ಬೇಗ ಭಾಷಣ ಮಾಡ್ಸಿ, ನಾವು ಹೋಗ್ಬೇಕು
ಹೀಗಂತ ಸಾಹಿತ್ಯ ರಸದೌತಣದ ವೇಳೆ ವರಾತ ತೆಗೆದವರು ನೂತನ ಸಚಿವರ ಹಿಂಬಾಲಕರು. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ವೇದಿಕೆಯಲ್ಲಿ ಆಸೀನರಾಗಿ ಸಮ್ಮೇಳನಾಧ್ಯಕ್ಷರ ಭಾಷಣವನ್ನು ಗಂಭೀರವಾಗಿ ಪರಿಗಣಿಸಿ ಅರ್ಥೈಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು. ಇಂತಹ ಸಂದರ್ಭದಲ್ಲಿ ವೇದಿಕೆ ಕೆಳಗಿದ್ದ ಸಚಿವರ ಹಿಂಬಾಲಕರ ಗುಂಪಿಗೆ ಸಚಿವರನ್ನು ವೇದಿಕೆಯಿಂದ ಆದಷ್ಟು ಶೀಘ್ರವಾಗಿ ಕರೆದೊಯ್ಯುವ ತಹತಹ. ಇದಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರು.
ಸಮ್ಮೇಳನಾಧ್ಯಕ್ಷರ ಭಾಷಣ ಮುಗಿಯುತ್ತಿದ್ದಂತೆ ಸಚಿವರ ಭಾಷಣಕ್ಕೆ ಅವಕಾಶ ಕಲ್ಪಿಸಿ, ನಾವು ತೀರ್ಥಹಳ್ಳಿಗೆ ಹೋಗ್ಬೇಕು ಎಂದು ಆ ತಂಡ ಶಿಫಾರಸು ಸಹ ಮಾಡಿತು. ಸಚಿವರಿಂದ ಭಾಷಣ ಮಾಡಿ ಕಳಿಸಲಿ, ನಂತರ ರಾತ್ರಿ ಎಷ್ಟು ಹೊತ್ತು ಬೇಕಾದರೂ ಭಾಷಣ ಮಾಡಿಕೊಳ್ಳಲಿ ಎಂಬ ಕುಹಕ ಮಾತುಗಳು ತೂರಿಬಂತು. ಇಷ್ಟೆಲ್ಲಾ ನಡೆದರೂ ಸಚಿವರು ಮಾತ್ರ ಗಹನವಾಗಿ ಸಮ್ಮೇಳನದೊಳಗೆ ಮುಳುಗಿದ್ದು ವಿಶೇಷ.
ಇಂದು ಕವಿತೆಗಳ ಸುನಾಮಿ
ಭಾನುವಾರ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆಗಳ ಸುನಾಮಿಯೊಂದು ಏಳಲಿದೆ. ಎನ್ಇಎಸ್ ಸಭಾಂಗಣದಲ್ಲಿ ಕಾವ್ಯಧಾರೆ ಹರಿಯಲಿ ಕಾರ್ಯಕ್ರಮದಲ್ಲಿ ಜಿಲ್ಲೆಯ 20 ಕವಿಗಳು ಕವಿತೆಗಳನ್ನು ಪ್ರಸ್ತುತಪಡಿಸುವರು. ಪುಟ್ಟ ಮಿಂಚಿನ ಗೊಂಚಲು ಶೀರ್ಷಿಕೆಯ ಕಾರ್ಯಕ್ರಮದಲ್ಲಿ 36 ಮಕ್ಕಳು ತಮ್ಮ ಕವಿತೆಯನ್ನು ಪ್ರಸ್ತುತಪಡಿಸುವರು. ಅದೇ ರೀತಿ ಸಾಲುದೀಪ ಬೆಳಗಲಿ ಶೀರ್ಷಿಕೆಯ ಕಾರ್ಯಕ್ರಮದಲ್ಲಿ 25, ಜೀವದನಿ ಮಿಡಿಯಲಿ ಕವಿಗೋಷ್ಠಿಯಲ್ಲಿ 18 ಕವಿಗಳು ಕವಿತೆ ಪ್ರಸ್ತುತಪಡಿಸುವರು. ಒಟ್ಟಾರೆ 8ನೇ ಸಾಹಿತ್ಯ ಸಮ್ಮೇಳನ ಮಕ್ಕಳು ಸೇರಿದಂತೆ ಒಟ್ಟು 100 ಕವಿಗಳಿಗೆ ವೇದಿಕೆ ಕಲ್ಪಿಸುವುದು ಒಂದು ದಾಖಲೆಯೇ ಸರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

