ಶಿವಮೊಗ್ಗ

ಸರ್ಕಾರಿ ನೌಕರರ ಸಂಘ ಉದ್ಘಾಟನೆ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಜೂ.13
ಗ್ರಂಥಾಲಯ, ಪುಟ್ಟ ಹವಾನಿಯಂತ್ರಿತ ಸಭಾಂಗಣ, ಭೋಜನಶಾಲೆ, ಕಚೇರಿ, ವಸತಿ ವ್ಯವಸ್ಥೆ ಹೊಂದಿದ್ದ ಸುಸಜ್ಜಿತ ಕಟ್ಟಡವನ್ನು ಹೊಂದಿದ ರಾಜ್ಯದ ಮೊಟ್ಟ ಮೊದಲ ರಾಜ್ಯ ಸರ್ಕಾರಿ ನೌಕರರ ಸಂಘವೆಂಬ ಹೆಗ್ಗಳಿಕೆ ಈಗ ಶಿವಮೊಗ್ಗ ಜಿಲ್ಲಾ ಸಂಘದ್ದಾಗಿದೆ. ನಗರದ ಆರ್‌ಟಿಓ ಕಚೇರಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಈ ಕಟ್ಟಡದ ಉದ್ಘಾಟನಾ ಸಮಾರಂಭವು ಜೂ.20ರಂದು ನಡೆಯಲಿದ್ದು, ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಉದ್ಘಾಟಿಸುವರು.
ಸಂಘದ ಜಿಲ್ಲಾಧ್ಯಕ್ಷ ರಘುರಾಮ್ದೇವಾಡಿಗ ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಈ ಕಟ್ಟಡ ನಿರ್ಮಾಣಕ್ಕೆ ಸರ್ಕಾರಿ ನೌಕರರ ಒಂದು ದಿನದ ವೇತನದಿಂದ 96.5 ಲಕ್ಷ, ರಾಜ್ಯ ಸರ್ಕಾರದಿಂದ 50 ಲಕ್ಷ, ಕೆ.ಎಸ್. ಈಶ್ವರಪ್ಪ ಅವರ ಶಾಸಕರ ನಿಧಿಯಿಂದ 13 ಲಕ್ಷ, ಬಿ.ವೈ. ರಾಘವೇಂದ್ರ ಸಂಸದರ ನಿಧಿಯಿಂದ 15 ಲಕ್ಷ, ಆಯನೂರು ಮಂಜುನಾಥ್ ಅವರ ರಾಜ್ಯಸಭಾ ಸದಸ್ಯರ ನಿಧಿಯಿಂದ 5 ಲಕ್ಷ ಹಾಗೂ ಡಿ.ಹೆಚ್. ಶಂಕರಮೂರ್ತಿ ಅವರ ಶಾಸಕರ ನಿಧಿಯಿಂದ 2 ಲಕ್ಷ ಗಳನ್ನು ಪಡೆದುಕೊಳ್ಳಲಾಗಿದೆ ಎಂದರು.
ಜೂ.20ರಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಮ್ಮೇಳನವನ್ನು ಏರ್ಪಡಿಸಲಾಗಿದ್ದು, ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ಸಮ್ಮೇಳನವನ್ನು ಉದ್ಘಾಟಿಸುವರು ಎಂದರು.
ಜಿಲ್ಲೆಯ ಶಾಸಕರು ಭಾಗಿ: ಭೋಜನಶಾಲೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್, ಮುಖ್ಯ ಸಭಾಂಗಣವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಬಿ.ಎಸ್. ಯಡಿಯೂರಪ್ಪ, ವಸತಿ ಸಮುಚ್ಫಯವನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಗ್ರಂಥಾಲಯವನ್ನು ಸಂಸದ ಬಿ.ವೈ. ರಾಘವೇಂದ್ರ ಹಾಗೂ ವಸತಿ ಕೊಠಡಿಗಳನ್ನು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ಉದ್ಘಾಟಿಸುವರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವೈಶಿಷ್ಟ್ಯಗಳ ಕುರಿತು ಆಯ್ದ ಬರಹಗಾರರು ಹಾಗೂ ಸರ್ಕಾರಿ ನೌಕರರು ಬರೆದ ಲೇಖನಗಳ ಸ್ಮರಣ ಸಂಚಿಕೆಯನ್ನು ಸಂಘದ ರಾಜ್ಯಾಧ್ಯಕ್ಷ ಎಲ್. ಭೈರಪ್ಪ ಬಿಡುಗಡೆಗೊಳಿಸುವರು.
ಕಾರ್ಯಕ್ರಮದಲ್ಲಿ ಶಾಸಕರಾದ ಪ್ರಸನ್ನಕುಮಾರ್, ಅಪ್ಪಾಜಿಗೌಡ, ಮಧು ಬಂಗಾರಪ್ಪ ಹಾಗೂ ಶಾರದಾ ಪೂರ್ಯಾನಾಯ್ಕ ಮತ್ತು ಈ ಹಿಂದೆ ಜಿಲ್ಲೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿಗಳಾದ ಪೊನ್ನುರಾಜ್, ಹೇಮಚಂದ್ರ, ರಮಣಗುಪ್ತ, ಸಂಜಯ್ ಬಿಜ್ಜೂರ್, ಎಂ.ಕೆ. ಶ್ರೀರಂಗಯ್ಯ ಸೇರಿದಂತೆ ಅನೇಕ ಗಣ್ಯರನ್ನು ಅಭಿನಂದಿಸಲಾಗುವುದು.
ಅಂದು ಮಧ್ಯಾಹ್ನ 2.30ಕ್ಕೆ ಪ್ರಜಾಸ್ನೇಹಿ ಆಡಳಿತ ವ್ಯವಸ್ಥೆ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದ್ದು, ಖ್ಯಾತ ಬರಹಗಾರ ಪ್ರೊ. ನಟೇಶ್ ಅವರು ಉಪನ್ಯಾಸ ನೀಡುವರು.
ಪದಾಧಿಕಾರಿಗಳ ಚುನಾವಣೆ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ಜುಲೈ ಣಣರಂದು ನಾಮಪತ್ರ ಸಲ್ಲಿಕೆ, ಜುಲೈ ಣಣರಂದು ಮತದಾನ ನಡೆಯಲಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಪಾಲಕ್ಷಪ್ಪ, ಖಜಾಂಚಿ ಹಾಲಪ್ಪ, ಮಾ.ಸ. ನಂಜುಂಡಸ್ವಾಮಿ, ಹೇರಂಬ, ಶಾಂತರಾಜ್, ಈಶ್ವರ, ಬಸವನಗೌಡ, ಮೋಹನ್ ಕುಮಾರ್, ಪ್ರವೀಣ್ ಮಹಿಷಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.