29ರಂದು ರಾಜ್ಯಮಟ್ಟದ ಶ್ವಾನ ಪ್ರದರ್ಶನ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.24 ಶಿವಮೊಗ್ಗ ಕೆನಲ್ ಕ್ಲಬ್ ನಗರದಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಏರ್ಪಡಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಲಬ್ ಅಧ್ಯಕ್ಷ ಎನ್. ರಾಜೇಂದ್ರ ಕಾಮತ್, ನಗರದ ಕುವೆಂಪು ರಂಗಮಂದಿರ ಹಿಂಭಾಗದ ಎನ್‌ಇಎಸ್ ಮೈದಾನದಲ್ಲಿ ಡಿ. 29ರಂದು ಬೆಳಗ್ಗೆ 9ರಿಂದ 5ರವರೆಗೆ ಪ್ರದರ್ಶನ ನಡೆಯಲಿದ್ದು, ವಿವಿಧ ತಳಿಯ ಸುಮಾರು 200ರಿಂದ 250 ಶ್ವಾನಗಳು ರಾಜ್ಯದಾದ್ಯಂತದಿಂದ ಆಗಮಿಸುತ್ತಿವೆ ಎಂದು ವಿವರಿಸಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪನವರು ಪ್ರದರ್ಶನ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಖುರ್ಷಿದಾ ಬಾನು, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯನಾರಾಯಣ, ಕೆನಲ್ ಕ್ಲಬ್ ಗೌರವಾಧ್ಯಕ್ಷ ಕೆ.ಇ. ಕಾಂತೇಶ ಭಾಗವಹಿಸುವರು. ಎಂದು ರಾಜೇಂದ್ರ ವಿವರಿಸಿದರು.
ನಗದು, ಟ್ರೋಫಿ: ವಿಜೇತ ಶ್ವಾನಗಳಿಗೆ ಒಟ್ಟು ರು. 30,000 ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು.
ಸಂಜೆ 4ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಿವಮೊಗ್ಗ ನಗರ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ, ಉದ್ಯಮಿ ಕಾಂತೇಶ ಪಾಲ್ಗೊಳ್ಳುವರು.
ಶ್ವಾನ ಪ್ರದರ್ಶನಕ್ಕೆ ಗೋವಾದ ಸ್ಟಿವ್ ಅಲ್ಮೇಡಾ ತೀರ್ಪುಗಾರರಾಗಿ, ಇಂಗ್ಲೆಂಡ್‌ನ ಶ್ವಾನ ತಜ್ಞ ಕೀತ್ ಹಡ್ಸನ್ ದಂಪತಿ ವೀಕ್ಷಕರಾಗಿ ಆಗಮಿಸುತ್ತಿದ್ದಾರೆ.
ಪ್ರದರ್ಶನದಲ್ಲಿ ಭಾಗವಹಿಸುವವರು ಬೆಳಗ್ಗೆ 9 ಗಂಟೆಯೊಳಗೆ ತಮ್ಮ ಶ್ವಾನಗಳೊದಂಗಿಗೆ ಮೈದಾನದಲ್ಲಿ ಹಾಜರಿರಬೇಕೆಂದು ಕೋರಲಾಗಿದ್ದು, ಮಾಹಿತಿಗಾಗಿ ಮೊ. 9964048708, 9886523026 ಸಂಪರ್ಕಿಸಬಹುದು. ಕ್ಲಬ್ ಉಪಾಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಎಸ್.ಎಸ್. ಸತೀಶ್ ಕುಮಾರ್, ಖಜಾಂಚಿ ಶ್ರೀಧರ್ ಶೆಣೈ, ನಿರ್ದೇಶಕ ಬಿ.ಎಸ್. ಶ್ರೀಧರ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

