ಸಿಗ್ನಲ್ ದೀಪ ದುರಸ್ತಿಗೆ ಆಗ್ರಹ
ಕ.ಪ್ರ.ವಾರ್ತೆ ಭದ್ರಾವತಿ ಜು.26
ಪಟ್ಟಣದ ರಾಜ್ಯ ಸಾರಿಗೆ ಬಸ್ಸು ನಿಲ್ದಾಣದ ಬಳಿ ಇರುವ ಅಂಬೇಡ್ಕರ್ ವೃತ್ತದ ಬಳಿಯ ಸಿಗ್ನಲ್ ಲೈಟ್ಗಳು ಬಹಳ ವರ್ಷಗಳಿಂದ ನಿಷ್ಕ್ರಿಯವಾಗಿದ್ದು ಇದರಿಂದ ವಾಹನ ಸಂಚಾರ ನಿಯಂತ್ರಣಕ್ಕೆ ತೊಂದರೆಯುಂಟಾಗಿದೆ.
ಜನ ನಿಬಿಡ ಸ್ಥಳವಾದ ಇಲ್ಲಿ ಪೋಲಿಸರು ಇಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸುತ್ತಾರೆ. ಆದರೆ ಪೊಲೀಸರ ಕೊರತೆಯಿಂದಾಗಿ ಪ್ರತಿದಿನವೂ ಎಲ್ಲ ಸಮಯದಲ್ಲೂ ಅವರರಿಲ್ಲಿ ರಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವಾಹನ ಸಂಚಾರ ನಿಯಂಣ ಸಮಸ್ಯೆಯಾಗಿದೆ.
ಇಲ್ಲಿ ಮೂರು ದಿಕ್ಕುಗಳಿಂದ ವಾಹನಗಳು ಓಡಾಡುತ್ತಿರುತ್ತವೆ. ಸರ್ಕಾರಿ ಬಸ್ಗಳು ಹಾಗೂ ಕಾರ್ಖಾನೆಗೆ ಓಡಾಡುವ ಲಾರಿಗಳು ಸೇರಿದಂತೆ ಭಾರಿ ವಾಹನಗಳ ಓಡಾಟವೂ ಅಧಿಕವಾಗಿದೆ.
ಹದಗೆಟ್ಟ ಪಾದಚಾರಿ ರಸ್ತೆ:
ಮಳೆಯಿಂದಾಗಿ ರಸ್ತೆಯ ಪಕ್ಕದಲ್ಲಿ ಕೊಚ್ಚೆಯಾಗಿರುವುದರಿಂದ ಈಗ ಪಾದಚಾರಿಗಳೂ ಸಹ ರಸ್ತೆಯ ಮೇಲೆ ಅನಿವಾರ್ಯವಾಗಿ ಓಡಾಡುತ್ತಿರುತ್ತಾರೆ. ಒಂದೆಡೆ ವಾಹನಗಳ ಓಡಾಟ ಮತ್ತೊಂದೆಡೆ ಪಾದಚಾರಿಗಳು ಓಡಾಟ ರಸ್ತೆಯಲ್ಲಿ ಅವಿರತವಾಗಿ ಸಾಗಿರುತ್ತದೆ.
ಸಿಗ್ನಲ್ ಲೈಟ್ಗಳನ್ನು ಅಳವಡಿಸಿ ಹಲವಾರು ವರ್ಷಗಳೇ ಕಳೆದರೂ ಅದು ಕಾರ್ಯನಿರ್ವಹಿಸದೆ ಬರೇ ಅಲಂಕಾರಕ್ಕಷ್ಟೇ ಎನ್ನುಂತಾಗಿದೆ.
ಪಟ್ಟಣಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಬಂದಾಗ ಸಾರ್ವಜನಿಕರು ಇದನ್ನು ಅವರ ಗಮನಕ್ಕೆ ತಂದಿದ್ದರು. ನಗರಸಭೆಯವರು ವಿದ್ಯುತ್ ವೆಚ್ಚವನ್ನು ಭರಿಸುತ್ತಿದ್ದುದನ್ನು ನಿಲ್ಲಿಸಿದ್ದರಿಂದ ಅದನ್ನು ಸ್ಥಗಿತಗೊಳಿಸಲಾಗಿದೆ ಎನ್ನುವ ಹೇಳಿಕೆಗಳು ಕೇಳಿಬಂದವು. ನಗರಸಭೆಯಲ್ಲಿ ಕೇಳಿದರೆ ಹಳೆಯ ಕೌನ್ಸಿಲ್ ವಿದ್ಯುತ್ ಬಿಲ್ ಭರಿಸಲು ಅನುಮತಿ ನೀಡಿತ್ತು.
ಈಗಿರುವ ಕೌನ್ಸಿಲ್ ಸಭೆ ನಡೆದ ನಂತರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವೆಂದು ಮೂಲಗಳು ತಿಳಿಸಿವೆ. ಸಿಗ್ನಲ್ ದೀಪ ಅಳವಡಿಸಿ: ಅದಲ್ಲದೆ ಸಿಗ್ನಿಲ್ ದೀಪ ಕೆಟ್ಟರೆ ಅದನ್ನು ದುರಸ್ತಿಪಡಿಸಲು ತಿಂಗಳುಗಳೇ ಬೇಕಾಗುತ್ತದೆ. ಎಲ್ಲಾ ದಿಕ್ಕುಗಳಿಂದ ಬರುವ ವಾಹನಗಳ ಚಾಲಕರೂ ತರಾತುರಿಯಲ್ಲಿರುತ್ತಾರೆ.
ಹೀಗಾಗಿ ಅಲ್ಲಿ ಮಳೆಯಿಂದಾಗಿ ರಸ್ತೆಯಲ್ಲಿ ಅನಿವಾರ್ಯವಾಗಿ ಓಡಾಡುವ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಾರ್ವಜನಿಕರ ಪಾಡನ್ನು ಕೇಳುವವರೇ ಇಲ್ಲ. ಈಗಲಾದರೂ ನಗರಸಭೆ, ಪೋಲಿಸ್ ಇಲಾಖೆ ಮತ್ತು ಸಂಬಂಧಿಸಿದವರು ಸಿಗ್ನಲ್ ದೀಪಗಳನ್ನು ಸರಿಪಡಿಸಿದರ್ ೆವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅನುಕಾಲ ಕಲ್ಪಿದಂತಾಗುತ್ತದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

