ಕಸಾಯಿಖಾನೆ ಮಂಜೂರಾತಿ ದುರ್ಬಳಕೆ
ಕ.ಪ್ರ.ವಾರ್ತೆ, ಸಾಗರ, ಜು.22
ಬಳಸಗೋಡಿನಲ್ಲಿ ಕಸಾಯಿಖಾನೆ ಮಂಜೂರಾತಿ ವಿಷಯವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜಕೀಯ ದುರುದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೆಜೆಪಿ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಆರೋಪಿಸಿದರು.
ನಗರಸಭೆಯಲ್ಲಿ ಹಿಂದೆ ತಮ್ಮ ಆಡಳಿತಾವಧಿಯಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರದ ಸೂಚನೆಯಂತೆ ಆಧುನಿಕ ಕಸಾಯಿಖಾನೆಗೆ ಜಾಗ ಗುರುತಿಸಲಾಗಿತ್ತು. ಸಾಗರವೂ ಸೇರಿದಂತೆ ರಾಜ್ಯದ 44 ನಗರಸಭೆಗಳಲ್ಲಿ ಆಧುನಿಕ ಕಸಾಯಿಖಾನೆಗೆ 3 ದಿನದಲ್ಲಿ ಜಾಗ ಗುರುತಿಸದಿದ್ದರೆ ಆಯುಕ್ತರ ಮೇಲೆ ಮೊಕದ್ದಮೆ ದಾಖಲಿಸುವ ಲಿಖಿತ ಆದೇಶವನ್ನು ಬಿಜೆಪಿ ರಾಜ್ಯ ಸರ್ಕಾರ ಹೊರಡಿಸಿತ್ತು.
ಕಸಾಯಿಖಾನೆಗೆ ಸ್ಥಳ ಗುರುತು: ಬಿಜೆಪಿಯ ಆಡಳಿತವಿರುವ ಉಡುಪಿ ಸೇರಿದಂತೆ ರಾಜ್ಯ ಎಲ್ಲ ನಗರಸಭೆಗಳಲ್ಲಿ ಕಸಾಯಿಖಾನೆಗೆ ಸ್ಥಳ ಗುರುತಿಸುವ ಕಾರ್ಯ ನಡೆದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿದರು.
ಕಸಾಯಿಖಾನೆಯೆಂದರೆ ಗೋ ಹತ್ಯಾ ಕೇಂದ್ರವಲ್ಲ ಎಂದು ಸ್ಪಷ್ಟಪಡಿಸಿದ ಮೇಘರಾಜ್ ದಿನನಿತ್ಯ ಬಳಕೆಯಾಗುವ ಕುರಿ, ಕೋಳಿಗಳನ್ನು ವೈಜ್ಞಾನಿಕವಾಗಿ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿ, ಮೊಹರು ಹಾಕಿಸಿ, ಸ್ವಚ್ಛಗೊಳಿಸಿ ಕಡಿದು ಮಾಂಸವನ್ನು ಉಪಯೋಗಕ್ಕೆ ಸಿದ್ಧಪಡಿಸುವ ಸ್ಥಳ. ಇದು ನಗರ ಪ್ರದೇಶದಿಂದ 5ರಿಂದ 10 ಕಿ.ಮೀ. ದೂರದಲ್ಲಿರಬೇಕು ಹಾಗೂ 10ರಿಂದ 15 ಎಕರೆ ಜಾಗವಿರಬೇಕು ಎಂಬ ಆದೇಶದಂತೆ ಜಿಲ್ಲಾಮಟ್ಟದ ಕಂದಾಯ ಇಲಾಖೆ ಅಧಿಕಾರಿಗಳು ಬಳಸಗೋಡಿನಲ್ಲಿ 7 ಎಕರೆ ಜಾಗವನ್ನು ಗುರುತಿಸಿದ್ದಾರೆ.
ಈ ಬಗ್ಗೆ ಯಾವ ಮಾಹಿತಿಯೂ ಇಲ್ಲದ ಬಿಜೆಪಿ ಮತ್ತಿತರ ಸಂಘಟನೆಗಳು ಮುಖಂಡರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದರೆ ಕಾಂಗ್ರೆಸ್ ಮುಖಂಡರು ಭಾವನೆ ಕೆರಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಗೊಂದಲ ಸೃಷ್ಟಿ ಸರಿಯಲ್ಲ: ಕಾಂಗ್ರೆಸ್ ಮುಖಂಡ ತೀ.ನ. ಶ್ರೀನಿವಾಸ್ ತಾವು ನಗರಸಭೆ ಅಧ್ಯಕ್ಷರಾಗಬೇಕು ಎನ್ನುವ ಉದ್ದೇಶದಿಂದ ಅನಗತ್ಯ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಒಂದೊಮ್ಮೆ ಬಳಸಗೋಡಿನಲ್ಲಿ ರೈತರಿಗೆ, ಸಾರ್ವಜನಿಕರಿಗೆ ಆಧುನಿಕ ಕಸಾಯಿಖಾನೆ ನಿರ್ಮಾಣ ಮಾಡುವುದರಿಂದ ಸಮಸ್ಯೆ ಉಂಟಾಗುತ್ತದೆ ಎಂದಾದರೆ ಅದನ್ನು ರದ್ದುಪಡಿಸಿ ಬೇರೆ ಕಡೆ ಸ್ಥಳ ಗುರುತಿಸಬಹುದು. ಆಧುನಿಕ ಕಸಾಯಿಖಾನೆ ಶಬ್ದವನ್ನು ತಿರುಚಿ ಜನರಿಗೆ ಗೊಂದಲ ಉಂಟುಮಾಡುವುದು ಸರಿಯಲ್ಲ ಎಂದು ಹೇಳಿದರು. ವಿ. ಮಹೇಶ್, ಗಣೇಶಪ್ರಸಾದ್, ವಾದಿರಾಜ್, ಸರಸ್ವತಿ ನಾಗರಾಜ್, ಸುಧಾಕರ ಭಂಡಾರಿ, ಪ್ರತಾಪ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

