ಮದ್ಯದಂಗಡಿ ನಿಷೇಧಕ್ಕೆ ಸ್ತ್ರೀಶಕ್ತಿ ಸಂಘಟನೆ ಆಗ್ರಹ
ಸೊರಬ: ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಮದ್ಯದ ಅಂಗಡಿ ನಮಗೆ ಬೇಡ ಎಂದು ತಾಲೂಕು ಕುಣೆತೆಪ್ಪ ಗ್ರಾಮದ ಸ್ತ್ರೀಶಕ್ತಿ, ಸ್ವಸಹಾಯ ಸಂಘದವರು ಒತ್ತಾಯಿಸಿದ್ದಾರೆ.
ಪಟ್ಟಣದ ಅಬ್ಕಾರಿ ಇಲಾಖೆ ಕಚೇರಿ ಎದುರು ಸಾರಾಯಿ ನಿಷೇಧಕ್ಕೆ ಆಗ್ರಹಿಸಿದ ಅವರು, ಪ್ರಸ್ತುತ ಗ್ರಾಮಗಳಿಗೆ 5- 6 ಸಾರಾಯಿ ಅಂಗಡಿಗಳಿಗೆ ಇಲಾಖೆ ಅವಕಾಶ ನೀಡಿ, ಇಲ್ಲಿನ ಸ್ವಚ್ಛ, ನೆಮ್ಮದಿ ಬದುಕನ್ನು ಹಾಳುಗೆಡವಲಾಗಿದೆ. ಕುಡಿತಕ್ಕೆ ಮನೆಯ ಸಮೀಪದಲ್ಲಿಯೇ ಅವಕಾಶವಿರುವುದರಿಂದ ಗಂಡಸರು ದಿನದ 24 ತಾಸು ಸಹಾ ಕುಡಿಯುತ್ತಲೆ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ಕುಡಿದು ಗಲಾಟೆ ಮಾಡುತ್ತಾರೆ, ಹೆಂಡತಿ, ಮಕ್ಕಳನ್ನು ಹೊಡೆಯುವುದು, ಮನೆಯಲ್ಲಿ ಸಂಗ್ರಹಿಸಿಟ್ಟ ಪುಡಿಗಾಸು, ದವಸ, ಧಾನ್ಯಕ್ಕೂ ಕುತ್ತು ತರುತ್ತಿದ್ದಾರೆ.
ತಮ್ಮ ಆರೋಗ್ಯವನ್ನು ಹಾಳುಗೆಡವಿಕೊಳ್ಳುವುದೇ ಅಲ್ಲದೆ ಗ್ರಾಮದ ಆರೋಗ್ಯವನ್ನು ಸಹಾ ಹೊಲಸೆಬ್ಬಿಸಿದ್ದಾರೆ. ಹಾಗಾಗಿ ಕೂಡಲೆ ಗ್ರಾಮದಲ್ಲಿ ಸಂಪೂರ್ಣ ಮದ್ಯದ ಅಂಗಡಿ ಮುಚ್ಚಬೇಕು, ಇಲ್ಲದಿದ್ದರೆ ನಾವು ತಾಲೂಕು ಕೇಂದ್ರದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ. ಸಂಘದ ಶಶಿಕಲಾ, ಮಮತಾ, ಪೂರ್ಣಿಮ, ಜಯಮ್ಮ, ಲಲಿತಮ್ಮ, ಗೀತಾ, ಅನಸೂಯ, ಕಮಲಮ್ಮ, ಬಂಗಾರಮ್ಮ, ಶ್ವೇತಾ, ಲಕ್ಷ್ಮಮ್ಮ, ರೇಣುಕಾ, ಸಾಕಮ್ಮ, ನೇತ್ರಾ, ಗೀತ, ಗದಿಗೆಮ್ಮ, ಹನುಮಂತಮ್ಮ, ಸಾಕಮ್ಮ, ಸುಶೀಲಮ್ಮ, ಶಾಂತಮ್ಮ, ಇನ್ನೂ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

