ಶಿವಮೊಗ್ಗ

ದೇಶಾಭಿಮಾನ ಬೆಳೆಯಲು ಇತಿಹಾಸ ಅಧ್ಯಯನ ಅಗತ್ಯ

Published On :

ಶಿವಮೊಗ್ಗ: ಪ್ರಸ್ತುತ ಇತಿಹಾಸದ ಪಠ್ಯಗಳಲ್ಲಿ ನೀಡಲಾಗಿರುವ ಅಂಕಿ ಅಂಶಗಳು ಗೊಂದಲದಿಂದ ಕೂಡಿದ್ದು, ಅದನ್ನೇ ಮಕ್ಕಳಿಗೆ ಬೋಧಿಸಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಅದನ್ನೇ ಅಧ್ಯಯನ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಡಾ.ಅ. ಸುಂದರ ಆತಂಕ ವ್ಯಕ್ತಪಡಿಸಿದರು.
 ಕಮಲಾ ನೆಹರು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಇತಿಹಾಸ ಚೇತನ ವೇದಿಕೆ ಮತ್ತು ಇತಿಹಾಸ ಕಮ್ಮಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತಿಹಾಸವನ್ನು ಪ್ರಶ್ನೆ ಹಾಕಿಕೊಂಡು ಅಧ್ಯಯನ ಮಾಡಿದಾಗ ಹೆಚ್ಚು ವಿಷಯಗಳನ್ನು ತಿಳಿಯಲು ಸಾಧ್ಯ ಎಂದರು.
 ಪ್ರಸ್ತುತ ನಾಗರೀಕತೆಯನ್ನು 10 ಸಾವಿರ ವರ್ಷಗಳ ಹಿಂದೆಯೇ ಶೂದ್ರರು ಹುಟ್ಟಿದ್ದು, ಇತಿಹಾಸಕ್ಕೆ ಅವರ ಕೊಡುಗೆ ಅಪಾರ ಎಂದ ಅವರು, ನಿಜವಾದ ದೇಶಾಭಿಮಾನ ಬೆಳೆಯಬೇಕಾದರೆ ನಮ್ಮ ದೇಶದ ಇತಿಹಾಸ ತಿಳಿಯುವುದು ಮುಖ್ಯ ಎಂದರು.
ಉತ್ತಮ ಬೋಧನೆ ಅಗತ್ಯ: ಶಿರಸಿಯ ಇತಿಹಾಸ ಚಿಂತಕ ಡಾ. ಅನಂತ ಕೃಷ್ಣಶಾಸ್ತ್ರಿ, ಕೆಲ ಶಾಲಾ-ಕಾಲೇಜುಗಳಲ್ಲಿ ಇತಿಹಾಸ ಬೋಧಿಸುವವರೇ ನರ ಸತ್ತವರಂತೆ ಇರುತ್ತಾರೆ. ಇತಿಹಾಸ ಎಂಬುಂದೇ ಸತ್ತವರ ಕಥೆ. ಇದನ್ನು ಭೋಧನೆ ಮಾಡುವವರು ಸತ್ತವರಂತಿದ್ದರೆ ವಿದ್ಯಾರ್ಥಿಗಳ ಕಥೆ ಏನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
 ಇತಿಹಾಸ ಅಧ್ಯಯನ ಮಾಡುವುದಕ್ಕೆ ಸ್ಫೂರ್ತಿ ಮುಖ್ಯ. ನಂತರ ಇತಿಹಾಸದ ಅಧ್ಯಯನದಲ್ಲಿ ತೊಡಗಬೇಕು  ಎಂದ ಅವರು, ನಮ್ಮ ದೇಶದಲ್ಲಿ ಕಾವಿಗೆ ಭದ್ರಬುನಾದಿ ಇದೆ. ಅದಕ್ಕೂ ಕೂಡ ಒಂದು ಇತಿಹಾಸವಿದೆ ಎಂದರು.
  ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಐಡಿ ವಿಭಾಗದ ಡಿಐಜಿ ಎಸ್. ಮುರುಗನ್ ಮಾತನಾಡಿ, ಇತಿಹಾಸವನ್ನು ಎಲ್ಲಾ ವರ್ಗದ ಜನರೂ ಅಧ್ಯಯನ ಮಾಡುವುದು ಸೂಕ್ತ, ಇದರಿಂದ ಇತಿಹಾಸದ ಮಹತ್ವ ತಿಳಿಯುತ್ತದೆ. ಇತಿಹಾಸವನ್ನು ಇಂತವರೇ ಅಧ್ಯಯನ ಮಾಡಬೇಕು ಎಂದೇನು ಇಲ್ಲ. ಇತಿಹಾಸದ ಬಗ್ಗೆ ಅಸಕ್ತಿ ಇರುವ ಯಾರಾದರೂ ಇತಿಹಾಸದ ಸಂಶೋಧನೆ ಮಾಡಬಹುದು ಎಂದರು.
 ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಇತಿಹಾಸ ಚಿಂತನ ವೇದಿಕೆ ಸದಸ್ಯ ಡಾ. ಸಾಮಕ್, ನಿಧಿನ್ ಒಲೇಕರ, ಪ್ರಾಂಶುಪಾಲರಾದ ಆರ್. ಕೃಷ್ಣವೇಣಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.