ಶ್ವಾನಪ್ರದರ್ಶನ ನೋಡಲು ಜನಸಾಗರ
ಕ.ಪ್ರ.ವಾರ್ತೆ , ಶಿವಮೊಗ್ಗ , ಡಿ. 29
ಭಾನುವಾರ ಎನ್ಇಎಸ್ ಮೈದಾನ ಶ್ವಾನಪ್ರೇಮಿಗಳ ಪಾಲಿಗೆ ಜಾತ್ರೆಯಾಗಿ ಪರಿಣಮಿಸಿತ್ತು.
ಶಿವಮೊಗ್ಗ ಕೆನಲ್ ಕ್ಲಬ್ ಭಾನುವಾರ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಹಮ್ಮಿಕೊಂಡಿತ್ತು. ಇದನ್ನು ಕಣ್ತುಂಬಿಕೊಳ್ಳಲು ಅಂದಾಜು 10 ಸಾವಿರಕ್ಕೂ ಮಿಕ್ಕಿದ ಜನರು ಸೇರಿದ್ದರು.
ಶಿವಮೊಗ್ಗ ಸೇರಿದಂತೆ ದಾವಣಗೆರೆ, ಚಿಕ್ಕಮಗಳೂರು, ಹುಬ್ಬಳ್ಳಿ, ಚಿತ್ರದುರ್ಗ, ಹಾವೇರಿ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಶ್ವಾನಪ್ರಿಯರು ತಾವು ಸಾಕಿದ್ದ ಶ್ವಾನಗಳನ್ನು ಇಲ್ಲಿಗೆ ಕರೆತಂದು ಪ್ರದರ್ಶಿಸಿದರಲ್ಲದೆ, ಸ್ಪರ್ಧೆಗೆ ಒಡ್ಡಿಕೊಂಡರು.
ಸುಮಾರು 22 ತಳಿಯ 200 ನಾಯಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವು. ಪ್ರದರ್ಶನದಲ್ಲಿ ಡ್ಯಾಷೆಂಡ್, ಮುಧೋಳ, ಪೊಮೇರಿಯನ್, ರಯಾಟ್ವಿಲ್ಲರ್, ಡಾಲ್ಮಿಷಿನ್, ಪಿಂಚರ್ಸ್, ಬಾಕ್ಸರ್, ಡಾಬರ್ಮನ್, ಗ್ರೇಟ್ಡೆನ್, ಜರ್ಮನ್ ಶೆಫರ್ಡ್, ಪಗ್, ಲ್ಯಾಪೋ ಅಪ್ಸೋ, ಫಾಕ್ಸ್ಟರಿಯನ್, ಲಾಬ್ರಡಾರ್ ಮತ್ತಿತರ ತಳಿಯ ನಾಯಿಗಳು ಶ್ವಾನಪ್ರೇಮಿಗಳ ಗಮನ ಸೆಳೆದವು.
ತರಬೇತಿ ಪಡೆದ ಪೊಲೀಸ್ ಇಲಾಖೆಯ ಶ್ವಾನಗಳು ತಮ್ಮ ಚಾಕಚಕ್ಯತೆ ಮೆರೆದು ಸೇರಿದ್ದ ಜನರನ್ನು ರಂಜಿಸಿತು. ಪೊಲೀಸ್ ಶ್ವಾನಗಳಾದ ರಾಖಿ, ಗೌರಿ ಮತ್ತು ರಮ್ಯ ಹೆಸರಿನ ಮೂರು ಶ್ವಾನಗಳು ತರಬೇತುದಾರರ ಸೂಚನೆಯಂತೆ ಸೆಲ್ಯೂಟ್ ಹೊಡೆಯುವುದು, ನಿದ್ದೆ ಮಾಡುವುದು, ನೆಲದ ಮೇಲೆ ತೆವಳುವುದು, ರಿಂಗ್ ಒಳಗೆ ಹಾರುವುದು, ಬೊಗಳುವುದು, ಚೆಂಡನ್ನು ಮೇಲಕ್ಕೆ ಎಸೆದರೆ ಕ್ಯಾಚ್ ಹಿಡಿಯುವುದು ಹೀಗೆ ಹಲವು ರೀತಿಯ ಪ್ರದರ್ಶನ ನೀಡಿದವು.
ಬೆಸ್ಟ್ ಡಾಗ್ ಹ್ಯಾಂಡ್ಲರ್ ಪ್ರಶಸ್ತಿ ಅಭಿಷೇಕ್, ಪವನ್, ರಾಹುಲ್ ಕಾಮತ್ ಅವರಿಗೆ ಲಭಿಸಿತು.ಢಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

