ಶಿವಮೊಗ್ಗ

ಇಂದಿನಿಂದ ಪದವಿ ಕಾಲೇಜಿನ ಪ್ರವೇಶ

Published On :

ಸಾಗರ: ನೂತನವಾಗಿ ಆರಂಭಗೊಳ್ಳಲಿರುವ ಪದವಿ ಕಾಲೇಜಿನ ಪ್ರವೇಶಾತಿ ಜು. 5 ರಿಂದ ಪ್ರಾರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಕುವೆಂಪು ವಿವಿ ಸಂಯೋಜನಾ ಸಮಿತಿ ಸ್ಥಳ ಪರಿಶೀಲನೆ ನಡೆಸಿತು.
 ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಂಯೋಜನಾ ಸಮಿತಿ ಅಧ್ಯಕ್ಷ ಪ್ರೊ. ಟಿ.ಆರ್. ಮಂಜುನಾಥ್, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕಟ್ಟಡ ಸಂಯುಕ್ತ ಪದವಿ ಕಾಲೇಜು ಆರಂಭಕ್ಕೆ ಸೂಕ್ತವಾಗಿದೆ. ಪ್ರಥಮ ಹಂತದಲ್ಲಿ ಪ್ರಥಮ ವರ್ಷದ ಬಿ.ಎ. ಹಾಗೂ ಬಿ.ಕಾಂ. ತರಗತಿಗಳನ್ನು ಪ್ರಾರಂಭಿಸಲು ಅಗತ್ಯವಾದ ಕೊಠಡಿಗಳು ಕಾಲೇಜಿನಲ್ಲಿ ಲಭ್ಯವಿದೆ.
ಶಿಫಾರಸ್ಸು: ಪದವಿ ನೀಡುವ ಜವಾಬ್ದಾರಿ ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಬರುವುದರಿಂದ ಅಗತ್ಯ ಸೌಲಭ್ಯಗಳಿರುವ ಬಗ್ಗೆ ವಿವಿಗೆ ಮಾಹಿತಿ ನೀಡಲಾಗುವುದು. ಕಾಲೇಜಿಗೆ ಬೇಕಾದ ಬೋಧಕ ಹಾಗೂ ಬೋಧಕೇತರ ವರ್ಗವನ್ನು ವರದಿಯಾಧರಿಸಿ ಸರ್ಕಾರ ತುಂಬಲಿದೆ. ಹೊಸ ಕಾಲೇಜು ಆಗಿರುವುದರಿಂದ ಅತಿಥಿ ಉಪನ್ಯಾಸಕರ ಜೊತೆ ಎಲ್ಲಾ ವಿಭಾಗಕ್ಕೂ ಓರ್ವ ಖಾಯಂ ಉಪನ್ಯಾಸಕರನ್ನು ನೇಮಕ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಪ್ರಸ್ತಾವನೆ: ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ.ಅಶೋಕ ಡಿ. ರೇವಣಕರ್, ಸರ್ಕಾರಕ್ಕೆ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಬಿ.ಎಂ. ಪದವಿ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಥಮ ಹಂತದಲ್ಲಿ ಬಿ.ಎ., ಬಿ.ಕಾಂ. ತರಗತಿ ಪ್ರಾರಂಭಿಸಲು ಅನುಮತಿ ಸಿಕ್ಕಿದೆ. ಕಾಲೇಜಿನ ಪ್ರವೇಶಾತಿ ಜು. 5 ರಿಂದ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ನೂತನ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಮೂಲಕ ಕಾಲೇಜಿನ ಪ್ರಗತಿಗೆ ಸಹಕಾರ ನೀಡಬೇಕು ಎಂದರು. ಕುವೆಂಪು ವಿ.ವಿ. ವಿಜ್ಞಾನ ವಿಭಾಗದ ಪ್ರೊ. ವೆಂಕಟೇಶ್, ಗ್ರಂಥಾಲಯ ವಿಭಾಗದ ಪ್ರೊ. ಬೀರಾದಾರ್, ಎಂಬಿಎ ವಿಭಾಗದ ಡಾ.ಎಚ್.ಎನ್. ರಮೇಶ್, ಸೂಪರಿಟೆಂಡೆಂಟ್ ನಾಗರಾಜ್, ಜಗನ್ನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.