ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ , ಸೊರಬ , ಜು.13
ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬಿಸಿ ಊಟ ಉಣ ಬಡಿಸುತ್ತಿರುವ ಬಿಸಿಯೂಟ ಕಾರ್ಯಕರ್ತೆಯರಿಗೆ ಸಮರ್ಪಕ ವೇತನ, ಸೇವಾಭದ್ರತೆ ದೊರಕದಿರುವುದು ಖೇದನೀಯ ಎಂದು ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ ಹೊಸಕೊಪ್ಪ ತಿಳಿಸಿದರು.
ಬಿಸಿಯೂಟ ಸಿಬ್ಬಂದಿಗೆ ಕನಿಷ್ಠ ವೇತನ ನಿಗದಿ, ಸೇವಾಭದ್ರತೆ ಮುಂತಾದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಆನವಟ್ಟಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಖಾಸಗೀಕರಣವಾಗುತ್ತವೆ ಎಂಬ ಭೀತಿಯಲ್ಲಿ ಸೇವಾಭದ್ರತೆಯ ಅತಂತ್ರ ಸ್ಥಿತಿಯಲ್ಲಿರುವ ಕಾರ್ಯಕರ್ತೆಯರು ಬೀದಿಪಾಲಾಗುವ ಆತಂಕದಲ್ಲಿದ್ದಾರೆ.
ಸಿಬ್ಬಂದಿಯನ್ನು ತಮಿಳುನಾಡು ಮಾದರಿಯಲ್ಲಿ ಅರೆಕಾಲಿಕ ಕಾಯಂ ಎಂದು ಪರಿಗಣಿಸುವುದು, ಮಕ್ಕಳ ಸಂಖ್ಯಾಧರಿತ ಸಿಬ್ಬಂದಿ ಕಡಿತಗೊಳಿಸುವುದನ್ನು ನಿಲ್ಲಿಸುವುದು, ಸೇವೆಯಿಂದ ಯಾರನ್ನೂ ತೆಗೆಯದಿರುವುದು, ಕನಿಷ್ಠ ವೇತನ, ನಿವೃತ್ತ ವೇತನ, ವಿಮಾಯೋಜನಾ ಜಾರಿ, ಖಾಸಗೀಕರಣ ನಿಲ್ಲಿಸುವುದು, ಪೂರ್ತಿ ವೇತನ ನೀಡಬೇಕು, ಪ್ರತಿ ಶಾಲೆಗೆ 3 ಸಿಬ್ಬಂದಿ ನೇಮಿಸುವುದು, ರಜೆಯಲ್ಲಿ ವೇತನ ನೀಡುವುದು, ಸಮವಸ್ತ್ರ ಪೂರೈಕೆ, ಅಡುಗೆ ಕಾರ್ಯಕ್ಕೆ ಸೇವೆ ಸಲ್ಲುವುದು, ಲೈಂಗಿಕ ಹಾಗೂ ಮಾನಸಿಕ ಕಿರುಕುಳದಿಂದ ರಕ್ಷಿಸುವುದು ಮುಂತಾದ ಬೇಡಿಕೆಗಳು ಕೂಡಲೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಲಕ್ಕವಳ್ಳಿ ಮತ್ತು ನೆಲ್ಲೂರು ಶಾಲೆಗಳಲ್ಲಿ ಯಾವುದೆ ಮಾಹಿತಿ ನೀಡದೆ ವಜಾಗೊಳಿಸಿರುವ ಕಾರ್ಯಕರ್ತೆಯರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಗ್ರಾಮದ ಉಪ ತಹಸೀಲ್ದಾರ್ ಹಾಗೂ ತಾಪಂ ಇಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಫೆಡರೇಶನ್ ತಾಲೂಕು ಉಪಾಧ್ಯಕ್ಷ ಬಸವರಾಜ್ ಹಿರೇಮಠ್, ಸಂಚಾಲಕ ಮರಿಬಸಪ್ಪ ಬಣಕಾರ್, ರಾಮಚಂದ್ರ, ಆನವಟ್ಟಿ ವಿಭಾಗದ
ಅಧ್ಯಕ್ಷೆ ಮಂಜುಳಾ, ಪದಾಧಿಕಾರಿಗಳಾದ ಜಯಮ್ಮ, ಕೆ.ಎಂ. ಗೀತ, ಗೌರಮ್ಮ, ರೇಣುಕಮ್ಮ ಹಾಗೂ ಆನವಟ್ಟಿ ಭಾಗದ ಕಾರ್ಯಕರ್ತೆಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

