ಶಿವಮೊಗ್ಗ

ಡಿವೈಡರ್ ತೆರವಿಗೆ ತಾಲೂಕು ಕಾಂಗ್ರೆಸ್ ವಿರೋಧ

Published On :

ಕ.ಪ್ರ.ವಾರ್ತೆ  ಸೊರಬ  ಜೂ.17 ಪಟ್ಟಣ ಅಭಿವೃದ್ಧಿ ಹಿನ್ನೆಲೆಯಲ್ಲಿ ಸೊರಬ ಶಿರಾಳಕೊಪ್ಪ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದ್ದು, ಈ ರಸ್ತೆಯಲ್ಲಿನ ಪೆಟ್ರೋಲ್ ಬಂಕ್ ಇದ್ದ ಡಿವೈಡರನ್ನು ಪ್ರಭಾವಿ ವ್ಯಕ್ತಿಯೊಬ್ಬರು ಒಡೆಸಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಎಡಿ ಪೆಟ್ರೋಲ್ ಬಂಕ್ ಎದುರು ಅಪಘಾತ ವಲಯ ಎಂದು ಈ ಹಿಂದೆ ಡಿವೈಡರ್ ತೆರವುಗೊಳಿಸಿರಲಿಲ್ಲ. ಆದರೆ ಈಗ ಪಿಡಬ್ಲ್ಯೂಡಿ ಎಇಇ ಎ.ಬಾಲನ್ ರಾಜಕೀಯ ಪ್ರಭಾವಕ್ಕೊಳಗಾಗಿ ಡಿವೈಡರ್ ತೆರವುಗೊಳಿಸಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೆ. ಮಂಜುನಾಥ್ ಆರೋಪಿಸಿದ್ದಾರೆ.
ರಾತ್ರೋರಾತ್ರಿ ತೆರವು: ಈ ಪೆಟ್ರೋಲ್‌ಬಂಕ್ ಜೆಡಿಎಸ್ ಮುಖಂಡ ಶ್ರೀಪಾದರಾವ್ ನಿಸರಾಣಿ ಅವರಿಗೆ ಸೇರಿದ್ದು, ಬಂಕ್‌ಗೆ ವಾಹನ  ತೆರಳಲು ಅನುಕೂಲವಾಗುವಂತೆ ಇದ್ದ ಡಿವೈಡರನ್ನು ರಾತ್ರೋರಾತ್ರಿ ಒಡೆದು ಹಾಕಲಾಗಿದೆ. ಈ ಜಾಗವನ್ನು ಅಪಘಾತ ವಲಯ ಎಂದು ಗುರುತಿಸಲಾಗಿದ್ದರೂ, ಪರಿಗಣಿಸದ ಎಂಜಿನಿಯರರು ಪೆಟ್ರೋಲ್ ಬಂಕ್‌ಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಒಡೆಸಿರುವುದು ಖಂಡನೀಯ ಎಂದಿದ್ದಾರೆ.
ಈ ಕೃತ್ಯ ಎಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಎಇಇ ಬಾಲನ್ ಅವಧಿಯಲ್ಲಿ ನಡೆದ ಎಲ್ಲಾ ಕಾಮಗಾರಿಗಳನ್ನೂ ಲೋಕಾಯುಕ್ತರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಅಧಿಕಾರಿ ವಿರುದ್ಧ ಸ್ಥಳೀಯ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ ಅವರು ಜಿಲ್ಲಾ ಸಚಿವ ಕಿಮ್ಮನೆ ರತ್ನಾಕರ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ, ಜಿಲ್ಲಾಧಿಕಾರಿ ಹಾಗೂ ಸೂಪರಿಂಟೆಂಡೆಂಟ್ ಎಂಜಿನಿಯರ್ ಅವರುಗಳಿಗೆ  ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ದೂರು ನೀಡುವ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್‌ನ ತಬಲಿ ಬಂಗಾರಪ್ಪ, ಜೆ. ಶಿವಾನಂದಪ್ಪ, ತಾಪಂ ಸದಸ್ಯ ಕೆ. ಅಜ್ಜಪ್ಪ, ಪಪಂ ಸದಸ್ಯ ಎಂ.ಡಿ. ಉಮೇಶ್, ಮಂಚಿ ಹನುಮಂತಪ್ಪ, ಕೆ. ಡಾಕಪ್ಪ,ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.