ದೇವಾಲಯ ಶುದ್ದೀಕರಣ ಚುರುಕು
ಶಿಕಾರಿಪುರ: ಪಟ್ಟಣದ ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿ ಮಾ.10 ಭಾನುವಾರದಂದು ಶಿವರಾತ್ರಿ ಅಂಗವಾಗಿ ಜರುಗಲಿರುವ ವಿಶೇಷ ಪೂಜೆ, ಅಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ದೇವಾಲಯ ಶುದ್ಧಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಮುಜರಾಯಿ ಇಲಾಖೆಯ ಅಧೀನದ, ಪಟ್ಟಣದ ರಥಬೀದಿಯಲ್ಲಿನ ಪುರಾತನ ಕಾಶೀ ವಿಶ್ವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಭಕ್ತರ ಸುಗಮ ದರ್ಶನಕ್ಕಾಗಿ ಸಂಪೂರ್ಣ ದೇವಾಲಯಕ್ಕೆ ಬಣ್ಣದ ಸಹಿತ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, ಇದರೊಂದಿಗೆ ಹೊಸ ಸಂಪೂರ್ಣ ವಿದ್ಯುತ್ ಸಂಪರ್ಕದ ಜವಾಬ್ದಾರಿಯನ್ನು ರಾಜಸ್ವ ನಿರೀಕ್ಷಕ ಮಂಜುನಾಥ್ ವೈಯುಕ್ತಿಕವಾಗಿ ವಹಿಸಿಕೊಂಡು ಸೇವೆ ಸಲ್ಲಿಸಿದ್ದಾರೆ.
ವಿಭಿನ್ನ ಆಚರಣೆ: ದೇವಸ್ಥಾನ ಜೀರ್ಣೋದ್ಧಾರ ಕಟ್ಟಡ ಸಮಿತಿ ಟ್ರಸ್ಟ್ ಅಧ್ಯಕ್ಷ ಚಿದಂಬರ ದೀಕ್ಷಿತ್ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷ ಬಾಲಕೃಷ್ಣ ಜೋಯಿಸ್ ಅವರ ನೇತೃತ್ವದಲ್ಲಿ ಹಾಗೂ ಪುರೋಹಿತ ಗೋಪಾಲ ಭಟ್ ಮಾರ್ಗದರ್ಶನದಲ್ಲಿ ಈ ಬಾರಿಯ ಶಿವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಶಿವರಾತ್ರಿಯ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಶುಕ್ರವಾರ ಕಾಣಿಕೆ ಹುಂಡಿಯನ್ನು ತೆರೆಯಲಾಗಿದ್ದು, ಈ ಬಾರಿ ರು. 33,000 ಸಂಗ್ರಹವಾಗಿದೆ. ಇಲಾಖೆ ವತಿಯಿಂದ ಇದೇ ಸಂದರ್ಭದಲ್ಲಿ ಗೌರವಧನವನ್ನು ರಾಜಸ್ವ ನಿರೀಕ್ಷಕ ಮಂಜುನಾಥ್ ಅವರು ಸಮಿತಿ ಅಧ್ಯಕ್ಷ ಚಿದಂಬರ್ ದೀಕ್ಷಿತ್ ಅವರಿಗೆ ಹಸ್ತಾಂತರಿಸಿ ದೇವಾಲಯಕ್ಕೆ ವಿದ್ಯುತ್ ಅಲಂಕೃತ ಫ್ಲೆಕ್ಸ್ ಅಳವಡಿಸಲು ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

