25ಕ್ಕೆ ಚುನಾವಣೆ
ಶಿವಮೊಗ್ಗ: ಚುನಾವಣಾ ಆಯೋಗವು 2013ರ ಆಗಸ್ಟ್ 25ರಂದು ಜಿಲ್ಲೆಯಲ್ಲಿ ಪ್ರಾಥಮಿಕ ಹಂತದ ಸಹಕಾರ ಸಂಘಕ್ಕೆ ಏಕಕಾಲದಲ್ಲಿ ಚುನಾವಣೆ ನಡೆಸಲು ಉದ್ದೇಶಿಸಿದ್ದು, ಈ ಸಂಬಂಧ ಸಹಕಾರ ಇಲಾಖೆಯ ಅಧೀನ ಕಚೇರಿಗಳಿಗೆ ಚುನಾವಣಾಧಿಕಾರಿಯನ್ನು ನೇಮಕಗೊಳಿಸಿದೆ.
ಸಹಕಾರ ಚುನಾವಣಾ ಆಯೋಗ ಮತ್ತು ಸಹಕಾರ ಇಲಾಖಾ ವತಿಯಿಂದ ನೀಡುವ ಮಾರ್ಗದರ್ಶನ ಮತ್ತು ಸಲಹೆ ರೀತ್ಯ ನಿಯಮಾನುಸಾರ ಚುನಾವಣಾ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂತೋಷ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಹಕರಿಗೆ ಸೂಚನೆ
ಶಿವಮೊಗ್ಗ: ಭಾರತ ಸಂಚಾರ ನಿಗಮದ ಪ್ರೀಪೇಯ್ಡ್ ಮೊಬೈಲ್ ಗ್ರಾಹಕರಿಗಾಗಿ ರೋಮಿಂಗ್ ರೀಚಾರ್ಜ್ ಕರೆನ್ಸಿಗಳನ್ನು ಬಿಡುಗಡೆಗೊಳಿಸಿದ್ದು, ದೆಹಲಿ ಮತ್ತು ಮುಂಬಯಿ ನಗರಗಳನ್ನು ಹೊರತುಪಡಿಸಿ ಎಲ್ಲಾ ಕಡೆಗಳಲ್ಲಿಯೂ ಒಳಬರುವ ಕರೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ರೀಚಾರ್ಜ್ ಕರೆನ್ಸಿ ದರ ಎಸ್.ಟಿ.ವಿ. 199ಗೆ 6ತಿಂಗಳು, ಎಸ್.ಟಿ.ವಿ. 69ಗೆ 1ತಿಂಗಳು ಹಾಗೂ ಎಸ್.ಟಿ.ವಿ. 5ಗೆ 1ದಿನದ ವ್ಯಾಲಿಡಿಟಿಯನ್ನು ನಿಗಧಿಗೊಳಿಸಿದೆ. ವಿವರಗಳಿಗಾಗಿ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಅಥವಾ ದೂರವಾಣಿ ಸಂಖ್ಯೆ 08182 -264022ನ್ನು ಸಂಪರ್ಕಿಸಬಹುದಾಗಿದೆ.
ಅಭಿನಂದನಾ ಸಮಾರಂಭ
ಶಿವಮೊಗ್ಗ: ಜಿಲ್ಲಾ ವಕೀಲರ ಸಂಘವು ಜುಲೈ 27ರಂದು ಸಂಜೆ 6ಗಂಟೆಗೆ ವಕೀಲರ ಭವನದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಮುನಿಯಪ್ಪ ಮುಖ್ಯ ಅತಿಥಿಯಾಗಿ ಆಗಮಿಸಲಿರುವರು. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಬಿ.ಎಸ್. ಯಡಿಯೂರಪ್ಪ, ಶಾಸಕ ಪ್ರಸನ್ನಕುಮಾರ, ಅಪ್ಪಾಜಿಗೌಡ, ಶಾರದಾ ಪೂರ್ಯಾನಾಯ್ಕ, ಮಧುಬಂಗಾರಪ್ಪ ಅವರಿಗೆ ಅಭಿನಂದಿಸಲಾಗುವುದು. ವಕೀಲರ ಸಂಘದ ಅಧ್ಯಕ್ಷ ಅಶೋಕ ಜಿ. ಭಟ್ ಅಧ್ಯಕ್ಷತೆ ವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

