ಶಿವಮೊಗ್ಗ

ದಣಿದ ಹೃದಯಕ್ಕೆ ಹನಿಗವನ ಚೈತನ್ಯ

Published On :

ಜೋಗ್‌ಫಾಲ್ಸ್: ದುಡಿದು ದಣಿದ ಹೃದಯಗಳಿಗೆ ಹನಿಗವನ ಚೈತನ್ಯ ನೀಡಲು ಸಾಧ್ಯ ಎಂದು ಶಿರಾಳಕೊಪ್ಪದ ಎಂ.ಎನ್. ಪಿಕಲ್‌ನ ಮಾಲೀಕ ರಾಮಚಂದ್ರ ಶ್ರೇಷ್ಠಿ ತಿಳಿಸಿದರು.
 ಅವರು ಕಾರ್ಗಲ್‌ನ ರಾಮಮಂದಿರದಲ್ಲಿ ಮ.ರಾ. ಹೆಗಡೆ ಸಂಪ ರಚಿಸಿದ ನಾಲ್ವಡಿ- ನಲ್ನುಡಿ ಹನಿಗವನಗಳ ಸಂಗ್ರಹದ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದರು.
 ಹನಿಗವನ ಬಿಡುಗಡೆ ಮಾಡಿದ ಶಿವಮೊಗ್ಗ ಸರ್ಕಾರಿ ನೌಕರರ ಸಹಕಾರ ಬ್ಯಾಂಕ್ ನಿರ್ದೇಶಕ ಜಿ.ಎಸ್. ಅನಂತ್ ಮಾತನಾಡಿ, ಹಿಂದಿನಿಂದಲೂ ಸಾಹಿತ್ಯಿಕ ಮೌಲ್ಯ ಪ್ರಾಮುಖ್ಯತೆ ಪಡೆದಿದ್ದು, ಈಗಲೂ ಅದು ಮುಂದುವರೆದಿದೆ. ಸಾಹಿತ್ಯಿಕ ಜ್ಞಾನ ವೃದ್ಧಿಸಲು ಧ್ಯಾನ, ಯೋಗ ಅತಿ ಅವಶ್ಯಕ ಎಂದರು.
  ಕತೆ, ಕವನ ರಚಿಸುವುದು ಸುಲಭದ ಮಾತಲ್ಲ. ಅದರಲ್ಲಿ ಒಳಾರ್ಥ, ಹೊರಾರ್ಥಗಳು ಅಡಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಶೈಲಿ ಬರಹಗಾರರನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿದರು.
 ಬರಹಗಾರ ಮ.ರಾ. ಹೆಗಡೆ ಸಂಪ ಮಾತನಾಡಿ ತಮ್ಮ ಜೀವನದ ಸುಖ, ದುಃಖ, ದುಗುಡ, ದುಮ್ಮಾನಗಳನ್ನು ಹನಿಗವನಗಳ ಮೂಲಕ ತಿಳಿಸಲು ಪ್ರಯತ್ನಿಸಲಾಗಿದೆ. ಕಳೆದ 10 ವರ್ಷಗಳ ಹಿಂದೆ ಕಾವ್ಯತೋರಣ ಎಂಬ ಭಜನೆ, ಲಾವಣಿ, ಹಾಡುಗಳ ಪುಸ್ತಕದ ನಂತರ ಇದೀಗ ನಾಲ್ವಡಿ- ನಲ್ನುಡಿ ಕವನ ಸಂಕಲನವನ್ನು ರಚಿಸಿದ್ದು, ಇದನ್ನು ರಾಮಚಂದ್ರ ಶ್ರೇಷ್ಠಿ ದಂಪತಿಗಳಿಗೆ ಅರ್ಪಿಸಿರುವುದಾಗಿ ತಿಳಿಸಿದರು.
 ಮಂಜುಳಾ ರಾಮಚಂದ್ರ ಶ್ರೇಷ್ಠಿ, ಯುವ ಬರಹಗಾರ ರಾಘವೇಂದ್ರ ಶರ್ಮ ಮೊದಲಾದವರು ಹಾಜರಿದ್ದರು.
 ಶ್ರೀಪಾದ್.ಜೆ. ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಪುಸ್ತಕ ಬಿಡುಗಡೆಗೆ ಸಹಕರಿಸಿದ ಎನ್.ಎನ್. ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು.
 ಉಮೇಶ್ ಭಟ್ ಅವರ ವೇದಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅನಂತಾಚಾರ್ಯ ಪ್ರಾರ್ಥಿಸಿ, ಭವಾನಿ ಸ್ವಾಗತಿಸಿದರು. ಎಂ.ಎಸ್. ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹು.ಭಾ.ಅಶೋಕ್ ನಿರೂಪಿಸಿದರು. ಅನು ಶಿವರಾಂ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.