ಸಾಹಿತ್ಯ ಸಮಾಜದ ಸ್ವಾಸ್ಥ್ಯದ ಅಸ್ತ್ರ
ಸಾಗರ: ಸಾಹಿತ್ಯ ಸಮಾಜದ ಸ್ವಾಸ್ಥ್ಯ ಕಾಪಾಡುವ ಅಸ್ತ್ರ ಎಂದು ಬೆಂಗಳೂರಿನ ಜೋಷಿ ಫೌಂಡೇಶನ್ ಮುಖ್ಯಸ್ಥ ದಿನೇಶಕುಮಾರ್ ಜೋಷಿ ಹೇಳಿದರು.
ತಾಲೂಕು ಕಸಾಪ ಪಟ್ಟಣದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಚಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಓರೆಕೋರೆಗಳನ್ನು ತಿದ್ದುವ ಶಕ್ತಿ ಸಾಹಿತ್ಯಕ್ಕೆ ಇದೆ ಎಂದು ಅಭಿಪ್ರಾಯಪಟ್ಟರು.
ಭಾಷೆ ನಮ್ಮ ಭಾವನೆಗಳನ್ನು ಅಭಿವ್ಯಕ್ತಿಸುವ ಮಾರ್ಗವಾಗಿದ್ದು, ಸಾಹಿತ್ಯ ಭಾಷೆಯ ಮೂಲಕ ಬೆಳೆದಿದೆ. ಭಾಷೆಗೆ ಯಾವುದೇ ಕಟ್ಟುಪಾಡುಗಳಿಲ್ಲ. ಭಾಷೆಯ ಮೂಲಕ ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ಈ ದಿಸೆಯಲ್ಲಿ ಕನ್ನಡ ಭಾಷೆಗೆ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.
ಪತ್ರಕರ್ತ ಜಿ. ನಾಗೇಶ್ ಅವರ ಅಗಳು ಕವನ ಸಂಕಲನ ಬಿಡುಗಡೆ ಮಾಡಿದ ಸಾಹಿತಿ ಡಾ.ನಾ. ಡಿಸೋಜ, ಸಮಾಜದಲ್ಲಿನ ಆಗುಹೋಗು, ಪರಿಸರದ ಮೇಲಿನ ದೌರ್ಜನ್ಯ, ನಮ್ಮ ನಡುವಿನ ಶ್ರಮಿಕರ ಸಂಕಷ್ಟಮಯ ಬದುಕಿನ ಕುರಿತು ಲೇಖಕರು ಇಲ್ಲಿ ಬೆಳಕು ಚೆಲ್ಲಿದ್ದಾರೆ.
ದಲಿತರು, ಪೌರ ಕಾರ್ಮಿಕರು, ವೇಶ್ಯೆಯರ ದಯನೀಯ ಬದುಕು, ರೈತ ಆತ್ಮಹತ್ಯೆ, ಸರ್ಕಾರದ ಬಗೆಗಿನ ನಿರ್ಲಕ್ಷ್ಯ, ಡಾಂಬಿಕತನ ಮತ್ತಿತರ ಜ್ವಲಂತ ಸಮಸ್ಯೆಗಳು ಕವಿ ಮನಸ್ಸನ್ನು ಕಾಡಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜದ ಪಾತ್ರ ಏನು ಎನ್ನುವ ಪ್ರಶ್ನೆಗಳು ಕಾಣಬಹುದು.
ನಮ್ಮದಾಗಬೇಕು: ಪುಸ್ತಕವೊಂದು ಮನೆಯಲ್ಲಿ ಹೊಚ್ಚಹೊಸದಾಗಿಯೇ ಉಳಿಯುವುದನ್ನು ಮೆಚ್ಚಬೇಕಾಗಿಲ್ಲ. ಅದು ಕೊಳೆಯಾಗಬೇಕು, ಹರಿಯಬೇಕು. ಓದಿನ ಮೂಲಕ ಕವಿಯ ಭಾವಗಳನ್ನು ಧನಾತ್ಮಕವಾಗಿ ನಮ್ಮದಾಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ, ಲೇಖಕ ಜಿ. ನಾಗೇಶ್ ಹಾಜರಿದ್ದರು. ನಂತರ ಶ್ರೀ ಗಾಯತ್ರಿ ನಾಟ್ಯ ಮಂದಿರ ತಂಡದಿಂದ ಭರತನಾಟ್ಯ, ತೇಜಸ್ವಿ ತಬಲ ವಿದ್ಯಾಲಯದಿಂದ ವಾದ್ಯ ವೈವಿಧ್ಯ, ಪರಿಣತಿ ಕಲಾಕೇಂದ್ರದಿಂದ ಆಧುನಿಕ ನೃತ್ಯ, ವಸುಧಾ ಶರ್ಮ ಮತ್ತು ತಂಡದವರಿಂದ ಸುಗಮ ಸಂಗೀತ ಹಾಗೂ ನಾಟ್ಯತರಂಗ ತಂಡದಿಂದ ಅಷ್ಟಲಕ್ಷ್ಮೀ ನೃತ್ಯ ರೂಪಕ ಪ್ರದರ್ಶನ ಕಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

