟದಲ್ಲಿ ಕನ್ನಡ ನುಡಿ ನಿತ್ಯೋತ್ಸವವಾಗಬೇಕು. ಭಾಷೆ ಉಳಿವಿಗಾಗಿ ಗ್ರಾಮ ಮಟ್ಟದಲ್ಲಿ ನುಡಿ ನಿತ್ಯೋತ್ಸವ ಆಚರಣೆಗೆ ತರಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಚೌಳಹಿರಿಯೂರು ಗ್ರಾಮದ ಹೊಸನಗರ ಬಡಾವಣೆಯ ಸಮುದಾಯ ಭವನದಲ್ಲಿ ಕನ್ನಡ ನುಡಿ ನಿತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಪ್ರಬುದ್ದತೆ ಖಾಸಗಿ ಶಾಲಾ ಮಕ್ಕಳಲ್ಲಿ ಕಡಿಮೆ ಎಂದರು.
ಉಪನ್ಯಾಸಕ ಸಾಹಿತಿ ಎಚ್.ಎಂ. ನಾಗರಾಜರಾವ್ ಕರ್ನಾಟಕ ಏಕೀಕರಣ ಬಗ್ಗೆ ಉಪನ್ಯಾಸ ನೀಡಿ, 1916ರಿಂದಲೂ ಭಾಷಾವಾರು ವಿಂಗಡಣೆ ಹೋರಾಟ ಮುಂದುವರಿದಿದ್ದು, ಅಂದಿನಿಂದ ಕನ್ನಡ ಉಳಿವಿಗೆ ಶ್ರಮಿಸಿದ ಆಲೂರು ವೆಂಕಟರಾಯರು, ಕಡಪ ರಾಘವೇಂದ್ರ, ಮುದವೀಡು ಕೃಷ್ಣ ಹಾಗೂ ಎಸ್. ನಿಜಲಿಂಗಪ್ಪ ಮತ್ತಿತರರ ಸೇವೆ ಶ್ಲಾಘನೀಯ ಎಂದರು. ಬಿ.ಆರ್. ನಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಸಾಪ ಕಾರ್ಯದರ್ಶಿ ಕೆ. ವಿರೂಪಾಕ್ಷಪ್ಪ ಮಾತನಾಡಿದರು. ಹೋಬಳಿ ಅಧ್ಯಕ್ಷ ಎಚ್.ಸಿ. ಮಹಾಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲಲಿತಾ ನಟೇಶ್, ಶಾರದಮ್ಮ, ಶಿವಮ್ಮ ಉಪಸ್ಥಿತರಿದ್ದರು. ಶಿಕ್ಷಕ ವಿನಾಯಕ್, ಸ್ವಾಗತಿಸಿ ಹೆಚ್.ಬಿ. ದೇವರಾಜ್ ವಂದಿಸಿದರು.
ಸಿಇಟಿ ಕಾಯ್ದೆ ಜಾರಿಗೆ ವಿರೋಧ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ 2006ರ ಸಿಇಟಿ ಕಾಯಿದೆ ಜಾರಿಯಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆ ಬೆಳೆಸುವ ಮೂಲಕ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೀದಿಗೆ ತಳ್ಳುವ ಉದ್ದೇಶದಿಂದ ಜಾರಿಗೆ ಮುಂದಾಗಿದೆ ಎಂದು ಜಿಲ್ಲಾ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸನ್ನ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಕಾಯಿದೆಯಿಂದ ವೃತ್ತಿಪರ ಕೋರ್ಸುಗಳಾದ ವೈದ್ಯಕೀಯ, ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಎಲ್ಲ ಸೀಟುಗಳು ಖಾಸಗಿ ಸಂಸ್ಥೆಗಳ ಪಾಲಾಗಲಿವೆ. ಈ ಕಾಯಿದೆ ಜಾರಿಯಾದಲ್ಲಿ ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗದೆ ಬೀದಿಗೆ ಬೀಳುವ ಸ್ಥಿತಿಗೆ ರಾಜ್ಯ ಸರ್ಕಾರವೇ ಕಾರಣವಾಗುವುದು. ಸರ್ಕಾರಕ್ಕೆ ಗೊತ್ತಿದ್ದರೂ ಕಾಯಿದೆ ಜಾರಿಗೆ ಮುಂದಾಗುತ್ತಿರುವ ಕ್ರಮ ಖಂಡನೀಯ ಎಂದಿದ್ದಾರೆ.
ಕನ್ನಡ ಸೇನೆ ಧ್ಯೇಯ: ನಾಡಿನಾದ್ಯಂತ ಕನ್ನಡ ಸೇನೆಯ ಸಂಘಟನೆಯು ಸಾರ್ವಜನಿಕ ಸಮಸ್ಯೆಗಳ ಪರವಾಗಿ ಹೋರಾಟ ಮಾಡಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಘಟನೆ ಆಗುತ್ತಿದೆ ಎಂದು ತಾಲೂಕು ಕನ್ನಡ ಸೇನೆ ಅಧ್ಯಕ್ಷ ಬಿ.ಆರ್.ಮೋಹನಕುಮಾರ್ ಹೇಳಿದರು.
ಪಟ್ಟಣದಲ್ಲಿ ಕಡೂರು ಕನ್ನಡ ಸೇನೆಯ ನಗರ ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಂಜುನಾಥ್ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಕನ್ನಡ ಸೇನೆಯು ಸಾರ್ವಜನಿಕರ ಸೇವೆಗೆ ಒತ್ತುಕೊಟ್ಟು ಕಾರ್ಯನಿರ್ವಹಿಸಲಿದೆ. ಹಾಗೆಯೇ ತಾಲೂಕು ಕೇಂದ್ರಗಳು, ಹೋಬಳಿ ಮಟ್ಟದಲ್ಲೂ ಕೂಡ ಕನ್ನಡ ಸೇನೆ ಬಲಪಡಿಸುವ ಮೂಲಕ ಸಂಘಟನೆ ಮಾಡಿ ಅನ್ಯಾಯದ ವಿರುದ್ಧ  ಹೋರಾಟ ಮಾಡಲಿದೆ. ಇದಕ್ಕೆ ಸಾರ್ವಜನಿಕರೂ ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿ ಮಂಜುನಾಥ್ ಅವರನ್ನು ಅಭಿನಂದಿಸಿದರು.
ಇದೇ ಸಂದರ್ಭ ಬೀರೂರು ಘಟಕದ ಅಧ್ಯಕ್ಷ ಎನ್.ಮುಬಾರಕ್, ತಾಲೂಕು ಸಂಘಟನಾ ಕಾರ್ಯದರ್ಶಿ ಬಿ.ಎಸ್. ಗಿರೀಶ್, ಬಿ.ಜಿ.ಶ್ರೀನಿವಾಸ್, ನವೀದ್, ಶ್ರೀಧರ್, ಹೋರಿತಿಮ್ಮನಹಳ್ಳಿ ಅಧ್ಯಕ್ಷ ಶ್ರೀನಿವಾಸ್, ಸತೀಶ್, ಮನೋಜ್ ಮತ್ತು ಕಡೂರು ಘಟಕದ ನೂತನ ಪದಾಧಿಕಾರಿಗಳಾದ ಸಂತೋಷ್, ಧನರಾಜ್, ದೀಪಕ್, ದೃವಚಂದ್, ಮಾರುತಿ, ಸಂಜಯ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.