ಶಿವಮೊಗ್ಗ

ಮಕ್ಕಳಲ್ಲಿ ಸೇವಾ ಭಾವನೆ ಬೆಳೆಸಿ

Published On :

ಕ.ಪ್ರ.ವಾರ್ತೆ, ಭದ್ರಾವತಿ,  ಜು.7
ಯಾವುದೇ ದೈಹಿಕ, ಮಾನಸಿಕ ಮತ್ತು ಆರ್ಥಿಕ ನ್ಯೂನತೆಗಳಿಲ್ಲದೆ ಜನಿಸಿದ ನಾವು ನ್ಯೂನತೆ ಹೊಂದಿದವರ  ಬಗ್ಗೆ ಚಿಂತನೆ ನಡೆಸಿ, ಅವರ ಸೇವೆ ಮಾಡುವ ಅವಶ್ಯಕತೆ ಇದೆ ಎಂದು ಲಯನ್ಸ್ ಮಾಜಿ ಗವರ್ನರ್ ಡಾ. ಎಚ್.ವಿ. ಶಿವಶಂಕರ್ ಹೇಳಿದರು.
ಪಟ್ಟಣದ ಲಯನ್ಸ್ ಕ್ಲಬ್ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರಲ್ಲಿ ಸೇವಾ ಮನೋಭಾವ ಬೆಳೆಸಬೇಕೆಂದರು.
ಒತ್ತಡ ಕಡಿಮೆ: ಸೇವಾಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಮಾನಸಿಕ ಒತ್ತಡ ಕಡಮೆಯಾಗುತ್ತದೆ ಎಂದ ಅವರು ಲಯನ್ಸ್ ಸಂಸ್ಥೆ ಸಂಸ್ಥಾಪಕ ಮೆಲ್ವಿನ್ ಜೋನ್ ಸಮಾಜದ ಸೇವೆ ಮಾಡಲು ನಮಗೆ ಅತ್ಯುತ್ತಮ ಅವಕಾಶ ಕಲ್ಪಿಸಿಕೊಟ್ಟಿದ್ದಾರೆಂದರು. ಸೇವೆ ಮಾಡುವಾಗ ಮುಖದಲ್ಲಿ ನಗುವಿರಲಿ ಎಂದರು.
ಸಮಾರಂಭ ಉದ್ಘಾಟಿಸಿದ ಕುವೆಂಪು ವಿವಿ ಕುಲಸಚಿವ ಡಾ. ಎ.ರಾಮೇಗೌಡ ಸೇವೆ ಪಡೆಯುವ ವರ್ಗದ ನಿರೀಕ್ಷೆ ಅಗಾಧವಾಗಿರುವಾಗ ಸೇವೆ ಮಾಡಲು ವಿಫುಲ ಅವಕಾಶ ಎಂದಿಗೂ ಇರುತ್ತದೆ. ಲಯನ್ಸ್ ಮತ್ತು  ರೋಟರಿ ಅಂತಾರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಗಳು ಅನೇಕ ಸೇವಾಕಾರ್ಯ ಮಾಡುತ್ತಿದ್ದರೂ, ನಿರೀಕ್ಷೆ ಅಗಾಧವಾಗಿರುವಾಗ ನೋಡುವವರ ಕಣ್ಣಿಗೆ ಅವು ಕಾಣಿಸದಿರಬಹುದು ಎಂದರು.
ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ದೇವರಾಜ್ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಬಿ. ಮೂರ್ತಿ, ಚಂದ್ರಶೇಖರ್ ಮತ್ತು ಎಚ್.ಬಿ. ನಾಗರಾಜ್ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯದರ್ಶಿಯಾಗಿ ಸಿ.ಕೆ. ಮಂಜುನಾಥ್, ಸಹ ಕಾರ್ಯದರ್ಶಿಯಾಗಿ ಬಿ.ಎಸ್. ರಾಜೇಶ್ ಮತ್ತು ಖಜಾಂಚಿಯಾಗಿ ಎಸ್. ನಾಯಕ್ ಪ್ರ್ರಮಾಣವಚನ ಸ್ವೀಕರಿಸಿದರು.
2012-13ನೇ ಸಾಲಿನ ಅಧ್ಯಕ್ಷ ಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಯನೆಸ್ ಕ್ಲಬ್ಬಿನ ಅಧ್ಯಕ್ಷೆಯಾಗಿ ಚಂದ್ರಕಲಾ ಮತ್ತು ಕಾರ್ಯದರ್ಶಿಯಾಗಿ ವಿದ್ಯಾ ಮಂಜುನಾಥ್ ಅಧಿಕಾರ ಸ್ವೀಕರಿಸಿದರು.
ಎಸ್.ಬಿ. ಶಿವಲಿಂಗಪ್ಪ ಪ್ರಾರ್ಥಿಸಿದರು. ಪರಮೇಶ್ವರಪ್ಪ ಧ್ವಜವಂದನೆ ಸಲ್ಲಿಸಿದರು. ಡಾ. ಎಂ. ರವೀಂದ್ರನಾಥ ಕೋಠಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎಚ್.ಬಿ. ನಾಗರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.