ಭಿತ್ತಿಯಲ್ಲಿ ಮೂಡಿದ ಸಾಹಿತಿಗಳು
ಕುವೆಂಪು ಮಹಾಮಂಟಪ, ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆವರಣದಲ್ಲಿ ಡಾ. ಕುಂ. ವೀರಭದ್ರಪ್ಪ, ನಾ. ಡಿಸೋಜಾ, ಪುಂಡಲೀಕ ಹಾಲಂಬಿ, ಪ್ರೊ. ಜಿ.ಕೆ. ಗೋವಿಂದರಾವ್, ಪ್ರೊ. ಚ. ಸರ್ವಮಂಗಳ ಮತ್ತು ಡಾ.ಎಚ್.ಎಂ. ಮಹೇಶ್ವರಯ್ಯ ಅವರನ್ನು ಕಂಡು ಸಾಹಿತ್ಯಾಸ್ತಕರು ಪುಳಕಿತರಾಗಿದ್ದರು.
ಇವರೇನು ದೈಹಿಕವಾಗಿ ಅಲ್ಲಿರಲಿಲ್ಲ. ಅವರು ಪಾಲ್ಗೊಳ್ಳುವ ಗೋಷ್ಠಿಗಳು ನಡೆಯುವುದಕ್ಕೆ ಇನ್ನೂ ಒಂದು ದಿನ ಬಾಕಿ ಇತ್ತು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯೆ ಸಿ.ಎಸ್. ಕಾತ್ಯಾಯಿನಿ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಚಿತ್ರಕಲಾವಿದರಿಂದ ಸ್ಥಳದಲ್ಲೇ ಚಿತ್ರಬರೆಯುವ ಪ್ರಾತ್ಯಕ್ಷತೆ ಮತ್ತು ಛಾಯಚಿತ್ರ ಪ್ರದರ್ಶನದಲ್ಲಿ ಇವೆರಲ್ಲ ಛಾಯಚಿತ್ರ ಕಲಾವಿದರ ಕುಂಚದಲ್ಲಿ ಅರಳಿದ್ದರು.
ಸಿ.ಎಸ್. ಗರಗ್, ಸಿ. ಚಂದ್ರಶೇಖರ್, ಅಶೋಕ ವಾಲಿಕರ್, ಕೆ.ಬಿ. ವಸಂತಕುಮಾರ್, ಬಿ.ವಿ. ಸುರೇಶ್, ಚಿಕ್ಕಮಠ್, ಬಿ.ಜೆ. ರಾಜಶೇಖರ್, ಐ.ಬಿ. ಬಬಲೇಶ್ವರ. ಜಿ.ಎನ್. ಮಾಲತೇಶ್ ಹಾಗೂ ರಾಜೇಶ್ ಅವರ ತಂಡ ಈ ಎಲ್ಲಾ ಸಾಹಿತಿಗಳ ಭಾವಚಿತ್ರಗಳನ್ನು ತಮ್ಮ ಕುಂಚದಲ್ಲಿ ಚಿತ್ರಿಸಿ, ಸಾಹಿತ್ಯ ಪ್ರೇಮಿಗಳಿಗೆ ರಸದೌತಣ ನೀಡಿದರು. ಇದರೊಂದಿಗೆ ಪ್ರಸ್ತುತ ನಡೆಯುತ್ತಿರುವ ಪರಿಸರದ ನಾಶ, ಮರಗಳ ಕಡಿತಲೆಗಳನ್ನು ಬಿಂಬಿಸುವಂತಹ, ಹೆಣ್ಣನ್ನು ಮರಗಳ ಕಡಿತಲೆಗೆ ಹೋಲಿಕೆ ಮಾಡಿ, ನನ್ನನ್ನು ರಕ್ಷಣೆ ಮಾಡಿ ಎಂದು ಮಾನವನಲ್ಲಿ ಆಗಲಾಚುವಂತ ಛಾಯಚಿತ್ರಗಳು ಪ್ರೇಕ್ಷಕರನ್ನು ಆಕರ್ಷಿಸಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

