ತಂಬಾಕು ಉತ್ಪಾದನೆಯಲ್ಲಿ ದೇಶಕ್ಕೆ 2ನೇ ಸ್ಥಾನ
ಶಿವಮೊಗ್ಗ: ದೇಶದಲ್ಲಿ ವಾಣಿಜ್ಯ ಬೆಳೆಯಾಗಿ ತಂಬಾಕು ಪ್ರಾಮುಖ್ಯತೆ ಪಡೆದಿದ್ದು, ತಂಬಾಕು ಬೆಳೆ ದೇಶದ ಶೇ.9ರಷ್ಟು ಪ್ರದೇಶವನ್ನು ಆವರಿಸಿದೆ ಎಂದು ದೆಹಲಿಯ ವಾಣಿಜ್ಯ ಬೆಳೆ ವಿಭಾಗದ ಸಹಾಯಕ ನಿರ್ದೇಶಕ ಡಾ. ಎನ್. ಗೋಪಾಲಕೃಷ್ಣ ಹೇಳಿದರು. ನವುಲೆಯ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 21 ನೇ ಅಖಿಲ ಭಾರತ ತಂಬಾಕು ಕಾರ್ಯಾಗಾರದಲ್ಲಿ ಅವರು, ಸಾಮಾಜಿಕ ಹಿನ್ನೆಲೆಯಲ್ಲಿ ಈ ಬೆಳೆ ದೇಶದೆಲ್ಲಡೆ ವಿಶೇಷತೆ ಪಡೆದಿದೆ ಎಂದರು.
2 ನೇ ಸ್ಥಾನ: ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿರುವ ಕೇಂದ್ರಿಯ ತಂಬಾಕು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಜಿ.ಟಿ.ಕೆ. ಮೂರ್ತಿ, ವಿಶ್ವದ ಒಟ್ಟು ತಂಬಾಕು ಉತ್ಪಾದನೆಯಲ್ಲಿ 2ನೇ ಸ್ಥಾನವನ್ನು ಭಾರತ ಹೊಂದಿದೆ. ಕಳೆದ ಎರಡು ವರ್ಷಗಳಲ್ಲಿ ದೇಶದ ವಿವಿಧ ಪ್ರದೇಶಗಳಿಂದ ಎರಡು ಉತ್ತಮ ತಳಿಗಳು ಬಿಡುಗಡೆಯಾಗಿವೆ ಎಂದು ತಿಳಿಸಿದರು.
ತಂಬಾಕನ್ನು ಪ್ರಸ್ತುತ ಉದ್ದೇಶಗಳಿಗೆ ಒಳಸುವುದಕ್ಕಿಂತ ವಿಭಿನ್ನ ರೀತಿಯಲ್ಲಿ ಬಳಸುವ ಸಾಧ್ಯತೆ ಹಾಗೂ ಹವಾಮಾನ ವೈಪರಿತ್ಯಗಳಿಗೆ ಅನುಗುಣವಾಗುವಂತೆ ತಳಿ ಅಭಿವೃದ್ಧಿಗೆ ಮಹತ್ವ ನೀಡಬೇಕು ಎಂದು ತಿಳಿಸಿದರು. ಐಟಿಸಿ ಉನ್ನತ ಅಧಿಕಾರಿ ಡಾ. ಮಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿ ವಿಶೇಷಾಧಿಕಾರಿ ಡಾ. ಪಿ.ಎಂ. ಸಾಲಿಮಠ್, ವಿವಿಯ ಸಂಶೋಧನಾ ನಿರ್ದೇಶಕ ಡಾ. ಸತ್ಯನಾರಾಯಣ ರೆಡ್ಡಿ, ಡಾ. ವೈ. ವಿಶ್ವನಾಥ ಶೆಟ್ಟಿ ಮತ್ತಿತತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

