ಕಾರ್ಮೆಲ್ ಮಾತೆ ವಾರ್ಷಿಕೋತ್ಸವ
ಶಿವಮೊಗ್ಗ: ನಗರದ ಪವಿತ್ರ ಹೃದಯ ಪ್ರಧಾನಾಲಯದ ಕಾರ್ಮೆಲ್ ಮಾತೆ ವಾರ್ಷಿಕೋತ್ಸವವು ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಹೊರ ಜಿಲ್ಲೆಗಳಿಂದಲೂ ಆಗಮಿಸಿದ್ದ ಭಕ್ತರು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಕಾರ್ಮೆಲ್ ಮಾತೆ ವೈಭವದ ಉತ್ಸವಕ್ಕೆ ಸಾಕ್ಷಿಯಾದರು. ಕ್ರಿಸ್ಮಸ್ ಹಬ್ಬಕ್ಕಿಂತಲೂ ಹೆಚ್ಚು ಜನ ಸೇರುವುದು ಉತ್ಸವದ ವಿಶೇಷ.
ಉತ್ಸವ ನಡೆಯುವ ಒಂದು ವಾರ ಮೊದಲೇ ವಿಶೇಷ ಪ್ರಾರ್ಥನೆಗಳು ಆರಂಭಗೊಂಡಿದ್ದವು. ಜು.7ರಿಂದ 15ರ ವರೆಗೆ ಪ್ರತಿನಿತ್ಯ ಸಂಜೆ 5.30ಕ್ಕೆ ಜಪಸರ, ಬಲಿಪೂಜೆ, ಪ್ರಬೋಧನೆ ಮತ್ತು ನವೇನ ನಡೆಯುತ್ತಿತ್ತು. ಜುಲೈ 16ರಂದು ಬೆಳಿಗ್ಗೆಯಿಂದ ರಾತ್ರಿವರೆಗೆ ವಿಶೇಷ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 7ಕ್ಕೆ ಬಲಿಪೂಜೆ, 9.30ಕ್ಕೆ ಶಿವಮೊಗ್ಗ ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಹೆನ್ರಿ ಡಿಸೋಜ ಪಾಲ್ಗೊಂಡಿದ್ದರು.
ಮಂಗಳವಾರ ಸಂಜೆ ರಾಜಬೀದಿ ಉತ್ಸವವು ಪವಿತ್ರ ಹೃದಯ ಪ್ರಧಾನಾಲಯದಿಂದ ಹೊರಟು ಕೋಟೆ ರಸ್ತೆಯ ಮೂಲಕ ಮಾರಿಗದ್ದುಗೆ ರಸ್ತೆ ಮಾರ್ಗವಾಗಿ ಬಿ.ಎಚ್. ರಸ್ತೆಯಲ್ಲಿನ ಪ್ರಧಾನಾಲಯಕ್ಕೆ ಬಂದು ತಲುಪಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಜಪಸರ ಮಾಡುವ ಮೂಲಕ ಪ್ರಾರ್ಥಿಸಿದರು. ವಿಶೇಷವೆಂದರೆ ಹಿಂದುಗಳು ಕಾರ್ಮೆಲ್ ಮಾತೆಗೆ ಪೂಜೆಸಲ್ಲಿಸುವ ಮೂಲಕ ಭಾವಕೈತೆ ಮೆರೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

