ಶಿವಮೊಗ್ಗ

ಸಮಸ್ಯೆ ಪರಿಹಾರಕ್ಕೆ ಸಂಘಟನೆ ಅಗತ್ಯ

Published On :

ಶಿಕಾರಿಪುರ: ರೈತರು ಸಂಘಟಿತರಾಗದಿದ್ದಲ್ಲಿ ವಿದ್ಯುತ್, ಬೆಂಬೆಲ ಬೆಲೆ ಮತ್ತಿತರ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
   ತಾಲೂಕಿನ ಮಲ್ಲೇನಹಳ್ಳಿಯಲ್ಲಿ ರೈತ ಸಂಘ ಹಸಿರು ಸೇನೆ ಹಾಗೂ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯಿಂದ ಉಡುಗಣಿ ಮತ್ತು ತಾಳಗುಂದ ಹೋಬಳಿ ಮಟ್ಟದ ರೈತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಬಾಳ್ವೆ ಅಗತ್ಯ: ರೈತರು ಬಹು ಹಿಂದಿನಿಂದಲೂ ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದು, ಇದರಿಂದಾಗಿ ಎಲ್ಲರ ಜತೆ ಸಹಬಾಳ್ವೆ ನಡೆಸುವುದು ಅಸಾಧ್ಯವಾಗಿದೆ ಎಂದ ಅವರು ಸೋನಿಯಾಗಾಂಧಿ, ಆಡ್ವಾಣಿ, ದೇವೆಗೌಡ ಮೊದಲಾದವರ ರಾಜಕಾರಣಿಗಳ ಬೆಂಬಲಿಗರು ಚುನಾವಣೆಯಲ್ಲಿ ಸತತ ಜಯಗಳಿಸುತ್ತಾ ಬಂದಿದ್ದರೂ, ಇದುವರೆಗೆ ರೈತ ಅಭಿಮಾನಿಗಳು ಮಾತ್ರ ಆಯ್ಕೆಯಾಗಿರುವುದಿಲ್ಲ ಏಕೆ ಎಂದು ಪ್ರಶ್ನಿಸಿದರು.
 ಜಾತಿ ಜಾತಿಗಳ ಮದ್ಯೆ ಒಡಕು ತಂದು ಒಡೆದು ಆಳುವ ನೀತಿಯ ಜತೆಗೆ ಕೇವಲ ಹಣ ಹೆಂಡದಿಂದ ರೈತರನ್ನು ಬಲಿಪಶುಗಳಾಗಿಸಲಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಶಾಶ್ವತ ಪರಿಹಾರ ಸಾಧ್ಯ: ರೈತ ವರ್ಗದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಂಘಟನೆಯಾಗಿದ್ದು, ರೈತರು ಒಗ್ಗಟ್ಟಿನ ಮೂಲಕ ತಮ್ಮ ವಿದ್ಯುತ್, ಬೆಂಬಲ ಬೆಲೆ ಮೊದಲಾದ ಹಲವು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಲು ಸಾಧ್ಯ ಎಂದರು.
  ತಾಲೂಕು ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ ಮಾತನಾಡಿ, ರೈತರು ತಮ್ಮ ಬದುಕಿನ ಹಕ್ಕಿಗಾಗಿ ಹೋರಾಡಬೇಕಾದ ಅನಿವಾರ್ಯತೆಯಿದ್ದು, ಈ ಕಾರ್ಯಕ್ಕೆ ಸಂಘಟನಾತ್ಮಕ ರೂಪ ನೀಡಬೇಕಾಗಿದೆ ಎಂದರು.
ಜಾಗೃತಿ ಅಗತ್ಯ: ರೈತ ಮುಖಂಡ ಬೇಗೂರು ಶಿವಪ್ಪ ಮಾತನಾಡಿ, ಹಾಲಿಗಿಂತ ಅಧಿಕ ಬೆಲೆಗೆ ನೀರು ಮಾರಾಟ ಮಾಡುತ್ತಿರುವ ರಾಜಕಾರಣಿಗಳ ವರ್ತನೆಯಿಂದ ರೈತರು ಸಮಸ್ಯೆ ಅನುಭವಿಸುವಂತಾಗಿದೆ ಎಂದ ಅವರು ಕೇವಲ ಚುನಾವಣಾ ಸಮಯದಲ್ಲಿ ಬಣ್ಣದ ಮಾತು, ಆಶ್ವಾಸನೆಗಳಿಗೆ ಮರುಳಾಗಿ ರೈತರು ಪದೇ ಪದೇ ಮೋಸಹೋಗುತ್ತಿದ್ದು, ಈ ಬಾರಿ ಪುನರಾವರ್ತನೆಯಾಗದಂತೆ ಜಾಗೃತರಾಗಬೇಕಾಗಿದೆ ಎಂದರು.
  ಸಮಾವೇಶದಲ್ಲಿ ಬರಗಾಲದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ, ವಿದ್ಯುತ್ ಅಸಮರ್ಪಕ ವಿತರಣೆ ಹಾಗೂ ತಾರತಮ್ಯ ನೀತಿ ಖಂಡಿಸಿ, ರೈತರ ಪಂಪ್ಸೆಟ್ಗೆ ತ್ರೀಫೇಸ್ ವಿತರಣೆ, ಕುಡಿಯುವ ನೀರಿಗೆ ವಿದ್ಯುತ್ ವಿತರಣೆ, ಇಂಡೀಕರಣದಿಂದ ದರ್ಖಸ್ತುದಾರ ಬಗರ್ ಹುಕುಂ ರೈತರಿಗೆ ಮರಣಶಾಸನ ರಚಿಸಿರುವುದನ್ನು ಖಂಡಿಸಿ ತಿದ್ದುಪಡಿಗೊಳಿಸಲು, ಗೋಶಾಲೆ ಮೇವು ಬ್ಯಾಂಕ್ ಸ್ಥಾಪನೆ, ರೈತರ ಜಾನುವಾರುಗಳಿಗೆ ಉಚಿತ ಮೇವು, ಸಂಪೂರ್ಣ ಸಾಲ ಮನ್ನಾ, ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮೊದಲಾದ ಹಲವು ಬೇಡಿಕೆ ಬಗ್ಗೆ ಹಕ್ಕತ್ತಾಯ ಮಂಡಿಸಲಾಯಿತು.
  ಅಧ್ಯಕ್ಷತೆಯನ್ನು ಮಲ್ಲೇನಹಳ್ಳಿ ಘಟಕದ ಅಧ್ಯಕ್ಷ ಶ್ರೀಪತಿ ಆಚಾರ್ ವಹಿಸಿದ್ದರು. ರಾಜ್ಯ ಸಂಚಾಲಕ ವಸಂತಕುಮಾರ್, ಜಿಲ್ಲಾ ಕೋಶಾಧ್ಯಕ್ಷ ಷಣ್ಮುಖಪ್ಪ, ಕಾರ್ಯದರ್ಶಿ ಮಹಾಂತಪ್ಪ, ಮೋಹನರಾವ್, ರಾಜ್ಯ ಯುವ ಮುಖಂಡ ಎ. ಇಂದೂಧರ ಮೊದಲಾದರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.