ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ
ಸಾಗರ: ಗೋಪಾಲಗೌಡ ಕ್ರೀಡಾಂಗಣದಲ್ಲಿ ರೂರಲ್ ಜೋನ್ ಆಯೋಜಿಸಿರುವ ಸಾಗರ್ ಪ್ರೀಮಿಯರ್ ಲೀಗ್ 20-ಟ್ವೆಂಟಿ ಕ್ರಿಕೆಟಿಗೆ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಪಂದ್ಯಾವಳಿಯ ವಿಜೇತರಿಗೆ ನೀಡುವ ಟ್ರೊಫಿಯನ್ನು ಉಪ ವಿಭಾಗಾಧಿಕಾರಿ ಡಾ.ಬಿ. ಉದಯ್ ಕುಮಾರ್ ಶೆಟ್ಟಿ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು.
ನಿರಂತರ ಪ್ರಯತ್ನವಿದ್ದರೆ ಸಾಧನೆ ಸಾಧ್ಯವಾಗುತ್ತದೆ. ದೈಹಿಕ ಸವಾಲುಗಳ ನಡುವೆ ಸಾಧಿಸಿದ ವಿಲ್ಮಾ ರುಡಾಲ್ಫ್ನಂಥ ಕ್ರೀಡಾಪಟುಗಳಿದ್ದಾರೆ. ಸವಾಲುಗಳನ್ನು ಗೆಲ್ಲುವ, ಸಾಧನೆಯ ಕನಸು ಕಾಣುವ ಹಾಗೂ ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುವ ಸಂಕಲ್ಪ ಅಗತ್ಯ ಎಂದು ಉಪವಿಭಾಗಾಧಿಕಾರಿಗಳು ಹೇಳಿದರು.
ನಗರಸಬೆ ಅಧ್ಯಕ್ಷ ರಾಧಾಕೃಷ್ಣ ಬೇಂಗ್ರೆ, ಕ್ರೀಡೆಗೆ ನಗರಪ್ರದೇಶಗಳಲ್ಲಿ ಸಿಕ್ಕಷ್ಟು ಪ್ರೋತ್ಸಾಹ ಗ್ರಾಮೀಣ ಪ್ರದೇಶದಲ್ಲಿ ಸಿಗುತ್ತಿಲ್ಲ ಎಂದರು. ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್, ಹಿರಿಯ ಕ್ರಿಕೆಟಿಗ ನಾರಾಯಣಪ್ಪ, ಪೇಟೆ ಠಾಣೆ ವೃತ್ತ ನಿರೀಕ್ಷಕ ಮಂಜಪ್ಪ, ಪಂದ್ಯಾವಳಿ ಸಂಘಟಕ ಶ್ರೀನಿವಾಸ್ ಕಾಳೆ, ಕಿರಣ್ಕುಮಾರ್, ಗಣೇಶ್ ಪ್ರಸಾದ್ ಹಾಜರಿದ್ದರು. ಅಂತರರಾಷ್ಟ್ರೀಯ ಅಥ್ಲೆಟ್ ಅರ್ಪಿತಾ ಅವರನ್ನು ಸನ್ಮಾನಿಸಲಾಯಿತು.
ತಾಲೂಕಿನ ವಿವಿಧ ಭಾಗಗಳ 164 ಕ್ರಿಕೆಟಿಗರು 8 ತಂಡಗಳ ಮೂಲಕ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ.
ತಾಲೂಕಿನ ಇತಿಹಾಸ ಪ್ರಸಿದ್ಧ ಸ್ಥಳಗಳ, ಧಾರ್ಮಿಕ ಕ್ಷೇತ್ರಗಳ ಹೆಸರುಗಳನ್ನು ತಂಡಕ್ಕೆ ಇಡುವ ಮೂಲಕ ಪಂದ್ಯಾವಳಿಗೆ ಸ್ಥಳೀಯ ಛಾಪು ಮೂಡಿಸುವ ಪ್ರಯತ್ನ ಸಂಘಟಕರಿಂದ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

