ಅಧಿಕಾರಿಗಳ ನಿರ್ಲಕ್ಷ್ಯ: ಹದಗೆಡುತ್ತಿರುವ ಪಟ್ಟಣದ ನೈರ್ಮಲ್ಯ
ಸೊರಬ: ಪಟ್ಟಣ ಪಂಚಾಯತಿ ಚುನಾವಣೆ ಕಳೆದು ಹಲವು ತಿಂಗಳಾದರೂ ಇನ್ನೂ ಚುನಾಯಿತ ಪ್ರತಿನಿಧಿಗಳಿಗೆ ಆಡಳಿತ ಹಸ್ತಾಂತರವಾಗಿಲ್ಲ. ಪ್ರಸ್ತುತ ಅಧಿಕಾರಿಗಳ ಆಡಳಿತವಿದ್ದು, ಪಟ್ಟಣ ನೈರ್ಮಲ್ಯದ ವಿಚಾರದಲ್ಲಿ ಯಾವುದೆ ಲಂಗುಲಗಾಮು ಇಲ್ಲದಂತಾಗಿದೆ.
ಇಲ್ಲಿನ 7 ಮತ್ತು 8 ನೇ ವಾರ್ಡಿನ ಹೋಟೆಲ್ ಹಾಗೂ ಮನೆಗಳ ತ್ಯಾಜ್ಯ ಬಾಕ್ಸ್ ಚರಂಡಿಯಿಂದ ಹರಿದು ಅಂತಿಮವಾಗಿ 8ನೇ ವಾರ್ಡ್ನಿಂದ 10ನೇ ವಾರ್ಡಿಗೆ ಸೇರಲ್ಪಡುವ ಡಕ್ಸ್ ಲ್ಯಾಬ್ನಲ್ಲಿ ಕಟ್ಟಿನಿಂತಿದೆ. ಹೀಗೆ ಸ್ಲಾಬ್ ಕಟ್ಟಿರುವುದರಿಂದ ವಾರ್ಡ್ನ ಎಲ್ಲ ಚರಂಡಿಗಳಲ್ಲಿ ಕೊಳಚೆ ನೀರು ಮಡುಗಟ್ಟಿದೆ. ಈಗಾಗಲೇ ಈ ರೀತಿ ಕಟ್ಟಿನಿಂತು ಹಲವು ದಿನಗಳೆ ಕಳೆದಿದ್ದು, ಸುತ್ತಲೆಲ್ಲ ದುರ್ನಾತ ಬೀರುತ್ತಿದೆ. ಇಲ್ಲಿ ಅಂಗಡಿ, ಮುಂಗಟ್ಟುಗಳ ನಡುವೆ ವಾಸದ ಮನೆಯೂ ಇರುವುದರಿಂದ ನಿವಾಸಿಗಳಿಗೆ ದಿನದ 24 ತಾಸು ಈ ದುರ್ನಾತ ಕುಡಿಯುವ ದೌರ್ಭಾಗ್ಯ ಬಂದಿದೆ.
ಈಗಾಗಲೆ ಪಪಂ ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕೆ ನಿವಾಸಿಗಳು ಹಲವು ಬಾರಿ ತಂದಾಗಿದೆ. ಅಧಿಕಾರಿಗಳನ್ನು ಕೇಳಿದರೆ ತುಸು ಸುಧಾರಿಸಿ, ಎಂಬ ಸಿದ್ಧ ಉತ್ತರ ನೀಡುತ್ತಾರೆ, ಅತ್ತ ಆಯ್ಕೆಗೊಂಡ ಜನಪ್ರತಿನಿಧಿಗಳನ್ನು ಕೇಳಿದರೆ ನಮಗಿನ್ನೂ ಅಧಿಕಾರ ನೀಡಿಲ್ಲ, ನಮ್ಮ ಮಾತು ಕೇಳುವುದಿಲ್ಲ ಎಂಬ ಹತಾಶ ಮನೋಭಾವ ವ್ಯಕ್ತಪಡಿಸುತ್ತಾರೆ. ಇವರುಗಳ ಈ ಹತಾಶೆ, ಸುಧಾರಿಸುವಿಕೆ ಮಾತನ್ನಷ್ಟೆ ಕೇಳಿರುವ ಇಲ್ಲಿನ ನಿವಾಸಿಗಳ ಸಾಮಾನ್ಯ ಬದುಕು ಚಿಂದಿ ಚಿತ್ರಾನ್ನವಾಗಿದೆ.
ಒಂದೆಡೆ ಸಾಂಕ್ರಮಿಕ ರೋಗದ ಭೀತಿಯಲ್ಲಿರುವ ಜನತೆಗೆ ಈ ತ್ಯಾಜ್ಯದ ಕೊಳಕು ಸಂಗ್ರಹ ಬಹು ದೊಡ್ಡ ತಲೆನೋವಾಗಿದ್ದು, ಯಾರನ್ನು ಕೇಳಬೇಕು, ಏನು ಮಾಡಬೇಕು ಅರಿಯದಾಗಿದ್ದಾರೆ. ಇನ್ನಾದರೂ ಪ್ರಸ್ತುತದ ಆಡಳಿತ ಸ್ವಚ್ಛತೆಗೆ ಮುಂದಾದೀತೆ ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

