ಕೆಜೆಪಿ ಮೈತ್ರಿಗೆ ಕಾಂಗ್ರೆಸ್ ಮುಖಂಡರ ವಿರೋಧ
ಶಿರಾಳಕೊಪ್ಪ: ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಕೆಜೆಪಿ ಹೊಂದಾಣಿಕೆ ಬಗ್ಗೆ ಜಿಲ್ಲಾ ಕಾಂಗ್ರೆಸ್ ಕೈಗೊಂಡ ನಿರ್ಣಯದ ಬಗ್ಗೆ ಸ್ಥಳಿಯ ಕಾಂಗ್ರೆಸ್ ಮುಖಂಡರು ಮತ್ತು ಪಕ್ಷೇತರರು ಸಭೆ ಸೇರಿ ಈ ಹೊಂದಾಣಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಶಿರಾಳಕೊಪ್ಪ ಹತ್ತಿರದ ಬಳ್ಳಿಗಾವಿ ಯಾತ್ರಿ ನಿವಾಸದಲ್ಲಿ ಮಾಜಿ ಜಿಪಂ ಅಧ್ಯಕ್ಷ ಫಕ್ಕೀರಪ್ಪ ಕಾಂಗ್ರೆಸ್ ಮುಖಂಡ ಜಬ್ಬಾರಸಾಬ್ ಹಾಗು ಇತರ ನೇತ್ರತ್ವದಲ್ಲಿ ಸಭೆಸೇರಿ ಪಕ್ಷೇತರರರೊಂದಿಗೆ ಒಮ್ಮತದ ತೀರ್ಮಾನ ಕೈಗೊಂಡು ಕಾಂಗ್ರೆಸ್ ಪಕ್ಷೇತರರೊಂದಿಗೆ ಸೇರಿ ಆಡಳಿತ ನಡೆಸುತ್ತೇವೆ ಎಂಬ ಒಮ್ಮತದ ತೀರ್ಮಾನ ಕೈಗೊಂಡಿರುವದಾಗಿ ತಿಳಿಸಿದರು.
ಕಾಂಗ್ರೆಸ್ ನಾಯಕರಾದ ಶಾಂತವೀರಪ್ಪಗೌಡ, ಪಕ್ಷದ ಜಿಲ್ಲಾ ಕಿಸಾನ್ ಸೆಲ್ ಅಧ್ಯಕ್ಷ ನಗರದ ಮಹದೇವಪ್ಪ, ಗೋಣಿ ಮಾಲತೇಶ್ ಮೀಸಲಾತಿ ಬಗ್ಗೆ ಒಮ್ಮತದ ಒಲವನ್ನು ತೋರಿದ್ದು, ಅವರ ಮಾರ್ಗದರ್ಶನದಲ್ಲಿ ಚರ್ಚಿಸಿ ಇಂದು ತೀರ್ಮಾನಕೈಗೊಳ್ಳಲಾಯಿತು ಎಂದು ಫಕ್ಕೀರಪ್ಪ ಪತ್ರಿಕೆಗೆ ತಿಳಿಸಿದರು.
ಕೆಜೆಪಿ ಕಳೆದ ಪಪಂ ಚುನಾವಣೆಯಲ್ಲಿ ಪಟ್ಟಣದ ಮತದಾರರ ತಿರಸ್ಕಾರಕ್ಕೆ ಒಳಗಾಗಿದೆ, ಅಂತಹ ಪಕ್ಷದೊಂದಿಗೆ ಯಾವಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವದಿಲ್ಲ. ಪಟ್ಟಣದ ಅಭಿವೃದ್ದಿಗೆ ಕಾಂಗ್ರೆಸ್ ಗಮನಕೊಡಲಿದೆ ಎಂದ ಅವರು ಈವರೆಗೆ ಯಾವ ಮೀಸಲಾತಿ ಬಂದಿಲ್ಲವೋ ಅಂತಹ ಮೀಸಲಾತಿಗೆ ಒತ್ತಾಯಿಸುವದಾಗಿ ತಿಳಿಸಿದರು.
ಪಕ್ಷದ ಪಪಂ ಸದಸ್ಯ ಪತ್ತಿಜಾಫರ್ ಪತ್ರಿಕೆಗೆ ಹೇಳಿಕೆ ನೀಡಿ, ಕೆಜೆಪಿ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದವರು ಹೇಳಿದ್ದಾರೆ.
ಕಾರ್ಯಕರ್ತರ ಸಭೆ
ಶಿವಮೊಗ್ಗ: ಜಿಲ್ಲಾ ಛಲವಾದಿ ಮಹಾಸಭಾ ಜೂನ್ 23ರಂದು ಜಿಲ್ಲಾ ಸರ್ಕಾರಿ ನೌಕರರ ಭವನ ಆರ್ಟಿಓ ಕಚೇರಿ ಎದುರು ಮಹಾಸಭಾದ ಕಾರ್ಯಕರ್ತರ ಸಭೆ ಕರೆದಿದೆ. ಜಿಲ್ಲಾ ಅಧ್ಯಕ್ಷ ಎ.ಡಿ. ಶಿವನಂದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಸಭೆಗೆ ಆಗಮಿಸುವಂತೆ ಸಭಾ ತಿಳಿಸಿದೆ. ಇದೇ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದಿಸಿದೆ ಎಂದು ಸಭಾದ ಕಾರ್ಯದರ್ಶಿ ಗಾಜನೂರು ಮಂಜುನಾಥ ವಿ. ತಿಳಿಸಿದ್ದಾರೆ. ವಿವರಗಳಿಗಾಗಿ- 9480169644.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

