ಶಿವಮೊಗ್ಗ

ಗಾಜನೂರಿನಲ್ಲಿ ಐಎಂಎ ಆರೋಗ್ಯ ಶಿಬಿರ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.22 ಗಾಜನೂರಿನಲ್ಲಿ ಐಎಂಎ ನಿಂದ ಗ್ರಾಮದ ಕಡೆಗೆ ವೈದ್ಯರ ನಡಿಗೆ ಕಾರ್ಯಕ್ರಮದಡಿ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಮಿಲಾನ್ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣೆ, ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಗ್ರಾಮಸ್ಥರಲ್ಲಿ ಸಂತಾನ ಹೀನತೆ ಕುರಿತು ಮಾಹಿತಿ ನೀಡಿ, ಆರೋಗ್ಯ ತಪಾಸಣೆ ನಡೆಸಲಾಯಿತು. ಸುಮಾರು 280 ಮಂದಿ ತಪಾಸಣೆಗೊಳಪಟ್ಟು, 75 ಜನರ ರಕ್ತ, ಮೂತ್ರ ತಪಾಸಣೆಗೊಳಪಡಿಸಿ ಚಿಕಿತ್ಸೆಗೆ ಸಲಹೆ ನೀಡಲಾಯಿತು. ಡಾ. ಫಣಿ ಮಾಧುರಿಯವರ ವೈದ್ಯಕೀಯ ತಂಡ ತಪಾಸಣೆ ಕಾರ್ಯ ನಡೆಸಿತು.
ಬಡವರಿಗೆ ಸೇವೆ: ಪ್ರಾಸ್ತಾವಿಕವಾಗಿ ಮಾತನಾಡಿದ ಐಎಂಎ ಅಧ್ಯಕ್ಷೆ ಡಾ. ವಾಣಿ ಕೋರಿ, ಐಎಂಎ ಯಾವುದೇ ಮಾರ್ಕೆಟಿಂಗ್ ಮಾಡುವ ಸಂಸ್ಥೆಯಲ್ಲ, ಅದರ ಉದ್ದೇಶವೂ ಇಲ್ಲ. ಗ್ರಾಮೀಣ ಭಾಗದಲ್ಲಿರುವ ಬಡವರಿಗೆ ಉಚಿತ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಗ್ರಾಮದ ಕಡೆಗೆ ವೈದ್ಯರ ನಡಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಹಳಸುತ್ತಿರುವ ಸಂಬಂಧ: ಇಂದು ರೋಗಿ- ವೈದ್ಯನ ನಡುವೆ ಸಂಬಂಧ ಹಳಸುತ್ತಿದೆ. ವೈದ್ಯರ ಮೇಲಿನ ನಂಬಿಕೆ, ಗೌರವ ಕಡಿಮೆಯಾಗುತ್ತಿದೆ. ಈ ಭಾವನೆಗೆ ಕಾರಣದ ವಿಚಾರ ವಿಮರ್ಶೆ ಬದಲು, ಈ ಸಂಬಂಧವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಶಿಬಿರ ಉದ್ಘಾಟಿಸಿದ ಸುಬ್ಬಯ್ಯ ವೈದ್ಯಕೀಯ ಆಸ್ಪತ್ರೆಯ ಪ್ರಾಂಶುಪಾಲ ಡಾ. ನಾಗೇಂದ್ರ ಮಾತನಾಡಿ, ತಮ್ಮ ಆಸ್ಪತ್ರೆಯಲ್ಲಿ ಬಿ ವಾರ್ಡ್ ಎಂಬ ಪ್ರತ್ಯೇಕ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ತಪಾಸಣೆ, ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತದೆ ಎಂದರು. ಗ್ರಾಪಂ ಅಧ್ಯಕ್ಷೆ ಶಿವಲಿಂಗಮ್ಮ, ಐಎಂಎ ಕಾರ್ಯಕ್ರಮ ಸಂಚಾಲಕ ಮಲ್ಲಿಕಾರ್ಜುನ ಕೊಪ್ಪದ್, ಕೊಟ್ರೇಶ,  ಶ್ರೀನಿವಾಸ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.