ರಕ್ತದಾನದಿಂದ ಅನ್ಯರ ಜೀವ ರಕ್ಷಣೆ ಸಾಧ್ಯ: ವೆಂಕಟೇಶ್
ಶಿಕಾರಿಪುರ: ಹಸಿದವರಿಗೆ ಅನ್ನ ನೀಡುವ ಮೂಲಕ ಆತನ ಹಸಿವನ್ನು ಹೋಗಲಾಡಿಸಬಹುದು. ಆದರೆ ಮರಣದ ಅಂತಿಮ ಘಟ್ಟದಲ್ಲಿರುವ ವ್ಯಕ್ತಿಯ ಜೀವವನ್ನು ಉಳಿಸುವುದು ಅಸಾಧ್ಯವಾಗಿದ್ದು, ರಕ್ತದಾನದ ಮೂಲಕ ಕೆಲ ವ್ಯಕ್ತಿಗಳನ್ನಾದರೂ ಬದುಕಿಸುವ ಸಾಮರ್ಥ್ಯವನ್ನು ಮನುಷ್ಯ ಹೊಂದಿದ್ದಾನೆ ಎಂದು ಇಲ್ಲಿನ ಪುರಸಭೆ ಸದಸ್ಯ ಕೆ. ವೆಂಕಟೇಶ್ ಹೇಳಿದರು.
ಪಟ್ಟಣದ ಸವಿತಾ ಸಮಾಜ, ಸವಿತಾ ಯುವಕ ಸಂಘ, ಸವಿತಾ ವಿವಿಧೋದ್ದೇಶ ಸಹಕಾರ ಸಂಘ, ಸವಿತಾ ಕ್ರಿಕೇಟರ್ಸ್ ವತಿಯಿಂದ ಬುಧವಾರ ಜಯನಗರದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತ ಪರೀಕ್ಷೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಸವಿತಾ ಯುವಕ ಸಂಘದ ಸದಸ್ಯರು ಕ್ರಿಕೆಟ್ ಆಟದ ಮೂಲಕ ಪಡೆದ ಬಹುಮಾನದ ರು. 3,000 ವನ್ನು ರಕ್ತದಾನದಂತಹ ಕಾರ್ಯಕ್ಕೆ ಸದ್ವಿನಿಯೋಗಿಸಿದ್ದಕ್ಕೆ ಶ್ಲಾಘಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಪಟ್ಟಣದ ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ. ಶ್ರೀನಿವಾಸ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ರಘು ವಿ ಮಾತನಾಡಿದರು. ವಿ. ರಾಮಣ್ಣ, ಹುಚ್ರಾಯಪ್ಪ, ಸುದರ್ಶನ್, ಡಾ. ಬಸವ ಪುಲಾಲ್, ಡಾ. ವೆಂಕಟೇಶ್, ಈಶ್ವರಪ್ಪ, ಟಿ. ಶ್ರೀನಿವಾಸ್, ತಿಮ್ಮಾರೆಡ್ಡಿ, ಸತ್ಯನಾರಾಯಣ್, ಸುಂದರರಾಜ್,ಈರೇಶ್ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

