ಸರ್ಕಾರದಿಂದ ಅಳತೆ ಕಡಿಮೆ ಸಮವಸ್ತ್ರ ವಿತರಣೆ
ಶಿರಾಳಕೊಪ್ಪ: ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕೊಡಲಾಗಿರುವ ಸಮವಸ್ತ್ರ ಅಳತೆ ಕಡಿಮೆ ಇದ್ದು, ಹೊಲಿಯಲು ಬಾರದೇ ಪೋಷಕರು ಬಟ್ಟೆ ಅಂಗಡಿ ಸುತ್ತುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಕೊಟ್ಟಿರುವ ಬಟ್ಟೆ ವಿಶೇಷವಾಗಿ ಹೆಣ್ಣಮಕ್ಕಳಿಗೆ ಸ್ಕರ್ಟ್ ಹೊಲಿಯಲು ಆಗದ ಕಾರಣ ಶಾಲೆಯಲ್ಲಿ ಕೊಟ್ಟಂತಹುದೇ ಬಟ್ಟೆ ಹುಡುಕುತ್ತಿರುವ ಪೋಷಕರಿಗೆ ಬಟ್ಟೆ ಅಂಗಡಿಯಲ್ಲಿಯೂ ಅದು ಸಿಗದೇ ಪೇಚಾಡುವಂತಾಗಿದೆ.
ಇಂತಹ ಪರಿಸ್ಥಿತಿ ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಗ್ರಾಮಾಂತರ ಪ್ರದೇಶದ ಪೋಷಕರು ಬಟ್ಟೆ ಅಂಗಡಿಗೆ ಶಾಲೆಯಲ್ಲಿ ಕೊಟ್ಟ ಬಟ್ಟೆ ಬಗ್ಗೆ ವಿಚಾರಿಸುತ್ತಿರುವಾಗ ಬಟ್ಟೆ ಕಡಿಮೆ ಇರುವುದು ತಿಳಿದುಬಂದಿದೆ. ಆದರೆ ಬಟ್ಟೆ ಅಂಗಡಿಯಲ್ಲಿ ಬಟ್ಟೆ ಸಿಗುತ್ತಿಲ್ಲ. ಶಾಲೆಯಲ್ಲಿ ಕೊಟ್ಟ ಬಟ್ಟೆ ಸರ್ಕಾರದಿಂದ ಸರಬರಾಜು ಆಗಿದ್ದು, ಆ ಬಟ್ಟೆ ಬೇರೆ ಎಲ್ಲಿಯೂ ಸಿಗುತ್ತಿಲ್ಲ.
ವಿವಿಧ ಅಳತೆ: ಈ ಬಗ್ಗೆ ಕೆಲವು ಶಾಲೆಯಲ್ಲಿ ಪ್ರಶ್ನಿಸಿದಾಗ ಮಕ್ಕಳಿಗೆ ಕೊಡುತ್ತಿರುವ ಸಮವಸ್ತ್ರಗಳು ಕ್ರಮವಾಗಿ ಒಂದು ಮತ್ತು ಎರಡನೇ ತರಗತಿಗೆ ಒಂದು ಅಳತೆ, ಮೂರು, ನಾಲ್ಕು ಹಾಗೂ ಐದನೇ ತರಗತಿ ಅವರಿಗೆ ಒಂದು ಅಳತೆ ಆರು ಮತ್ತು ಏಳನೇ ತರಗತಿಯ ಮಕ್ಕಳಿಗೆ ಒಂದು ಅಳತೆ ಇರುವಂತೆ ಸರ್ಕಾರದಿಂದಲೇ ಬಂದಿರುತ್ತದೆ. ಏಳನೇ ತರಗತಿಯಲ್ಲಿ ಮಕ್ಕಳಿಗೆ ಉದ್ದ ಸ್ಕರ್ಟ್ ಹೊಲಿಸಲು ಬಟ್ಟೆ ಕಡಮೆ ಇದೆ ಎಂದಿದ್ದಾರೆ ಎಂಬ ಉತ್ತರ ದೊರೆತಿದೆ.
ಈ ಬಗ್ಗೆ ಶಿರಾಳಕೊಪ್ಪ ಸಿಆರ್ಪಿ ನಾಗೇಂದ್ರಪ್ಪ ರಾಗೇರ್ ಅವರನ್ನು ಪ್ರಶ್ನಿಸಿದಾಗ ಅಂತಹ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ, ಹಾಗೆಯೇ ಇನ್ನೂ ಹಲವಾರು ಮಕ್ಕಳಿಗೆ ಬಟ್ಟೆ ಬರಬೇಕಿದೆ ಆ ಸಮಸ್ಯೆ ಬಂದರೆ ನಮ್ಮ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ತಿಳಿಸಿದ್ದಾರೆ.
ಸರ್ಕಾರ ಮೊದಲ ಬಾರಿ ಕಳಿಸಿದ ಬಟ್ಟೆ ಮಾತ್ರ ಕೆಲಮಕ್ಕಳಿಗೆ ಹಾಗಾಗಿದೆ, ಎರಡನೇ ಬಾರಿ ಕಳಿಸಿದ ಸಮವಸ್ತ್ರ ದೊಡ್ಡದಾಗಿದೆ ಎನ್ನಲಾಗಿದ್ದು, ಮೊದಲ ಬಾರಿ ಕಳಿಸಿದ ಸಮವಸ್ತ್ರದ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

