ಶಿವಮೊಗ್ಗ

ಕಾಂಜಿಪೀಂಜಿ ಲವ್ ಚಿತ್ರೀಕರಣ

Published On :

ಶಿವಮೊಗ್ಗ: ಇದೇ ಮೊಟ್ಟಮೊದಲ ಬಾರಿಗೆ ಸಿನಿಮಾ ಚಿತ್ರವೊಂದಕ್ಕೆ ನಗರದ ಕುವೆಂಪು ರಂಗಮಂದಿರದ ಹೇಮಾಂಗಣ ಸಾಕ್ಷಿಯಾಯಿತು. ಭದ್ರಾವತಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಿಸುತ್ತಿರುವ ಕಾಂಜಿಪೀಂಜಿ ಲವ್ ಚಿತ್ರದ ಚಿತ್ರೀಕರಣ ವಿದ್ಯುಕ್ತವಾಗಿ ಆರಂಭವಾಯಿತು.
ನಾಯಕನಾಗಿ ಭದ್ರಾವತಿ ಮೂಲದ ಡ್ಯಾನ್ಸರ್ ಗಣೇಶ್, ನಾಯಕಿಯಾಗಿ ಬೆಂಗಳೂರಿನ ದೀಪಿಕಾ ದಾಸ್ ಅಭಿನಯಿಸಲಿದ್ದು, ಭದ್ರಾವತಿಯ ರಾಮಕೃಷ್ಣ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿಯೂ ಇವರದ್ದೇ ಆಗಿದೆ.
ಸ್ಥಳೀಯ ಪ್ರತಿಭೆಗಳಿಗೆ ಈ ಚಿತ್ರದಲ್ಲಿ ಅವಕಾಶ ನೀಡಲಾಗಿದೆ. ಸಾಗರ, ಕೊಡಚಾದ್ರಿ, ಸಂಪೆಕಟ್ಟೆ, ಜೋಗ, ಕಾರ್ಗಲ್, ಶಿವಮೊಗ್ಗ ಹೊರವಲಯದ ಗಾಜನೂರು ರಸ್ತೆ, ಭದ್ರಾವತಿ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಯುವುದು.
ತಿಳಿವಳಿಕೆ ಇಲ್ಲದೇ ಪ್ರೀತಿಯಲ್ಲಿ ಬೀಳುವ ಯುವಕ-ಯುವತಿಯ ಕತೆಯನ್ನು ಈ ಸಿನಿಮಾ ಹೊಂದಿದೆ ಎಂದು ನಿರ್ದೇಶಕ ರಾಮಕೃಷ್ಣ ತಿಳಿಸಿದರು. ಈ ಚಿತ್ರವನ್ನು ಭದ್ರಾವತಿ ಕುಮಾರ್ ಅವರ ನೇತೃತ್ವದಲ್ಲಿ ಅಕ್ಬರ್ ಷರೀಫ್ ಹಾಗೂ ಮೋಹನ್ ಬಾಬು ನಿರ್ಮಿಸುತ್ತಿದ್ದಾರೆ. ಭದ್ರಾವತಿಯ ಯುವ ಕಲಾವಿದ ದ್ರುವರಾಜ್ ಸಂಗೀತ ನಿರ್ದೇಶನ ನೀಡಿದ್ದಾರೆ. ಪ್ರಮೋದ್ ಅವರ ಛಾಯಾಗ್ರಹಣವಿದೆ.
ಮಹೂರ್ತಕ್ಕೆ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದರು. ಶಾಸಕ ಕೆ.ಬಿ. ಪ್ರಸನ್ನಕುಮಾರ್, ಸಮಾಜದ ಒಳಿತಿಗಾಗಿ ಚಿತ್ರಗಳು ನಿರ್ಮಾಣವಾಗಬೇಕೇ ಹೊರತು ಬರೀ ಮನೋರಂಜನೆಗಲ್ಲ ಎಂದರು.
ಖ್ಯಾತ ಜಾನಪದ ಗಾಯಕ ಕೆ. ಯುವರಾಜ್, ಸಿನಿಮಾ ಕಲಾವಿದರ, ತಂತ್ರಜ್ಞರ ಪ್ರತಿಭೆಯಿಂದ ಉತ್ತಮವಾಗಿ ಮೂಡಿಬರಲಿ ಎಂದರು. ಸಿನಿಮಾದ ಬಹುತೇಕ ಎಲ್ಲಾ ನಟರು, ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.