ಶಿವಮೊಗ್ಗ

30ರಂದು ದ್ವಿತೀಯ ಸಾಹಿತ್ಯ ಸಮ್ಮೇಳನ

Published On :

ಕ.ಪ್ರ.ವಾರ್ತೆ  ಸೊರಬ  ಜೂ.27
ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಜೂ. 30ರಂದು ಆನವಟ್ಟಿಯಲ್ಲಿ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ, ಚಿಂತಕ ರಾಜಶೇಖರ್ ಪಾಟೀಲ್ ಆಯ್ಕೆಗೊಂಡಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ನೇತೃತ್ವದ ತಂಡ ರಾಜಶೇಖರ ಪಾಟೀಲರ ಸ್ವಗ್ರಾಮ ನೆಗವಾಡಿಗೆ ತೆರಳಿ ಕುಟುಂಬ ವರ್ಗದವರಿಗೆ ಆದರದ ಅಮಂತ್ರಣ ಕೋರಿದರು.
ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿಯ ಜಯಪ್ರಕಾಶ್, ಎಚ್.ಎಂ. ರಂಗನಾಥ್, ನೃಪತುಂಗ, ಶಿಕಾರಿಪುರ ತಾಲೂಕು ಕಸಾಪ ಅಧ್ಯಕ್ಷ ಸುದರ್ಶನ್, ಪತ್ರಕರ್ತರ ಸಂಘದ ಅಧ್ಯಕ್ಷ ಹುಚ್ಚರಾಯಪ್ಪ, ತಾಲೂಕು ಕಸಾಪ ಅಧ್ಯಕ್ಷ ಮಧುರಾಯ ಶೇಟ್, ಡಿ. ಮಂಜಪ್ಪ, ಶಿವಾನಂದ ಪಾಣಿ, ಷಣ್ಮುಖಾಚಾರ್, ಆನವಟ್ಟಿ ಘಟಕಾಧ್ಯಕ್ಷ ಉಮೇಶ್ ಬಿಚ್ಚುಗತ್ತಿ, ಗೌರವಾಧ್ಯಕ್ಷ ಬಸವನಗೌಡ, ಸಂಜಯ ಡೋಂಗ್ರೆ, ದಯಾನಂದ ಕಲ್ಲೇರ, ಉಮೇಶ್ ಉಡುಗಣಿ, ಸಾ.ಕೆ. ಸುರೇಶ್, ನಾಗೇಂದ್ರಪ್ಪ ಮೊದಲಾದವರು ಇದ್ದರು.
ಉದ್ಘಾಟನೆ: ಸಮ್ಮೇಳನ- ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಮಧುಬಂಗಾರಪ್ಪ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳುವ  ಸಮ್ಮೇಳನವನ್ನು ಬೆಳಗ್ಗೆ 10ಕ್ಕೆ ಕುವೆಂಪು ವಿವಿ ಪ್ರಾಧ್ಯಾಪಕ ಪ್ರೊ. ಸಣ್ಣರಾಮಪ್ಪ ಉದ್ಘಾಟಿಸಲಿದ್ದಾರೆ. ಜಿಪಂ ಅಧ್ಯಕ್ಷರಾದ ಗೀತಾ ಮಲ್ಲಿಕಾರ್ಜುನ್, ತಾಪಂ ಅಧ್ಯಕ್ಷ ಸದಾನಂದಗೌಡ, ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಉಪಾಧ್ಯಕ್ಷ ಮಧುಕೇಶ್ವರ ಪಾಟೀಲ್, ಉದ್ಘಾಟನಾ ಮತ್ತು ಸಮಾರೋಪ ಸಮಾರಂಭದಲ್ಲಿ ಸಂಸದ  ಬಿ.ವೈ.ರಾಘವೇಂದ್ರ, ವಿಪ ಸದಸ್ಯೆ ಭಾರತಿ ಶೆಟ್ಟಿ ಭಾದವಹಿಸಲಿದ್ದಾರೆ.
ಸಮ್ಮೇಳನದ ಅಂಗವಾಗಿ ಬೆಳಿಗ್ಗೆ 8.30ಕ್ಕೆ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಇರುತ್ತದೆ. ಕಾರ್ಯಾಧ್ಯಕ್ಷರಾಗಿ ಗ್ರಾಪಂ ಸದಸ್ಯ ಜೆ. ಚಂದ್ರಶೇಖರಪ್ಪ, ಕಾರ್ಯದರ್ಶಿಯಾಗಿ ತಾಲೂಕು ಕಸಾಪ ಅಧ್ಯಕ್ಷ ಮಧುರಾಯ ಶೇಟ್, ಖಜಾಂಚಿಯಾಗಿ ಶಿವಾನಂದಪಾಣಿ ಒಳಗೊಂಡಂತೆ ವಿವಿಧ ಸಮಿತಿಗಳ ಆಯ್ಕೆ ಪ್ರಕ್ರಿಯೆ ಆಗಿದ್ದು, ಸಮ್ಮೇಳನದಲ್ಲಿ ಪರಿಷತ್ ಸದಸ್ಯರನ್ನು ನೋಂದಾವಣಿ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಮಧುರಾಯಶೇಟ್, ಆನವಟ್ಟಿ ಘಟಕಾಧ್ಯಕ್ಷ ಉಮೇಶ್ ಬಿಚ್ಚುಗತ್ತಿ ತಿಳಿಸಿದ್ದಾರೆ. ಸಮ್ಮೇಳನದ ಯಶಸ್ಸಿಗೆ ಎಲ್ಲ ಕನ್ನಾಡಾಭಿಮಾನಿಗಳು ಸಹಕರಿಸಬೇಕು ಎಂದು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.