ಶಿವಮೊಗ್ಗ

ಕಳಪೆ ಪೌಷ್ಟಿಕಾಂಶ ಆಹಾರ ಪೂರೈಕೆ: ಆರೋಪ

Published On :

ಕ.ಪ್ರ.ವಾರ್ತೆ, ಶಿರಾಳಕೊಪ್ಪ,  ಜು.19
ಸರ್ಕಾರ ಅಂಗನವಾಡಿಗೆ ಪೌಷ್ಟಿಕಾಂಶವಿರುವ ಶೀಲು ಮಾಡಿದ ಆಹಾರವನ್ನು ವಿತರಿಸುತ್ತಿದ್ದು, ಇದನ್ನು ಮಕ್ಕಳು ತಿನ್ನುತ್ತಿಲ್ಲ. ಸರ್ಕಾರದ ಆ ಆಹಾರವನ್ನು ಕೋಳಿ ಮತ್ತು ದನಗಳಿಗೆ ಹಾಕಲಾಗುತ್ತಿದೆ ಎಂದು ಮಾಜಿ ಸಚಿವೆ ಹಾಗು ಅಕ್ಕಮಹಾದೇವಿ ಸಮಿತಿ ಅಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್ ವಿಷಾದ ವ್ಯಕ್ತಪಡಿಸಿದರು.
ಶಿರಾಳಕೊಪ್ಪ ಹತ್ತಿರದ ಅಕ್ಕಮಹಾದೇವಿ ಜನ್ಮ ಸ್ಥಳದಲ್ಲಿ ಬೆಳಗಾವಿಯ ಸಂಯುಕ್ತ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಮಗ್ರ ಪೌಷ್ಟಿಕಾಂಶ ಆಹಾರ ಅಭಿಯಾನದ ಕಾರ್ಯಕರ್ತರಿಗೆ ನಡೆದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶೇಂಗಾ, ಬೆಲ್ಲ ಕೊಡಿ: ಈ ಹಿಂದೆ ಮಂತ್ರಿ ಆದಾಗ ಇಂತಹ ಆಹಾರದ ಬದಲು ಅತ್ಯಂತ ಪೌಷ್ಟಿಕ ಅಂಶವಿರುವ ಶೇಂಗಾ, ಬೆಲ್ಲ ಮತ್ತು ಬಾಳೆಹಣ್ಣಿನಂತಹ ಪದಾರ್ಥ ವಿತರಿಸಲು ಸಲಹೆ ಕೊಟ್ಟಿದ್ದೆ. ಸರ್ಕಾರ ಕೊಡುತ್ತಿರುವ ಪೌಷ್ಟಿಕಾಂಶದ ಆಹಾರದ ಪೊಟ್ಟಣಗಳು ಎಂದೋ ಮಾಡಿದ ಪೊಟ್ಟಣಗಳಾಗಿರುತ್ತವೆ. ಹೀಗಾಗಿ ಜನರು ಅವುಗಳನ್ನು ಅನುಮಾನದಿಂದ ನೋಡುತ್ತಿದ್ದಾರೆ ಎಂದರು.
ಮನೆಮನೆಗೆ ತೆರಳಿ ಪೌಷ್ಟಿಕ ಆಹಾರದ ಬಗ್ಗೆ ತಿಳಿಸುವ ಕಾರ್ಯಕರ್ತರು ಪ್ರತಿಮನೆಯಲ್ಲಿ ಶುಚಿತ್ವದ ತರಬೇತಿ ಕೊಟ್ಟು ಕಾರ್ಯಕ್ರಮದ ವಿವರಗಳನ್ನು ತಿಳಿಸಿ. ಕಾರ್ಯದ ಬಗ್ಗೆ ತಿಳಿಸಿ ನಿಮ್ಮ ಮನೆಯನ್ನು ಶುಚಿಯಾಗಿ ಇಟ್ಟುಕೊಂಡು ನಂತರ ಇತರರಿಗೆ ಮಾಹಿತಿಕೊಟ್ಟರೆ ಉಪಯೋಗವಾಗುತ್ತದೆ ಎಂದು ಹೇಳಿದರು.
ಬಲಹೀನರಿಗೆ ವಿತರಣೆ: ಪ್ರಾರಂಭದಲ್ಲಿ ಸೇವಾಕಾರ್ಯದ ಪ್ರಮುಖರಾದ ಮಂಜುನಾಥ ಮಾತನಾಡಿ, ಪ್ರತಿ ಗ್ರಾಮದಲ್ಲಿ ಇರುವಂತಹ ಗರ್ಬಿಣಿಯರು, ಕಡಿಮೆತೂಕ ಹೊಂದಿರುವ ಮಗು, ಬಲಹೀನ ಬಾಲಕಿಯರು ಹಾಗೂ ಹರೆಯದ ಹುಡಿಗಿಯರಲ್ಲಿ ಇರುವ ಬಲಹೀನತೆ ಹೋಗಲಾಡಿಸುವ ಉದ್ದೇಶದಿಂದ ಪೌಷ್ಟಿಕ ಆಹಾರ ವಿತರಿಸುವ ಕಾರ್ಯವನ್ನು ಮಾಡುತ್ತಿರುವದಾಗಿ ತಿಳಿಸಿದರು.
ಅಕ್ಕಮಹಾದೇವಿ ಸಂಸ್ಥೆ ಕಾರ್ಯದರ್ಶಿ ಗೌರಮ್ಮ, ಶೇಷಗಿರಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.