ಬಜೆಟ್ ಅವಲೋಕನ ವಿಚಾರ ಸಂಕಿರಣ
ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಮಾ.9ರಂದು ಸಂಜೆ 4.30ಕ್ಕೆ ಸಂಘದ ಸಭಾಂಗಣದಲ್ಲಿ 2013ರ ರಾಜ್ಯ ಮತ್ತು ಕೇಂದ್ರ ಬಜೆಟ್ ಕುರಿತು ವಿಚಾರ ಸಂಕಿರಣ ಏರ್ಪಡಿಸಿದೆ. ಈ ವಿಚಾರ ಸಂಕಿರಣದಲ್ಲಿ ಜಿ.ಎಂ. ಚೆನ್ನಪ್ಪಶೆಟ್ಟಿ ಅವರು ಸೇವಾ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ, ಸಿ.ಎ. ಶರತ್ ಅವರು ಆದಾಯ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ವಿಶ್ರಾಂತ ವಾಣಿಜ್ಯ ತೆರಿಗೆ ಸಹಾಯಕ ಉಪಆಯುಕ್ತ ಜಿ.ಬಿ. ಮಂಜಪ್ಪ ಅವರು ಮೌಲ್ಯವರ್ಧಿತ ತೆರಿಗೆ ವಿಷಯಗಳ ಕುರಿತು ವಿಷಯ ಮಂಡಿಸಲಿರುವರು. ಈ ವಿಚಾರ ಸಂಕಿರಣದಲ್ಲಿ ಸಾರ್ವಜನಿಕರು ಹಾಗೂ ಸಂಘದ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ತೆರಿಗೆ ಸಲಹಾ ಸಮಿತಿಯ ಅಧ್ಯಕ್ಷ ಯು. ಮಧುಸೂದನ್ ಐತಾಳ್ ತಿಳಿಸಿದ್ದಾರೆ.
ನಾಳೆ ಬೆಳ್ಳಿ ಪಲ್ಲಕ್ಕಿ ಸಮರ್ಪಣೆ
ಶಿರಾಳಕೊಪ್ಪ: ಮಹಾಶಿವರಾತ್ರಿ ಪುಣ್ಯದಿನದಂದು ಶಿರಾಳಕೊಪ್ಪ ಹತ್ತಿರದ ಐತಿಹಾಸಿಕ ಕ್ಷೇತ್ರ ತೊಗರ್ಸ ಮಲ್ಲಿಕಾರ್ಜುನ ಸ್ವಾಮಿಗೆ ಬೆಂಗಳೂರಿನ ಭಕ್ತರಿಂದ ರು. 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬೆಳ್ಳಿ ಪಲ್ಲಕ್ಕಿಯನ್ನು ಅರ್ಪಿಸಲಿದ್ದಾರೆ. ದಿ.10ರಂದು ನಡೆಯಲಿರುವ ಶಿವರಾತ್ರಿ ವಿಶೇಷ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ದೇವರಿಗೆ ಸಮರ್ಪಣೆ ಮಾಡಲಿದ್ದಾರೆ. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ ಶಾಂತನಗೌಡ ಕಾರ್ಯಕ್ರಮದಲ್ಲಿ ಹಾಜರಿದ್ದು ಪಲ್ಲಕ್ಕಿಯ ಉದ್ಘಾಟನಾ ಕಾರ್ಯಕ್ರಮ ನಡೆಸಿಕೊಡಲಿರುವರು. ತೊಗರ್ಸಿ ಮಲ್ಲಿಕಾರ್ಜುನ ದೇವಸ್ಥಾನದ ಅಧ್ಯಕ್ಷ ಮಳೇಹಿರೇಮಠದ ಮಹಂತ ದೇಶಿಕೇಂದ್ರ ಸ್ವಾಮಿಗಳು ಹಾಗೂ ಪಂಚವಣ್ಣಿಗೆ ಮಠದ ಚೆನ್ನವೀರ ದೇಶೀಕೇಂದ್ರ ಶ್ರೀ ಸಾನ್ನಿಧ್ಯ ವಸಲಿದ್ದು, ಪೂಜಾವಿಧಾನ ಹಾಗೂ ವಿವಿಧ ಕಾರ್ಯಕ್ರಮನಡೆಲಿವೆ. ಎಂದು ಮಹಂತ ದೇಶಿಕೇಂದ್ರ ಸ್ವಾಮಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂದು ಯಂತ್ರ ಲೋಕಾರ್ಪಣೆ
ಸಾಗರ: ಅಡಕೆ ಬೆಳೆಗಾರರಿಗೆ ತೀರಾ ಅಗತ್ಯವಾಗಿರುವ ನೂತನವಾಗಿ ಸಿದ್ಧಗೊಳಿಸಿದ ಸುಧಾರಿತ ಅಡಕೆ ಸುಲಿಯುವ ಯಂತ್ರ (ಸಿಪ್ಪೆಗೋಟು) ದ ಲೋಕಾರ್ಪಣೆ ಕಾರ್ಯಕ್ರಮ ಮಾ.9ರ ಶನಿವಾರ ಸಂಜೆ 6ಗಂಟೆಗೆ ನಡೆಯಲಿದೆ.
ಇಲ್ಲಿನ ಜೋಗ ರಸ್ತೆಯ ವಿಶ್ವನಾಥ ಇಂಡಸ್ಟ್ರಿಯಲ್ ವರ್ಕರ್ಸ್ ಸಂಸ್ಥೆಯ ಬೆಳ್ಳಿಹಬ್ಬದ ಸಂದರ್ಭದಲ್ಲಿ ಈ ಯಂತ್ರವನ್ನು ಅಭಿವೃದ್ಧಿಪಡಿಸಿದ್ದು, ಸಂಸ್ಥೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೇರುಸೊಪ್ಪದ ಬಂಗಾರಮಕ್ಕಿಯ ಮಾರುತಿ ಗುರೂಜಿಯವರು ಯಂತ್ರವನ್ನು ಬಿಡುಗಡೆ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

