ಕಾರ್ಮಿಕರ ಸಮಾನ ಪರಿಗಣನೆ ಅಗತ್ಯ
ಕ.ಪ್ರ ವಾರ್ತೆ, ಜೋಗ್ಫಾಲ್ಸ್, ಮಾ.15
ಸಂಘಟನೆಗಳ ಸಂಸ್ಥಾಪಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸದುದ್ದೇಶದ ಮತ್ತು ಸತ್ ಸಂಪ್ರದಾಯದ ಪ್ರತೀಕವಾಗಿದೆ. ಇಂತಹ ಸಂದರ್ಭದಲ್ಲಿ ಆಡಳಿತ ವರ್ಗ ಮತ್ತು ಕಾರ್ಮಿಕರನ್ನು ಸಮಾನವಾಗಿ ಪರಿಗಣಿಸುತ್ತಿರುವುದು ಎರಡು ಕುಟುಂಬಗಳು ಒಗ್ಗೂಡಿದಂತಾಗಿದೆ ಎಂದು ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್, ಕರ್ನಾಟಕದ ಅಧ್ಯಕ್ಷರಾದ ಮೈಕೆಲ್. ಬಿ. ಫರ್ನಾಂಡಿಸ್ ತಿಳಿಸಿದರು.
ಅವರು ಇಲ್ಲಿನ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಕೆ. ಇಸ್ರಾಯಿಲ್ ಮತ್ತು ಕೆ. ಸುಬ್ಬರಾಯಿಡು ವೇದಿಕೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಕಾರ್ಮಿಕ ಸಂಘಟನೆಗಳಾದ ಎಚ್ಇಸಿಪಿ ಮತ್ತು ಕೆ.ಪಿ.ಸಿ ಎಂಪ್ಲಾಯಿಸ್ ಯೂನಿಯನ್ ಸಂಘಟನೆಗಳ ಸಂಸ್ಥಾಪಕರಿಗೆ ಮಂಗಳವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಿಗಮದ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಸ್.ಪಿ. ಷಡಾಕ್ಷರಿಸ್ವಾಮಿ, ಕೆ.ಪಿ.ಸಿ ಎಂಪ್ಲಾಯಿಸ್ ಯೂನಿಯನ್ ಸಂಸ್ಥಾಪಕರಾದ ಕೆ. ಪುಟ್ಟಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆ.ಪಿ.ಸಿ ಎಂಪ್ಲಾಯಿಸ್ ಯೂನಿಯನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ.ಟಿ. ಮಂಜುನಾಥ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶರಾವತಿ ಯೋಜನಾ ಪ್ರದೇಶದ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತರ ಜಿ. ಹನುಮಂತಪ್ಪ, ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ರಾಜಮುಡಿ, ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್, ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಎಲ್. ಕಾಳಪ್ಪ, ಆರ್.ಟಿ.ಪಿ.ಎಸ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಜಿ.ವಿ.ಎಲ್. ರೆಡ್ಡಿ, ಗೇರುಸೊಪ್ಪ ಯೋಜನಾ ಪ್ರದೇಶದ ಕೆ.ಪಿ.ಸಿ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಎನ್.ಎಸ್. ಕೃಷ್ಣ, ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್.ಟಿ. ಕೊಳಚಿ, ಶರಾವತಿ ಯೋಜನಾ ಪ್ರದೇಶದ ಕೆ.ಪಿ.ಸಿ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಎಚ್.ಎಸ್. ಹರೀಶ್, ಕಾರ್ಗಲ್ ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಸಿ.ಆರ್. ಪಾಟೀಲ್ ಹಾಜರಿದ್ದರು.
ಸನ್ಮಾನ: ಕಾರ್ಯಕ್ರಮದಲ್ಲಿ ಕೆ. ಪುಟ್ಟಯ್ಯ, ರೋಣ, ಪಿ.ಪಿ. ಫರ್ನಾಂಡಿಸ್, ಕೃಷ್ಣಮೂರ್ತಿ, ಸುರೇಶ್.ಜಿ. ಗಾಂವ್ಕರ್, ವೆಂಕಟಪ್ಪ, ಕೃಷ್ಣ, ರಾಮಕೃಷ್ಣ ರೆಡ್ಡಿ, ಮಲ್ಲಪ್ಪಗೌಡ, ಜಿ.ಬಿ. ಮಹಾಲಿಂಗಪ್ಪ, ಅಪ್ಪಾಜಿಗೌಡ, ಸಿ. ವೆಂಕಟರಾಮಯ್ಯ, ದಿ. ಮಲ್ಲಪ್ಪ, ದಿ.ಕೆ. ಇಸ್ರಾಯಿಲ್, ಸುಬ್ಬರಾಯಿಡು ಅವರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

