ಶಿವಮೊಗ್ಗ

'ಕೇಂದ್ರ ನಾಯಕರ ತೀರ್ಮಾನವೇ ಅಂತಿಮ'

Published On :

ಕ.ಪ್ರ.ವಾರ್ತೆ  ಭದ್ರಾವತಿ  ಜೂ.27
ಯಡಿಯೂರಪ್ಪ ಮರಳಿ ಬಿಜೆಪಿಗೆ ಹಿಂದಿರುಗುವ ಬಗ್ಗೆ ಬಿಜೆಪಿ ಕೇಂದ್ರ ಘಟಕ ತೀರ್ಮಾನ ತೆಗೆದುಕೊಳ್ಳಬೇಕೇ ಹೊರತು ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಅಥವಾ ರಾಜ್ಯ ಮಟ್ಟದಲ್ಲಿ ಎಷ್ಟೇ ಚರ್ಚೆಯಾದರೂ ಅದಕ್ಕೆ ಮಾನ್ಯತೆ ದೊರಕದು ಎಂದು ಬಿಜೆಪಿ  ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ಹೇಳಿದರು.
ಗುರುವಾರ ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಯ್ಙಯೂರಪ್ಪ ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿ ಎಂಬುವುದರಲ್ಲಿ ಎರಡು ಮಾತಿಲ್ಲ. ಅವರು ನಮ್ಮ ನಾಯಕರು. ಅವರ ಆಳ್ವಿಕೆಯಲ್ಲಿ ರಾಜ್ಯ ಹಿಂದೆಂದೂ ಕಾಣದ ಅಭಿವೃದ್ಧಿ ಕಂಡಿತು ಎಂದು ಅವರು ಹೇಳಿದರು.
ರಾಜಿನಾಮೆ: ಜುಲೈ 2011ರಲ್ಲಿ ಅವರ ಮೇಲೆ ಲೋಕಾಯುಕ್ತ ಆರೋಪ ಬಂದಾಗ ಕೇಂದ್ರದ ನಾಯಕರ ಆದೇಶದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಕೆಜೆಪಿ ಕಟ್ಟಿದರು. ಈಗ ಪುನಃ ಅವರು ಬಿಜೆಪಿಗೆ ಮರಳುವ ಬಗ್ಗೆ ರಾಷ್ಟ್ರೀಯ ಘಟಕ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.
ಅದು ತೆಗೆದುಕೊಳ್ಳುವ  ತೀರ್ಮಾನಕ್ಕೆ ರಾಜ್ಯ ಹಾಗೂ ಜಿಲ್ಲಾ ಘಟಕಗಳೂ ಬದ್ಧವಾಗಿರುತ್ತವೆಂದು ಅವರು ತಿಳಿಸಿದರು.
ರಾಜ್ಯದಲ್ಲಿ ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪೂರ್ಣ ಬೆಂಬಲವೇನೂ ವ್ಯಕ್ತವಾಗಿಲ್ಲ. ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯದಿಂದ ಜನ ನೀಡಿದ ತೀರ್ಪಿಗೆ ನಾವು ಗೌರವ ನೀಡುತ್ತೇವೆ ಎಂದರು.
ಮತ ವಿಭಜನೆಯಿಂದ ಬಿಜೆಪಿ ಸೋಲನುಭವಿಸಿದೆ. ಕೆಜೆಪಿ ನಾಯಕರಿಗೂ ಇದು ಮನದಟ್ಟಾಗಿದೆ. ಅವರಿಗೂ ತಪ್ಪಿನ ಅರಿವಾಗಿದೆ. ರಾಜಕಾರಣ ಹರಿಯುವ ನೀರು. ಯಾವುದೇ ಒಂದು ನಿರ್ದಿಷ್ಟ ವ್ಯವಸ್ಥೆಗೆ ಸೀಮಿತವಾಗಿಲ್ಲ. ಬದಲಾವಣೆ ಸಹಜವಾದ ಪ್ರಕ್ರಿಯೆ ಎಂದು ಸಿದ್ದರಾಮಣ್ಣ ಅಭಿಪ್ರಾಯಿಸಿದರು.
ಬಿಜೆಪಿ ಸ್ಥಿರವಾಗಿರಲು ವಾಜಪೇಯಿ ಮತ್ತು ಆಡ್ವಾಣಿ ಅವರೇ ಕಾರಣ. ಇವರಿಬ್ಬರೂ ಪಕ್ಷದ ಶ್ರದ್ಧಾಕೇಂದ್ರಗಳು. ಮೋದಿಯವರಿಗೆ ಪಕ್ಷದ ಪ್ರಚಾರದ ಜವಾಬ್ದಾರಿಯನ್ನು ಮಾತ್ರ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
 ಭದ್ರಾವತಿಯಲ್ಲಿ ಪಕ್ಷವನ್ನು ಸಂಘಟಿಸಲು ಸ್ಥಾನೀಯ ಸಮಿತಿಗಳನ್ನು ನೂತನವಾಗಿ ರಚಿಸಲಾಗುತ್ತಿದೆ ಎಂದೂ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.