ಶಿವಮೊಗ್ಗ

ಜುಲೈ 3ರಿಂದ ಭೂಸೇನಾಗೆ ನೇಮಕಾತಿ

Published On :

ಶಿವಮೊಗ್ಗ- ಮಂಗಳೂರಿನ ಸೈನಿಕ ನೇಮಕಾತಿ ಘಟಕವು ಜುಲೈ 3ರಿಂದ 10ರವರೆಗೆ ಚಿಕ್ಕಮಗಳೂರಿನ ಸೆಂಟೆನರಿ ಕ್ರೀಡಾಂಗಣ ಜ್ಯೋತಿ ನಗರದಲ್ಲಿ ಭೂ ಸೈನ್ಯದಲ್ಲಿಯ ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್, ಸ್ಟೋರ್ ಕೀಪರ್ ಟೆಕ್ನಿಕಲ್, ಸೋಲ್ಜರ್ ಕುಕ್ ಹುದ್ದೆಗಳಿಗೆ ನೇಮಕಾತಿ ರ್ಯಾಲಿ ನಡೆಯಲಿದೆ. ಅಭ್ಯರ್ಥಿಯು 17 ವರ್ಷ 6 ತಿಂಗಳಿಂದ 23 ವರ್ಷದೊಳಗಿನವರಾಗಿರಬೇಕು. ಜುಲೈ 4ರಂದು ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್, ಸ್ಟೋರ್ ಕೀಪರ್‌ಟೆಕ್ನಿಕಲ್, ಸೋಲ್ಜರ್ ಕುಕ್ ಹುದ್ದೆಗಳಿಗೆ, ಜುಲೈ 5ರಂದು ಸೋಲ್ಜರ್ ಟ್ರೇಡ್‌ಮನ್ ಹುದ್ದೆಗೆ, ಜುಲೈ 8ರಂದು ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಹಾಗೂ ಜುಲೈ 10ರಂದು ಡಿ.ಎಸ್.ಸಿ. (ಜನರಲ್ ಡ್ಯೂಟಿ ಮಾಜಿ ಸೈನಿಕ) ಹುದ್ದೆಗೆ ನೇಮಕಾತಿ ರ್ಯಾಲಿ ನಡೆಯಲಿದ್ದು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. 2ನೇ ಪಿಯುಸಿಯಲ್ಲಿ ಕನಿಷ್ಟ 50 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, ಕನಿಷ್ಟ ಶೇ.40 ಅಂಕ ಪಡೆದಿರಬೇಕು. ಅಭ್ಯರ್ಥಿಯು 10ನೇ ಹಾಗೂ 12ನೇ ತರಗತಿಯಲ್ಲಿ ಇಂಗ್ಲೀಷ್, ಗಣಿತ ಮತ್ತು ಅಕೌಂಟ್ಸ್ ಅಥವಾ ಬುಕಕ್ಕೀಪಿಂಗ್‌ನಲ್ಲಿ ಅಭ್ಯಸಿಸಿ ಶೇ.40 ಅಂಕ ಪಡೆದಿರಬೇಕು. ಅರ್ಹ ಅಭ್ಯರ್ಥಿಗಳು ವಿದ್ಯಾರ್ಹತೆಯ ಅಂಕಪಟ್ಟಿ ನಕಲು, ಪಾಸ್‌ಪೋರ್ಟ್ ಅಳತೆಯ 15 ಛಾಯಾಚಿತ್ರ (ನೆಗೆಟಿವ್‌ಸಹಿತ), ಮಾಜಿ ಸೈನಿಕರ ಮಕ್ಕಳಾಗಿದ್ದಲ್ಲಿ ಡಿಸ್‌ಚಾರ್ಜ್ ಪುಸ್ತಕ ಹಾಗೂ 2 ನಕಲು ಪ್ರತಿ, 18ಕ್ಕಿಂತ ಕಡಿಮೆ ವಯಸ್ಸಿನ ಅಭ್ಯರ್ಥಿಗಳು ಛಾಪಾ ಕಾಗದದ ಮೇಲೆ ಪೋಷಕರಿಂದ ಪಡೆದ ಒಪ್ಪಿಗೆ ಪತ್ರ ಹಾಗೂ ತಹಶೀಲ್ದಾರರಿಂದ ಪಡೆದ ವಾಸಸ್ಥಳದ ದೃಢೀಕರಣ ಮತ್ತು ಜಾತಿ ಪ್ರಮಾಣ ಪತ್ರವನ್ನು ಹಾಜರುಪಡಿಸಲು ಸಿದ್ಧರಿರುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಮಾಹಿತಿಗಾಗಿ ಉಪನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಇವರ ದೂ.ಸಂ.- 08182 2458376 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.