ಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು
ಭದ್ರಾವತಿ: ಶಿವರಾತ್ರಿ ಪ್ರಯುಕ್ತ 10ರಂದು ಕಾಗದನಗರದ ಶ್ರೀ ಈಶ್ವರ ದೇವಾಲಯದಲ್ಲಿ ಸಾಮೂಹಿಕ ರುದ್ರಹೋಮ ಹಾಗೂ ನಾಲ್ಕು ಯಾಮಗಳ ಪೂಜೆಯೊಂದಿಗೆ ಲಘುನ್ಯಾಸಪೂರ್ವಕ ಮತ್ತು ಮಹಾನ್ಯಾಸಪೂರ್ವಕ ರುದ್ರಾಭಿಷೇಕ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಶೇಷ ಆಕರ್ಷಣೆಯಾಗಿ ಗುರು ಬ್ರದರ್ಸ್ ಆರ್ಟ್ಸ್‌ರಿಂದ ಕೈಲಾಸದರ್ಶನ ಏರ್ಪಡಿಸಲಾಗಿದೆ. 10ರ ಸಂಜೆ 5.30ರಿಂದ ರಾತ್ರಿ 10.30ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. 11ರ ಬೆಳಗ್ಗೆ 6 ಗಂಟೆಗೆ ಪ್ರಸಾದ ವಿನಿಯೋಗ ಮತ್ತು ಬೆಳಗ್ಗೆ 10.30ರ ವರೆಗೆ ಪೂಜೆಗೆ ಅವಕಾಶವಿದೆ. ಸಾಮೂಹಿಕ ರುದ್ರಹೋಮಕ್ಕೆ 150 ರು.ಗಳು ಹಾಗೂ ರುದ್ರಹೋಮಸಹಿತ ನಾಲ್ಕು ಯಾಮದ ಸೇವೆಗೆ 500 ರು.ಗಳನ್ನು ಸೇವೆ ಮಾಡಿಸಲಿಚ್ಚಿಸುವವರು ನೀಡಬೇಕಾಗಿರುತ್ತದೆ. ಲಘುನ್ಯಾಸಪೂರ್ವಕ ರುದ್ರಾಭಿಷೇಕಕ್ಕೆ 100 ರು.ಗಳು ಹಾಗೂ ಮಾಹಾನ್ಯಾಸಪೂರ್ವಕ ರುದ್ರಾಭಿಷೇಕಕ್ಕೆ 150 ರು.ಗಳು ಮತ್ತು ರುದ್ರಹೋಮಸಹಿತ ಪೂರ್ಣ ಸೇವೆಗೆ 300 ರು.ಗಳನ್ನು ನಿಗದಿಗೊಳಿಸಲಾಗಿದೆ. ಸೇವೆಗೆ ಹಣ ನೀಡುವವರು ಅಧಿಕೃತ ರಸೀದಿ ಪಡೆಯಬೇಕು. ವಿವರಗಳಿಗೆ ಡಿ.ವಿ. ವೆಂಕಟೇಶ್ (9945270129) ಅಥವಾ ಜಿ.ಕೆ. ಶ್ರೀನಾಥ್ (9663791154)ರನ್ನು ಸಂಪರ್ಕಿಸಿ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.
ಶಿವರಾತ್ರಿ ಅಂಗವಾಗಿ 10ರ ಬೆಳಗ್ಗೆ 10ರಿಂದ ಗಣೇಶ ಕಾಲೋನಿಯ ಶಾರದ ಸಂಗೀತ ಪಾಠಶಾಲೆಯವರಿಂದ ಹಾಗೂ ಸೀತಾಲಕ್ಷ್ಮಿ ಮತ್ತು ತಂಡದವರಿಂದ ಶಿವ ಸಹಸ್ರನಾಮ, ಬೆಳಗ್ಗೆ 11 ಗಂಟೆಯಿಂದ ಕಾಗದನಗರ ಭಕ್ತವೃಂದದಿಂದ ಲಲಿತಾ ಸಹಸ್ರನಾಮ ಪಠಣ, ಸಂಜೆ 5.30ರಿಂದ ಜನ್ನಾಪುರದ ಗಾಯತ್ರಿ ವೃಂದದಿಂದ ಶಿವಾನಂದ ಲಹರಿ, ಸಂಜೆ 6.30ರಿಂದ ಕಾಗದನಗರದ ಶ್ರೀನಿವಾಸ ಭಜನಾ ಮಂಡಳಿಯವರಿಂದ ದೇವರನಾಮ ಗಾಯನ, ರಾತ್ರಿ 7.30ಕ್ಕೆ ಶಾಂತಲಾ ಉದೋಷಿಯವರಿಂದ ಭರತನಾಟ್ಯ ಪ್ರದರ್ಶನ ಹಾಗೂ ರಾತ್ರಿ 8ರಿಂದ ರಾಗರಂಜನಿ ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

