ಶಿವಮೊಗ್ಗ

ತುಂಬಿದ ತುಂಗೆಯಲ್ಲಿ ಅನಾವಿ ಸಾಹಸ

Published On :

ಶಿವಮೊಗ್ಗ: ವಿಪರೀತ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ನಗರದ ಯುವ ಸಾಹಸಿ ಅ.ನಾ. ವಿಜಯೇಂದ್ರ ಸಾಹಸ ಮೆರೆದರು.
ಹೊಸ ಸೇತುವೆಯಿಂದ ಬೆಕ್ಕಿನಕಲ್ಮಠದವರೆಗೆ ಗಾಳಿತುಂಬಿದ ಟ್ಯೂಬ್ ನಲ್ಲಿ ತೇಲಿ ಬಂದರು. ಅವರಿಗೆ ರಾಯಲ್ ಮಾಧವಚಾರ್ ಮತ್ತು ಕ್ರಾಂತಿದೀಪ ಮಂಜುನಾಥ್ ಸಹಾಯಹಸ್ತ ನೀಡಿದ್ದರು.
 ಈ ಹಿಂದಿನ ವರ್ಷಗಳಲ್ಲೂ ಪರಿಸರ ಜಾಗೃತಿ, ಸ್ವಚ್ಛತಾ ತುಂಗಾನದಿ ಎಂಬ ಘೋಷವಾಕ್ಯದಡಿ ತುಂಬಿದ ತುಂಗೆಯಲ್ಲಿ ತೇಲಿ ಜಾಗೃತಿ ಮೂಡಿಸಿದ್ದರು.
ನದಿ ರಭಸವಿದೆ: ತಮ್ಮ ಸಾಹಸ ಚಟುವಟಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಹಿಂದೆಗಿಂತ ಈ ಬಾರಿ ತುಂಗೆ ರಭಸದಿಂದ ಹರಿಯುತ್ತಿದ್ದಾಳೆ, ತಡೆಗೋಡೆಯ ಕಾಮಗಾರಿ ಪರಿಣಾಮದಿಂದಾಗಿ ರಭಸದಿಂದ ಹರಿಯುತ್ತಿದೆ. ನದಿಯ ದಡದ ಪಕ್ಕದಲ್ಲಿ ವಾಸಿಸುವ ಜನರ ಈಗಲೇ ಎಚ್ಚರಿಕೆ ವಹಿಸಿದರೆ ಒಳ್ಳೆಯದು, ನೀರಿನ ಸೆಳೆತಕ್ಕೆ ಈ ಬಾರಿ ಹೊಸ ಸೇತುವೆಯಿಂದ ಮಂಟಪಕ್ಕೆ ಬರಲಾಗದೆ ಬೆಕ್ಕಿನ ಬಳಿ ದಡ ಸೇರಿದೆ ಎಂದು ವಿವರಿಸಿದರು.
ಅ.ನಾ. ವಿಜಯೇಂದ್ರ ಅವರು ಯೂತ್ ಹಾಸ್ಟೆಲ್ ಅಸೋಸಿಯೇಷನ್, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.