ಶಿವಮೊಗ್ಗ

ಸೊರಬದಲ್ಲಿ ಸೊರಗುತ್ತಿದೆ ಜೀವ ಜಲ

Published On :

ಕ.ಪ್ರ. ವಾರ್ತೆ, ಸೊರಬ, ಮಾ.5
ಬೇಸಿಗೆ ದಿನಗಳು ಇನ್ನೂ ದೂರವಿರುವಾಗಲೆ ತಾಲೂಕಿನ ಪ್ರಮುಖ ನದಿಗಳು ಬತ್ತಲಾರಂಭಿಸಿವೆ.
  ನದಿಗಳು ಒಣಗುತ್ತಿರುವುದರಿಂದ ನದಿ ದಂಡೆಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ.
    ಪ್ರಸ್ತುತ ವರದಾನದಿ ಒಣಗುತ್ತಿರುವುರಿಂದ ಬ್ಯಾರೇಜ್ ಇಲ್ಲದ ಚಂದ್ರಗುತ್ತಿ, ಗುಡವಿ ಮುಂತಾದ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸಾಲದೆಂಬಂತೆ ಕುಡಿಯುವ ನೀರಿನ ಜಾಕ್‌ವೆಲ್ ಇರುವೆಡೆ ಹತ್ತಾರು ಅಧಿಕ ಶಕ್ತಿಯ ಪಂಪ್‌ಗಳ ಮೂಲಕ ಜೋಳ ಮುಂತಾದ ಹಕ್ಕಲು ಪೈರುಗಳಿಗೆ ಅನಧಿಕೃತ ನೀರು ಬಳಸುತ್ತಿರುವುದರಿಂದ ಹಿಂದಿನ ವರ್ಷಗಳಿಗಿಂತಲೂ ಬಹುಬೇಗ ನದಿಗಳು, ನದಿಗಳಲ್ಲಿನ ಜಾಕ್‌ವೆಲ್‌ಗಳು ಒಣಗಲಾರಂಬಿಸಿವೆ.
 ಚಂದ್ರಗುತ್ತಿ ಗ್ರಾಮ ವರದಾ ನದಿ ದಂಡೆಯಲ್ಲಿದೆಯಾದರೂ ವರ್ಷಂಪ್ರತಿ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿದ್ದಲ್ಲ, ಇಲ್ಲಿ ಸುಮಾರು 600 ಕುಟುಂಬಗಳ 2-3 ಸಾವಿರ ಜನರು, ಜಾನುವಾರುಗಳಿಗೆ ಇದೇ ನದಿಯೇ ಜೀವನದಿ.  
    ಈ ಸಂಗತಿ ಹಿಂದಿನಿಂದಲೂ ಆಡಳಿತದ ಗಮನಕ್ಕೆ ತಂದರೂ ಇಂದಿಗೂ ಇಲ್ಲಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಿಲ್ಲ. ಇದಕ್ಕೆ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ, ಸ್ವಾರ್ಥ ಲಾಲಸೆ, ಅವೈಜ್ಞಾನಿಕ ಯೋಜನೆಯೆ ಕಾರಣ ಎಂಬ ಆರೋಪವಿದೆ.
 ಒಟ್ಟಾರೆ ಪ್ರತಿ ಮಾರ್ಚಿ ತಿಂಗಳ ಆರಂಭಕ್ಕೆ, ಇಲ್ಲಿನ ಪ್ರಸಿದ್ಧ ಜಾತ್ರೆ ವೇಳೆಗೆ ನೀರಿನ ಕೊರತೆ ಗಮನಾರ್ಹವಾಗಿಯೆ ಉಳಿದುಕೊಂಡಿದೆ.  
  ಇತ್ತೀಚೆಗೆ ಸುಮಾರು 30 ಲಕ್ಷ ರು.ವೆಚ್ಚದ ಕಾಮಗಾರಿಗೆ ಆಡಳಿತ ಮುಂದಾಗಿದ್ದು, ಗ್ರಾಮಸ್ಥರಲ್ಲಿ ಅಸಹನೆ ಮೂಡಿತ್ತು, ನೀರಿಲ್ಲ ಎಂಬುವುದು ತಿಳಿದಿದ್ದರೂ ಮತ್ತೆ ಲಕ್ಷಾಂತರ ರು.ವೆಚ್ಚ ಭರಿಸಿ ಇದೇ ಜಾಗದಿಂದ ನೀರೊಯ್ಯುವ ನಿರುಪಯೋಗಿ ಯೋಜನೆ ಬೇಡ ಎಂದು ಆಗ್ರಹಿಸಿದ್ದರು. ಕೈಗೆತ್ತಿಕೊಂಡ ಯೋಜನೆ ಸ್ಥಗಿತಗೊಂಡಿತು.
 ಇತ್ತೀಚೆಗೆ ಸುದ್ದಿಯಾದ ಬ್ಯಾರೇಜ್ ಈವರೆಗೂ ಕಾರ್ಯಗತ ಗೊಳ್ಳದಿರುವ ಬಗ್ಗೆ ಗ್ರಾಪಂ ಮಾಜಿ ಅಧ್ಯಕ್ಷ ಅಂಗಡಿ ಚಂದ್ರಪ್ಪ ನೀಡಿದ ವಿವಿರ ಹೀಗಿದೆ.
   ಬ್ಯಾರೇಜ್ ನಿರ್ಮಾಣಕ್ಕಾಗಿ 5 ಕೋಟಿ ರು.ಮಂಜೂರಾಗಿದ್ದು, ಹಣ ಜಿಪಂ ವ್ಯಾಪ್ತಿಗೆ ಬಾರದಿರುವುದರಿಂದ ಯೋಜನೆ ನೆನೆಗುದಿಗೆ ಬಿದ್ದಂತಾಗಿದೆ. ಸಧ್ಯಕ್ಕೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಲು ಗ್ರಾಪಂ ಈಗಾಗಲೇ ಸಿದ್ಧತೆ ನಡೆಸಿದೆ ಎಂದಿದ್ದಾರೆ. ಸದ್ಯಕ್ಕೆ ನೀರಿನ ಬವಣೆ ತಪ್ಪಿದ್ದಲ್ಲ ಎಂದು ಗ್ರಾಮಸ್ಥರು ಆತಂಕಿರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.