ಶಿವಮೊಗ್ಗ

ಯಜ್ಞಯಾಗಾದಿಗಳು ಕಲ್ಯಾಣಾರ್ಥವಾಗಿ ಮಾತ್ರ

Published On :

ಭದ್ರಾವತಿ: ಯಜ್ಞಯಾಗಾದಿಗಳನ್ನು ಲೋಕ ಕಲ್ಯಾಣಾರ್ಥವಾಗಿ ಮಾಡುವುದಾಗಿ ಸಂಕಲ್ಪ ಮಾಡುತ್ತಾರೆ ವಿನಹ ಮಾಡುವವನಿಗೆ ಕಲ್ಯಾಣವಾಗಲಿ ಎಂದಲ್ಲವೆಂದು ಧರ್ಮ ಜಾಗರಣ ಸಮನ್ವಯ ವಿಭಾಗದ ಪಶ್ಚಿಮ, ದಕ್ಷಿಣಮಧ್ಯ ಕ್ಷೇತ್ರ ಪ್ರಮುಖ್ ಶರದ್ ಡೋಳೆ ತಿಳಿಸಿದರು.
ಪಟ್ಟಣದ ಕನಕ ಮಂಟಪ ಮೈದಾನದಲ್ಲಿ ಭಾನುವಾರ ಧರ್ಮ ಜಾಗರಣ ಸಮನ್ವಯ ಸಮಿತಿ ಏರ್ಪಡಿಸಿದ್ದ ಲೋಕ ಕಲ್ಯಾಣಾರ್ಥ ಸುದರ್ಶನ ಹೋಮ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಮಾತಾಡಿ,
ದೇಶದ ಜನರ ಹೃದಯದಲ್ಲಿ ಭಕ್ತಿ ಭಾವನೆ ಮೂಡಿಸುವ ಉದ್ದೇಶದಿಂದ ಇಂತಹ ಅನೇಕ ಧಾರ್ಮಿಕ ವಿಧಿಗಳನ್ನು ನಡೆಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಭಾರತಮಾತೆಯ ಪೂಜೆ ನಡೆಯುತ್ತದೆಂದು 1901ರಲ್ಲಿ ಹೇಳಿದ್ದ ವಿವೇಕಾನಂದರ ಭಾವಚಿತ್ರವನ್ನೂ ಇಂದು ವೇದಿಕೆಯಲ್ಲಿಡಲಾಗಿದೆ ಎಂದರು.
 ಹಿಂದೂ ವ್ಯಕ್ತಿಯ ಮಾನಸಿಕತೆ ಎಂದೂ ಸ್ವಂತ ಲಾಭದ ಬಗ್ಗೆ ಚಿಂತಿಸುವುದಿಲ್ಲವೆಂದು ಅಖಿಲ ಭಾರತೀಯ ಸಂಚಾಲಕ್, ಕುಟುಂಬ ಪ್ರಭೋದನ್ ಕಜಂಪಾಡಿ ಸುಬ್ರಮಣ್ಯ ಭಟ್ ತಿಳಿಸಿದರು. ವ್ಯಕ್ತಿಯನ್ನು ಬಹುವಚನದಲ್ಲಿ ಪರಿಗಣಿಸಿ ಸಕಲ ಪ್ರಾಣಿಗಳೊಂದಿಗೆ ತನ್ನ ಹಿತವನ್ನು ಚಿಂತಿಸುವುದು ಹಿಂದೂ ಸಂಸ್ಕೃತಿ. ಹೋಮಕ್ಕೆ ಪರಿಸರ ಕಾಪಾಡುವ ಶಕ್ತಿ ಇದೆ. ಇದನ್ನೇ ಭಾರತ ವಿಶ್ವಕ್ಕೆ ಕಲಿಸಿಕೊಟ್ಟಿದ್ದು ಎಂದು ಅವರು ಪ್ರತಿಪಾದಿಸಿದರು. ನಮ್ಮ ದೇಶ ಭಾರತವಾಗೇ ಉಳಿಯಬೇಕು. ನಮ್ಮ ಭಾಷೆ ಸಂಸ್ಕೃತ. ಅದರಿಂದ ಹುಟ್ಟಿದ ಅನೇಕ ಭಾಷೆಗಳು ಸುಸಂಸ್ಕೃತ. ಭಾರತದ ಭಾಷೆಯಲ್ಲಿನ ಸಂಬಂಧವಾಚಕ ಶಬ್ದಗಳು ಭಾವಸಂವೇದಿಯಾಗಿವೆ. ಆದರೆ ನಮ್ಮ ಭಾಷೆಯ ಸಂಸ್ಕೃತಿಯನ್ನು ಹೇಳುವ ತಾಳ್ಮೆ ನಮಗಿಲ್ಲ. ಜೀವನ ಮೌಲ್ಯಗಳಿಗೆ ನಾವು ಶಕ್ತಿ ಕೊಡಬೇಕು ಎಂದು ಅವರು ತಿಳಿಸಿದರು. ಶಿವಸುಬ್ರಮಣ್ಯಾಶ್ರಮದ ತವತ್ತಿರು ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೆಂಕಟರಮಣ ಶೇಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧರ್ಮಜಾಗರಣ ಪ್ರಾಂತ ಪ್ರಮುಖ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಧರ್ಮಜಾಗರಣ ಅರ್ಚಕರ ಸಮಿತಿ ಅಧ್ಯಕ್ಷ ನಾಗರಾಜ್ ಉಪಾಧ್ಯಾಯ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆದರೆ ಗೌರವಾಧ್ಯಕ್ಷ ಕೃಷ್ಣಮೂರ್ತಿ ಸೋಮಯಾಜಿ ಪ್ರಧಾನ ಆಚಾರ್ಯತ್ವದಲ್ಲಿ ಸುದರ್ಶನ ಹೋಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.