ಶಿವಮೊಗ್ಗ

ನಾಳೆ ಲಂಕೇಶ್-78

Published On :

ಕ.ಪ್ರ.ವಾರ್ತೆ,ಶಿವಮೊಗ್ಗ, ಮಾ.8
 
ಈ ಬಾರಿ ಲೇಖಕ, ಪತ್ರಕರ್ತ ಪಿ. ಲಂಕೇಶ್ ಜನ್ಮದಿನ ಪ್ರಯುಕ್ತ ಲಂಕೇಶ್-78 ಕಾರ್ಯಕ್ರಮ  ನಗರದ ಅಂಬೇಡ್ಕರ್ ಭವನದಲ್ಲಿ ಮಾರ್ಚ್ 10ರಂದು ನಡೆಯಲಿದ್ದು, ಇಡೀ ದಿನ ವಿಚಾರ ಸಂಕಿರಣ ನಡೆಯಲಿದೆ.
   ಪಿ. ಲಂಕೇಶ್ ಪುತ್ರಿ, ಪತ್ರಕರ್ತೆ ಗೌರಿ ಲಂಕೇಶ್ ಅವರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು.
 ಲಂಕೇಶ್ ಜನಪರ ಕಾಳಜಿ ಉಳ್ಳವರು. ಶಿವಮೊಗ್ಗದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇತ್ತು. ಇದೇ ಜಿಲ್ಲೆಯಲ್ಲಿ ಹುಟ್ಟಿದವರು. ಸಮಾಜವಾದಿ ಚಿಂತನೆಯ ನೆಲ ಈಗ ಬದಲಾಗುತ್ತಿದೆ. ಸಂವಿಧಾನ ವಿರೋಧಿ ರಾಜಕಾರಣಿಗಳು ಇಲ್ಲಿಂದ ಬರುತ್ತಿದ್ದಾರೆ. ಹಾಗಾಗಿ ಲಂಕೇಶ್ ಅವರ ಜನ್ಮದಿನ ಆಚರಣೆ ಶಿವಮೊಗ್ಗದಲ್ಲಿ ನಡೆಯುವುದು ಹೆಚ್ಚು ಅರ್ಥಪೂರ್ಣ ಎಂದರು.
ಉದ್ಘಾಟನೆ: ಅಂದು ಬೆಳಗ್ಗೆ 10 ಗಂಟೆಗೆ ಚಿಂತಕ ರಹಮತ್ ತರೀಕೆರೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಡಿದಾಳು ಶಾಮಣ್ಣ ಪುಸ್ತಕ ಬಿಡುಗಡೆ ಮಾಡುವರು.
   11.30ಕ್ಕೆ ಮಲೆನಾಡು- ನಿನ್ನೆ, ಇಂದು, ನಾಳೆ ವಿಷಯವಾಗಿ ಮೊದಲ ಗೋಷ್ಠಿ ನಡೆಯಲಿದ್ದು, ಮಲೆನಾಡಿಗೆ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರ ಪಾತ್ರ ಕುರಿತು ಪಾರ್ವತೀಶ, ಮಲೆನಾಡಿನ ಆರ್ಥಿಕ ಬಿಕ್ಕಟ್ಟು ಕುರಿತು ಕೆ.ಎಲ್. ಅಶೋಕ್, ಮಲೆನಾಡಿನ ರಾಜಕೀಯ ಸ್ಥಿತ್ಯಂತರಗಳು ಕುರಿತು ಬಿ.ಎಂ. ಪುಟ್ಟಯ್ಯ ಮಾತನಾಡುವರು. ಶ್ರೀಕಂಠ ಕೂಡಿಗೆ ಅಧ್ಯಕ್ಷತೆ ವಹಿಸುವರು.
 ಮಧ್ಯಾಹ್ನ 2.30ಕ್ಕೆ ಸಮಕಾಲೀನ ಕರ್ನಾಟಕ ವಿಷಯವಾಗಿ ಎರಡನೇ ಗೋಷ್ಠಿ ನಡೆಯುವುದು. ರಾಜಕೀಯ ಸ್ಥಿತ್ಯಂತರಗಳು ಕುರಿತು ವಾಸು, ಸಾಮಾಜಿಕ ಸಂಕ್ಷೋಭೆ ಡಾ. ವಿನಯ, ಸಾಹಿತ್ಯ- ಸಂಸ್ಕೃತಿ ಕುರಿತು ಕೆ. ಫಣಿರಾಜ್ ಮಾತನಾಡುವರು. ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷತೆ ವಹಿಸುವರು.
 ಸಂಜೆ 5ಕ್ಕೆ ಲಂಕೇಶ್ ಸಾಹಿತ್ಯದ ಪ್ರಸ್ತುತತೆ ಕುರಿತು ಜಿ. ರಾಜಶೇಖರ್ ವಿಶೇಷ ಉಪ್ಯಾಸ ನೀಡುವರು. ಸಾಹಿತಿ ನಾ. ಡಿಸೋಜ ಅತಿಥಿಯಾಗಿ ಆಗಮಿಸಲಿದ್ದು, ಪಾರ್ವತೀಶ ಸಮಾರೋಪ ಭಾಷಣ ಮಾಡುವರು. ನಂತರ 6.30ಕ್ಕೆ ಜನ್ನಿ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.