ಜ.15ರಿಂದ 'ಮನೆ ಮನೆಗೆ ಬಿಜೆಪಿ'
ಕನ್ನಡಪ್ರಭ ವಾರ್ತೆ ಟಿ ಶಿವಮೊಗ್ಗ ಟಿ ಡಿ.28
ಲೋಕಸಭಾ ಚುನಾವಣೆಗೆ ಪೂರ್ಣ ರೀತಿಯಲ್ಲಿ ಸಜ್ಜಾಗುವ ಉದ್ದೇಶದಿಂದ ಜಿಲ್ಲಾ ಬಿಜೆಪಿಯು ಮೂರು ರೀತಿಯ ಪ್ರಮುಖ ಅಭಿಯಾನ ಹಮ್ಮಿಕೊಂಡಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಕುರಿತು ವಿವರಣೆ ನೀಡಿದ ಅವರು, ಜನವರಿ 15ರಿಂದ 25ರವರೆಗೆ ಅಭಿಯಾನ ಮೂರು ಹಂತದಲ್ಲಿ ನಡೆಯಲಿದೆ. ಮುಖ್ಯವಾಗಿ ಮನೆ ಮನೆಗೆ ಬಿಜೆಪಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಮತದಾರರ ಸೇರ್ಪಡೆ ಅಭಿಯಾನ ಹಾಗೂ ಪಕ್ಷಕ್ಕಾಗಿ ನಿಧಿ ಸಂಗ್ರಹ ಅಭಿಯಾನವನ್ನೂ ನಡೆಸಲಾಗುವುದು ಎಂದರು.
ಪ್ರತಿ ಅಭಿಯಾನಕ್ಕೂ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಜನವರಿ 15 ರಿಂದ 25ರವರೆಗೆ ಒಟ್ಟು 10 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಏಳು ತಾಲೂಕು ಸೇರಿದಂತೆ ಒಟ್ಟು 1914 ಮತಗಟ್ಟೆ ಬರುತ್ತವೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲಿ 1674 ಮತಗಟ್ಟೆ, ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 240 ಮತಗಟ್ಟೆಗಳು ಬರುತ್ತವೆ. ಈಗಾಗಲೇ ಶೇ.90 ರಷ್ಟು ಮತಗಟ್ಟೆ ಸಮಿತಿಗಳನ್ನು ಕೂಡ ರಚನೆ ಮಾಡಲಾಗಿದೆ. ಈ ಸಮಿತಿಗಳ ಕಾರ್ಯಕರ್ತರು ಮನೆ ಮನೆಗೆ ಬಿಜೆಪಿ ಅಭಿಯಾನ ನಡೆಸಲಿದ್ದಾರೆ ಎಂದರು.
ಅಭಿಯಾನದ ವೇಳೆ ಕಾರ್ಯಕರ್ತರು ಮೂರು ಕರಪತ್ರಗಳನ್ನು ಜನರಿಗೆ ತಲುಪಿಸಲಿದ್ದಾರೆ. ಯುಪಿಎ ಸರ್ಕಾರದ ವೈಫಲ್ಯಗಳ ಕುರಿತು ಒಂದು ಕರಪತ್ರ, ಮೋದಿ ಏಕೆ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತಿನಲ್ಲಿ ಅವರ ಸಾಧನೆಗಳ ಕುರಿತು ಮತ್ತೊಂದು ಕರಪತ್ರ ಹಾಗೂ ಎನ್ಡಿಎ ಸರ್ಕಾರದ ಸಾಧನೆಗಳು ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೈಗೊಂಡ ಸಾಧನೆಗಳ ಬಗ್ಗೆ ಇನ್ನೊಂದು ಕರಪತ್ರ ಮನೆಮನೆಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಮತದಾರರ ಪಟ್ಟಿಗೆ ಮತದಾರರನ್ನು ಸೇರ್ಪಡೆ ಮಾಡಿಸುವ ಅಭಿಯಾನ ನಡೆಸಲಾಗುವುದು. 272 ಪ್ಲಸ್ ನಮ್ಮ ಗುರಿ ಎಂಬ ಹೆಸರಿನಲ್ಲಿ ಈ ಅಭಿಯಾನ ನಡೆಯುವುದು. ಇದಕ್ಕಾಗಿಯೇ ರಾಷ್ಟ್ರಮಟ್ಟದಿಂದ ಪ್ರತ್ಯೇಕ ಸಮಿತಿಯನ್ನೇ ರಚನೆ ಮಾಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಡಿ.ಎಂ. ರಂಗನಾಥ್, ಶಶಿಧರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ 25 ಮಂದಿ ಹೊಸ ಮತದಾರರನ್ನು ಸೇರ್ಪಡೆ ಮಾಡುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಅರ್ಜಿ ನಮೂನೆಯನ್ನು ಸರ್ಕಾರದ ಕಡೆಯಿಂದ ಪಡೆದು ಪಕ್ಷದ ವತಿಯಿಂದ ಹೆಚ್ಚುವರಿಯಾಗಿ ಮುದ್ರಿಸಲಾಗಿದೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕಾಗಿ ನಿಧಿ ಸಂಗ್ರಹ ಅಭಿಯಾನವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಪ್ರತಿ ಬೂತ್ನಿಂದ 50 ಮನೆಗಳಲ್ಲಿ ನಿಧಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಪಕ್ಷವು 100, 500 ಹಾಗೂ ಒಂದು ಸಾವಿರ ರುಪಾಯಿ ಕೂಪನ್ ಮುದ್ರಿಸಲಾಗಿದೆ. ಜನವರಿ 1ರಿಂದ ಐದವರೆಗೆ ನಿಧಿ ಸಂಗ್ರಹ ಅಭಿಯಾನ ನಡೆಯಲಿದ್ದು, 3ರಂದು ಸಂಸದ ನಳೀನ್ಕುಮಾರ್ ಕಟೀಲು ಶಿವಮೊಗ್ಗದ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಈ ಎಲ್ಲ ಅಭಿಯಾನಗಳ ಹಿನ್ನೆಲೆಯಲ್ಲಿ ಡಿ. 31ರಂದು ಶಕ್ತಿ ಕೇಂದ್ರದ ಪ್ರಮುಖರ ಕಾರ್ಯಾಗಾರ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಭಾಗವಹಿಸಲಿದ್ದಾರೆ ಎಂದರು.
ಪಕ್ಷದ ಪ್ರಮುಖರಾದ ಚನ್ನಬಸಪ್ಪ, ಎಂ.ಶಂಕರ್, ಎ.ಎಲ್.ಅರವಿಂದ್, ಮಧುಸೂಧನ್, ರಾಮು, ಮೋಹನ್ ರೆಡ್ಡಿ, ರತ್ನಾಕರ ಶೆಣೈ ಮತ್ತಿರರು ಸುದ್ದಿಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

