ಶಿವಮೊಗ್ಗ

ಶೇ.77 ಮತದಾನ

Published On :

ಕ.ಪ್ರ.ವಾರ್ತೆ, ಹೊಸನಗರ, ಮಾ.7
ಪಟ್ಟಣ ಪಂಚಾಯ್ತಿಯ 11 ವಾರ್ಡ್‌ಗಳಿಂದ ಶೇ.77.02ರಷ್ಟು ಮತದಾನವಾಗಿದ್ದು ಸಣ್ಣಪುಟ್ಟ ಗೊಂದಲ  ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನಡೆಯಿತು.
ಮತದಾನದ ವಿವರ: ವಾರ್ಡ್ 1ರಲ್ಲಿ ಚಲಾವಣೆಗೊಂಡ ಮತ 245 (ಒಟ್ಟು ಮತ 332), ವಾರ್ಡ್.2 296(361), ವಾರ್ಡ್ 3 - 278(330), ವಾರ್ಡ್ 4- 195(253), ವಾರ್ಡ್5- 288(372), ವಾರ್ಡ್ 6- 287(392), ವಾರ್ಡ್ 7- 311(426), ವಾರ್ಡ್ 8- 277(363), ವಾರ್ಡ್ 9- 333(436), ವಾರ್ಡ್ 10- 267(341), ವಾರ್ಡ್ 11- 505(665) ಮತಗಳು ಚಲಾವಣೆಗೊಂಡಿದೆ.
ಹಣ ಹಂಚಿದರು: ವಾರ್ಡ್ 2 ಮತಗಟ್ಟೆ ಬಳಿಯಲ್ಲೆ ಕಾಂಗ್ರೆಸ್ ಅಭ್ಯರ್ಥಿ ಸಹೋದರ ಸದಾಶಿವಶೆಟ್ಟಿ ಮತದಾರರಿಗೆ ಹಣ ಹಂಚುವ ಪ್ರಯತ್ನ ಮಾಡಿದ್ದು ಕೆಜೆಪಿ ಮತ್ತು ಇತರ ಅಭ್ಯರ್ಥಿಗಳು ಇದನ್ನು ತೀವ್ರವಾಗಿ ಖಂಡಿಸಿದರು. ಬಳಿಕ ಅಭ್ಯರ್ಥಿ ರತ್ನಾಕರ ಶೆಟ್ಟಿ ಸಹೋದರನನ್ನು ಅಲ್ಲಿಂದ ಹೊರ ಕಳುಹಿಸಿದ್ದಲ್ಲದೆ ಕ್ಷಮೆ ಕೋರುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದರು.
ವಾರ್ಡ್ 4 ಮತ್ತು 5ರ ಮತಗಟ್ಟೆ ಬಳಿ ಹಣ ಹಂಚುವ ವಿಚಾರದಲ್ಲಿ ಕೆಜೆಪಿ ಮತ್ತು ಜೆಡಿಎಸ್ ವಿರುದ್ಧ ಮಾತಿನ ಚಕಮಕಿ ಕೇಳಿಬಂತು.
ಅದಲು- ಬದಲು: ಇನ್ನು ವಾರ್ಡ್ 11ರಲ್ಲಿ ಗುರುತಿನ ಚೀಟಿಯಲ್ಲಿ ಅಮ್ಮ ಮಗಳ ಫೋಟೋ ಅದಲು ಬದಲು ಆಗಿದ್ದು ಮತದಾನ ಮಾಡಲು ಜೆಡಿಎಸ್ ಅಭ್ಯರ್ಥಿ ಕೆ.ಜಿ. ನಾಗೇಶ ತಕರಾರು ತೆಗೆದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ಮಾತಿನ ಚಕಮಕಿ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.