ಹೃದಯಾಘಾತ: ಸಾವು
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.7
ಇಲ್ಲಿನ ಗುರುಪುರದ ಕೃಷಿಕ ದತ್ತಾತ್ರಿ ಎಂಬುವರು ಹೃದಯಾಘಾತದಿಂದಾಗಿ ರಸ್ತೆಯ ಮಧ್ಯೆಯೇ ಮೃತಪಟ್ಟ ಸಂಗತಿ ಭಾನುವಾರ ನಸುಕಿನಲ್ಲಿ ನಡೆದಿದೆ.
55 ವಯಸ್ಸಿನ ದತ್ತಾತ್ರಿಯವರು ಧರ್ಮಸ್ಥಳಕ್ಕೆ ತೆರಳಿದ್ದು, ಪೂಜೆ ಮುಗಿಸಿ ಭಾನುವಾರ ಮುಂಜಾನೆ 2.30ರ ವೇಳೆಗೆ ಶಿಮೊಗ್ಗೆಗೆ ಹಿಂತಿರುಗಿದ್ದಾರೆ. ಗುರುಪುರ ಕಡೆ ತೆರಳುವ ವಾಹನಕ್ಕಾಗಿ ಇಲ್ಲಿನ ಕೃಷ್ಣಕೆಫೆ ಎದುರಿಗೆ ಕಾಯುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ರಸ್ತೆ ಮಧ್ಯೆಯೇ ಕುಸಿದು ಬಿದ್ದಿದ್ದಾರೆ.
ಈ ಹೊತ್ತಿನಲ್ಲಿ ಜನವಸತಿ ತೀರಾ ವಿರಳವಿದ್ದು, ಅಲ್ಲಿ ಸಂಚರಿಸಿದವರೂ ದತ್ತಾತ್ರಿ ಅವರನ್ನು ಗಮನಿಸಿಲ್ಲ.
ಹೃದಯಾಘಾತದಿಂದ ತೀವ್ರವಾಗಿ ಬಳಲಿದ ದತ್ತಾತ್ರಿಯವರು 3 ಗಂಟೆ ಸುಮಾರಿಗೆ ಅಸುನೀಗಿದ್ದಾರೆ. ಕೆಲ ಹೊತ್ತಿನ ನಂತರ ನೈಟ್‌ಬೀಟ್ ಪೊಲೀಸರು ಇಲ್ಲಿಗಾಗಮಿಸಿ ಪರಿಶೀಲಿಸಿ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಬಳಿಕ 108 ಆಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಿದ್ದಾರೆ. ಆಂಬ್ಯುಲೆನ್ಸ್‌ನಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಪರಿಶೀಲಿಸಿ ದತ್ತಾತ್ರಿಯವರು ಮೃತಪಟ್ಟಿರುವುದನ್ನು ಖಾತ್ರಿ ಪಡಿಸಿದರು.
ವಿಳಾಸವಿಲ್ಲದೆ ಪರದಾಟ: ಈ ಮಧ್ಯೆ ಮೃತಪಟ್ಟ ವ್ಯಕ್ತಿ ಯಾರೆಂಬುದನ್ನು ಪತ್ತೆ ಹಚ್ಚಲು ಪೊಲೀಸರು ಸಾಕಷ್ಟು ತ್ರಾಸಪಟ್ಟರು. ಮೃತ ವ್ಯಕ್ತಿಯ ಬಳಿ 10,500 ರುಪಾಯಿ ಹಣ, ಜೊತೆಗೆ ಧರ್ಮಸ್ಥಳ ಮಂಜುನಾಥಸ್ವಾಮಿ ಪ್ರಸಾದ ಹೊರತಾಗಿ ವಿಳಾಸದ ಸುಳಿವು ಸಿಗಲಿಲ್ಲ. ಆದರೆ, ಒಂದು ಮೊಬೈಲ್ ನಂಬರ್ ಹೊಂದಿದ ಚೀಟಿ ದೊರೆಯಿತು.
ಅಲ್ಲಿ ಸಿಕ್ಕ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಆ ವ್ಯಕ್ತಿಯನ್ನು (ಅಬಕಾರಿ ಇಲಾಖೆ ಸಿಬ್ಬಂದಿ)ಸ್ಥಳಕ್ಕೆ ಕರೆಸಿಕೊಂಡ ಪೊಲೀಸರು ವಿಳಾಸ ಪತ್ತೆಗೆ ಶ್ರಮಿಸಿದರು. ನಂತರ ಮೃತ ವ್ಯಕ್ತಿ ದತ್ತಾತ್ರಿ ಎಂದೂ, ಗುರುಪುರದ ವಾಸಿ ಎಂದು ತಿಳಿಯಿತು. ಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

