ಶಿವಮೊಗ್ಗ

ಜನತೆಗೆ ಡೆಂಘೀ ಜತೆಗೆ ಚಿಕೂನ್ ಗೂನ್ಯಾ ಭೀತಿ

Published On :

ಕ.ಪ್ರ.ವಾರ್ತೆ ಶಿರಾಳಕೊಪ್ಪ  ಜೂ.12
ಡೆಂಘೀ ಮಾರಿ ವ್ಯಾಪಕವಾಗಿ ಪತ್ತೆ ಆಗುತ್ತಿರುವ ಬೆನ್ನ ಹಿಂದೆಯೇ ಈ ಹಿಂದೆ ಜನತೆಯನ್ನು ತಲ್ಲಣಗೊಳಿಸಿದ್ದ   ಚಿಕೂನ್ ಗುನ್ಯಾ ಮತ್ತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆಂತಕ ಮೂಡಿಸಿದೆ.
ಹಾವೇರಿ ಜಿಲ್ಲೆಯ ಗಡಿಭಾಗವಾದ ಚಿಕ್ಕೇರೂರ ಭಾಗದಿಂದ ಕಾಣಿಸಿಕೊಂಡಿರುವ ಚಿಕೂನ್ ಗೂನ್ಯಾ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಈಗ ಶಿರಾಳಕೊಪ್ಪ ಹತ್ತಿರದ ಮಳೂರ ಗ್ರಾಮದಲ್ಲಿಯೂ ಇತ್ತೀಚೆಗೆ ತೀವ್ರವಾಗಿ ವೈರಲ್ ಫೀವರ್ ಕಾಣಿಸಿಕೊಂಡಿದೆ.
ಕೈಕಾಲು ನೋವು: ಗ್ರಾಮದ ಗುತ್ಯಪ್ಪ ಎಂಬುವವರಿಗೆ ಕೆಲದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು, ಅವರಿಗೆ ಮೈಕೈನೋವಿನ ಜೊತೆ ಮೊಣಕಾಲು, ಮೊಣಕೈ ನೋವೂ ಕಾಣಿಸಿಕೊಂಡಿದೆ. ಹಾಗೆಯೇ ಬಾವೂ ಸಹ ಕಾಣಿಸಿಕೊಂಡಿದ್ದು, ಶಿರಾಳಕೊಪ್ಪ ಖಾಸಗಿ ವೈದ್ಯರು ಇದು ಚಿಕೂನ್ ಗುನ್ಯಾ ಇರಬಹುದೆಂದು ಶಂಕಿಸಿದ್ದಾರೆ.
ಮಲ್ಲೇನಹಳ್ಳಿ ಗ್ರಾಮದಲ್ಲಿ ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರು ತೀವ್ರ ಮೈಕೈ ನೋವಿನಿಂದ ಬಳಲುತ್ತಿರುವದಾಗಿ ಗ್ರಾಮದ ಎಪಿಎಂಸಿ ಮಾಜಿ ನಿರ್ದೇಶಕ ಬಸವರಾಜ್ ಪತ್ರಿಕೆಗೆ ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಶಿರಾಳಕೊಪ್ಪ ಭಾಗದಲ್ಲಿ ಪ್ರತಿ ಮನೆಯಲ್ಲಿ ಚಿಕೂನ್ ಗೂನ್ಯಾ ದಿಂದ ನರಳಿ ಕೆಲವರು ಈವರೆಗೆ ಚೇತರಿಸಿಕೊಳ್ಳಲೂ ಆಗದೇ ಇನ್ನೂ ನೋವು ಉಳಿದುಕೊಂಡಿದೆ ಎಂದು ನೋವಿನ ಕತೆ ಹೇಳುತ್ತಾರೆ.ಅಂತಹ ಚಿಕೂನ್ ಗೂನ್ಯಾ ಹೆಸರನ್ನು ಮತ್ತೆ ಕೇಳಿದಾಕ್ಷಣಾ ಬೆಚ್ಚಿಬೀಳುವಂತಾಗಿದೆ.
ಶಿರಾಳಕೊಪ್ಪ ಸೇರಿದಂತೆ ಈ ಭಾಗದಲ್ಲಿ ಪ್ರಾರಂಭದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಗ್ರಾಮಸ್ಥರು ಕೃಷಿ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ ಚಿಕೂನ್ ಗೂನ್ಯಾ ಹಬ್ಬುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ರೋಗ ಬಂದಲ್ಲಿ ಕೆಲಸಕಾರ್ಯಗಳ ಗತಿ ಏನು ಎಂದು ಚಿಂತಿಸುವಂತಾಗಿದೆ ಎಂದು ರೈತರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.