ಶಿಕ್ಷಣ ಕೇಂದ್ರಕ್ಕೆ ಒತ್ತಾಯಿಸಿ ಮನವಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.24 ಅಲೆಮಾರಿ ಟೆಂಟ್ ಕಾಲೊನಿಗಳಲ್ಲಿ ಶಿಕ್ಷಣ ಕೇಂದ್ರ ತೆರೆಯುವಂತೆ ಆಗ್ರಹಿಸಿ ಅಲೆಮಾರಿ ಒಕ್ಕೂಟದ ನಿಯೋಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಮನವಿ ಅರ್ಪಿಸಿದೆ. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ಚಾವಡೆ ಲೋಕೇಶ್ ನೇತೃತ್ವದ ತಂಡ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣದ ಹಲವು ಯೋಜನೆ ತಂದರೂ ಅದು ಸಮಾಜದ ಕಟ್ಟಕಡೆ ಸಮುದಾಯವಾದ ಅಲೆಮಾರಿಗಳಗೆ ತಲುಪದೇ ಉಳ್ಳವರ ಪಾಲಾಗುತ್ತಿದೆ. ಅದೇ ರೀತಿ ಅತಿ ಹೆಚ್ಚು ಅಲೆಮಾರಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದ್ದು, ಇಲ್ಲಿ ಶಿಕ್ಷಣಕ್ಕೆ ಒತ್ತು ಕೊಡುವ ಅಶ್ಯಕತೆ ಇದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿತು.
ಭಾಷಣಕ್ಕೆ ಸೀಮಿತ: ಎಲ್ಲರಿಗೂ ಸಮಬಾಳು, ಸಮಪಾಲು ಎಂಬುದು ಬರೀ ಭಾಷಣಕ್ಕೆ ಸೀಮಿತವಾಗಿದೆ. ಸ್ವಾತಂತ್ರ್ಯ ಲಭಿಸಿ 6 ದಶಕ ಕಳೆದರೂ ಅಖಂಡ ಐತಿಹ್ಯ-ಕಲೆ-ಸಂಸ್ಕೃತಿ ಹೊಂದಿರುವ ಈ ಅಲೆಮಾರಿಗಳು ಯಾವುದೇ ಮೂಲ ಸೌಕರ್ಯಗಳಿಲ್ಲದೆ ಗುಡಿ- ಗುಂಡಾರ, ಮರದಡಿ ಕೊಳಕು ಮೋರಿ ಪಕ್ಕದಲ್ಲಿ ಜಾನುವಾರುಗಳಂತೆ ಮಳೆ-ಬಿಸಿಲು -ಚಳಿಯಲ್ಲಿ ಹಿನಾಯ ಜೀವನ ಸಾಗಿಸುತ್ತಿದ್ದಾರೆ.
ಕನಿಷ್ಟ ಪಕ್ಷ ಅವರಿಗೆ ವಿದ್ಯೆಯನ್ನಾದರು ದೊರಕಿಸಿದರೆ ಅವರ ಅನ್ನ, ನೀರು, ಸೂರು ಪಡೆದುಕೊಳ್ಳಲು ಶಿಕ್ಷಣವೆಂಬುದು ಸಂಜೀವಿನಿ ಅಸ್ತ್ರ ಎಂದು ಭಾವಿಸುತ್ತೇವೆ. ಹೀಗಾಗಿ ಶಿಕ್ಷಣ ಕೇಂದ್ರ ಆರಂಭಿಸುವ ಅಗತ್ಯವಿದೆ ಎಂದು ನಿಯೋಗ ವಿವರಿಸಿತು.
ಯಾವುದೇ ಮಾನದಂಡ ವಿಧಿಸದೇ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿರುವ ಅತೀ ಸೂಕ್ಷವಿರುವ ಈ ಸಮುದಾಯಗಳು ವಾಸಿಸುವ ಅಲೆಮಾರಿ ಟೆಂಟ್ ಕ್ಯಾಂಪ್ಗಳಲ್ಲಿ ಅವರಿಗಾಗಿಯೇ ಶಿಕ್ಷಣ ಕೇಂದ್ರ ತೆರೆದು ಅದು ಯಶಸ್ವಿಯಾಗುವಂತೆ ಆಯಾ ಜಿಲ್ಲಾ-ತಾಲೂಕು ಶಿಕ್ಷಣ ಅಧಿಕಾರಿಗಳಿಗೆ ಸ್ವಷ್ಟ ಆದೇಶ ನೀಡಬೇಕು. ಒಂದು ವೇಳೆ ಯೋಜನೆ ವಿಫಲಗೊಂಡರೆ ಆಯಾ ಅಧಿಕಾರಿಗಳನ್ನೇ ನೇರೆ - ಹೊಣೆ ಮಾಡಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಕೇಳಿಕೊಂಡಿತು.
ಶಿಕ್ಷಣ ಸಚಿವರ ಭೇಟಿಯ ಸಂದರ್ಭದಲ್ಲಿ ಅಲೆಮಾರಿ ನಿಯೋಗದ ಜೊತೆಗೆ ಶಿವಮೊಗ್ಗ ಜಿಲ್ಲಾ ಕ್ರಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮತ್ತು ಮಾಜಿ ಶಾಸಕ ಎಚ್.ಎಮ್. ಮೊದಲಾದವರು ಚಂದ್ರಶೇಖರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

