ಜನಜೀವನ ಕ್ರಮೇಣ ಸಹಜ ಸ್ಥಿತಿಗೆ
ಭದ್ರಾವತಿ: ತಮಿಳು ಚಲನಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಪೊಲೀಸರು ವಿಧಿಸಿದ್ದ ನಿಷೇದಾಜ್ಞೆಯನ್ನು ಸೋಮವಾರ ಮಧ್ಯಾಹ್ನ ಹಿಂಪಡೆದಿದ್ದು ಜನಜೀವನ ಕ್ರಮೇಣ ಸಹಜ ಸ್ಥಿತಿಗೆ ಹಿಂದಿರುಗುತ್ತಿದೆ. ಕಲಂ 144ರನ್ವಯ ಪ್ರತಿಬಂಧಕಾಜ್ಞೆ ವಿಧಿಸಿದ್ದರೂ ಪೊಲೀಸರು ಶನಿವಾರದಿಂದ ಸೋಮವಾರದವರೆಗೆ ನಗರದಲ್ಲಿ ಒಂದು ರೀತಿಯ ಕರ್ಫ್ಯೂ ವಿಧಿಸಿದಂತೆ ನಡೆದುಕೊಂಡಿದ್ದು ಸಾರ್ವಜನಿಕರಲ್ಲಿ ಸೋಜಿಗ ಮತ್ತು ಬೇಸರವನ್ನುಂಟುಮಾಡಿತು.
ಸೋಮವಾರ ಬೆಳಗ್ಗೆಯೂ ಪಟ್ಟಣದಲ್ಲಿ ಹಾಲು ಸರಬರಾಜಾಗಿಲ್ಲ. ಹಾಲಪ್ಪ ವೃತ್ತದಲ್ಲಿ ಸೌತೆಕಾಯಿ ಮಾರಾಟ ಮಾಡುವವರನ್ನು ಮನೆಗೆ ಕಳುಹಿಸಿದರು.
ಪೊಲೀಸರು, ಬ್ಯಾಂಕ್‌ಗಳನ್ನು ಕಾರ್ಯನಿರ್ವಹಿಸಲು ಬಿಡಲಿಲ್ಲ. ಶಾಲೆಗಳಿಗೆ ಮೊದಲೇ ರಜೆ ಘೋಷಿಸಲಾಗಿತ್ತು. ಪರಸ್ಥಳದಿಂದ ಬಂದವರು ಪಟ್ಟಣದೊಳಗೆ ಬಸ್‌ಗಳು ಬಾರದೆ ಹೊರವಲಯದಿಂದ ಮನೆಗೆ ತಲುಪಲು ಹರಸಾಹಸ ಮಾಡಬೇಕಾಯಿತು.
ಪಟ್ಟಣಕ್ಕೆ ದಿನಪತ್ರಿಕೆಗಳನ್ನು ಸರಬರಾಜು ಮಾಡುತ್ತಿದ್ದ ವಾಹನಗಳನ್ನು ಸಹ ಬಿಡದೆ ಪೊಲೀಸರು ಹಿಂದಕ್ಕೆ ಕಳಿಸಿದ್ದರಿಂದ ಕೆಲವು ವಾರ್ತಾ ಪತ್ರಿಕೆಗಳನ್ನು ಓದುಗರಿಗೆ ತಲುಪಿಸಲಾಗಲಿಲ್ಲ.
ನಿಷೇದಾಜ್ಞೆ ಸಡಿಲಿಸದರೂ ಸಹಜ ಸ್ಥಿತಿಗೆ ಬರಲು ಸಂಜೆ ನಾಲ್ಕು ಗಂಟೆಯಾಯಿತು. ಸರಿಯಾದ ಪೊಲೀಸ್ ಪ್ರಕಟಣೆ ಇಲ್ಲದೆ ಸಾರ್ವಜನಿಕರು ಸ್ಪಲ್ಪ ಹಿಂಜರಿಕೆಯಿಂದಲೇ ಅಂಗಡಿಗಳನ್ನು ತೆಗೆಯುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

