ಹಳೇನಗರ ಪೊಲೀಸ್ ಠಾಣೆಯಲ್ಲಿ ಬೆಂಕಿ
ಭದ್ರಾವತಿ: ಪಟ್ಟಣದ ಹಳೇನಗರ ಪೊಲೀಸ್ ಠಾಣೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು ಹೊರಗೆ ಓಡಿಬಂದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಠಾಣೆಯ ಮುಂಭಾಗದಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ ಆಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿಸಲಾಯಿತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಠಾಣೆಯ ಬಹಳಷ್ಟು ವಿದ್ಯುತ್ ತಂತಿಗಳು ಕರಕಲಾಗಿವೆ.
ಅಕ್ರಮ ಗಾಂಜಾ ವಶ
ಭದ್ರಾವತಿ ತಾಲೂಕಿನ ಸಿದ್ದರಮಟ್ಟಿ ಕ್ಯಾಂಪ್ನಲ್ಲಿ ವೆಂಕಟೇಶ್ ಎಂಬವರು ಅಡಕೆ ತೋಟದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಭದ್ರಾವತಿ ಗ್ರಾಮಾಂತರ ಪೋಲಿಸರು ಪತ್ತೆಹಚ್ಚಿ ಆರೋಪಿಯಿಂದ ಸುಮಾರು ಐದು ಕೆಜಿ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮಟ್ಕಾ ಜೂಜಾಟ
ಕಾಗದನಗರ ಪೋಲಿಸ್ ಠಾಣೆಯ ವ್ಯಾಪ್ತಿಯ ಉಜ್ಜಿನೀಪುರ ಸರ್ಕಲ್ ಬಳಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಸುಬ್ಬ ಅಲಿಯಾಸ್ ಸುಬ್ಬಯ್ಯ (36) ಎಂಬಾತನ್ನು ಬಂಧಿಸಿ ಆರೋಪಿಯಿಂದ ರು. 410 ಹಾಗೂ ಜೂಜಾಟಕ್ಕೆ ಸಂಬಂಧಿಸಿದ ಚೀಟಿ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಿಳೆ ಕಾಣೆ
ಹೊಸಮನೆ ವಾಸಿ ಶಂಕರರಾವ್ ಅವರ ಪತ್ನಿ ಲೀಲಾಬಾಯಿ ಮಾನಸಿಕ ಅಸ್ವಸ್ಥರಾಗಿದ್ದು, ಮನೆಯಿಂದ ಕಾಣೆಯಾಗಿದ್ದಾರೆ ಎಂದು ಅವರ ಪತಿ ಹೊಸಮನೆ ಶಿವಾಜಿ ವೃತ್ತದ ಪೋಲಿಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ದೂರನ್ನು ದಾಖಲಿಸಿದ ಪೊಲೀಸರು ಲೀಲಾಬಾಯಿ ಅವರ ಶೋಧಕಾರ್ಯಕದಲ್ಲಿ ತೊಡಗಿದ್ದಾರೆ.
ಅಪಘಾತ: ಮಹಿಳೆಗೆ ಗಾಯ
ಜನ್ನಾಪುರದಲ್ಲಿ ರಸ್ತೆಬದಿಯಲ್ಲಿ ನಡೆದುಹೋಗುತ್ತಿದ್ದ ನಿರ್ಮಲ ಎಂಬ ಮಹಿಳೆಗೆ ಡಿ. ಉಮೇಶ ಎಂಬವರು ಮೋಟಾರ್ ಸೈಕಲ್ನಲ್ಲಿ ಡಿಕ್ಕಿ ಹೊಡೆದ ಪರಿಣಾಮ ನಿರ್ಮಲ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಸೋಮವಾರ ಸಂಭವಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ನಿರ್ಮಲ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಭದ್ರಾವತಿ ಸಂಚಾರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಲಕನ ಮೃತದೇಹ ಪತ್ತೆ
ಶಿಕಾರಿಪುರ: ಪಟ್ಟಣದ ಆಶ್ರಯ ಬಡಾವಣೆ ಸಮೀಪದ ಅಂಜನಾಪುರ ಜಲಾಶಯದ ನಾಲಾ ನೀರಿನಲ್ಲಿ ಬಾಲಕನೊಬ್ಬನ ಶವ ಪತ್ತೆಯಾಗಿದ್ದು ಈತನನ್ನು ಸಮೀಪದ ಭದ್ರಾಪುರ ಗ್ರಾಮದ ಜೀವನ್(5) ಎಂದು ಗುರುತಿಸಲಾಗಿದೆ.
ಕೆಲ ದಿನದ ಹಿಂದೆ ಬಾಲಕನ ತಂದೆ ಶಿವಕುಮಾರ್ ತಮ್ಮ ಪುತ್ರ ಕಾಣೆಯಾಗಿದ್ದಾಗಿ ದೂರು ನೀಡಿದ್ದು, ಮಂಗಳವಾರ ಬಾಲಕನ ಮೃತ ದೇಹ ಚಾನಲ್ನ ಬದಿಯ ಗಿಡದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಶವವನ್ನು ಸಾರ್ವಜನಿಕರು ಹೊರತೆಗೆದಿದ್ದಾರೆ. ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

