ಶಿವಮೊಗ್ಗ

ಉನ್ನತ ಶಿಕ್ಷಣಕ್ಕೆ ವಿದೇಶ ಪ್ರಯಾಣ ಬೇಕಿಲ್ಲ

Published On :

ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.18
ವಿಶ್ವಕ್ಕೆ ವಿದ್ಯೆ ಪರಿಚಯಿಸಿದವರು ಭಾರತೀಯರು. ಆದರೆ, ಇಂದು ಉನ್ನತ ಶಿಕ್ಷಣ ಪಡೆಯಲು ಭಾರತೀಯರು ಬೇರೆ ದೇಶಗಳಿಗೆ ಹೋಗುತ್ತಿರುವುದು ವಿಪರ್ಯಾಸ ಎಂದು ವಿಪ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.
ಕುವೆಂಪು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ನಿರ್ದೇಶನಾಲಯ ಶನಿವಾರ ಆಯೋಜಿಸಿದ್ದ ದಶಮಾನೋತ್ಸವದಲ್ಲಿ ಅವರು, ಭಾರತ ಪ್ರಾಚೀನ ಕಾಲದಲ್ಲಿಯೇ ವಿಶ್ವಕ್ಕೆ ವಿದ್ಯೆಯನ್ನು ಧಾರೆಯೆರೆದಿದೆ. ಆದರೆ, ದೇಶದ ಪ್ರತಿಭಾವಂತ ವಿದ್ಯಾವಂತವರು ಅಮೇರಿಕಾ, ನ್ಯೂಜಿಲೆಂಡ್‌ನಂತಹ ದೇಶಗಳಲ್ಲಿ ಡಾಕ್ಟರ್, ಎಂಜಿನಿಯರ್‌ಗಳಾಗಿ ಪದವಿ ಪಡೆದು ಬರುವತ್ತಿರುವುದು ಅವಮಾನದ ಸಂಗತಿ ಎಂದರು.
ವಿಪರ್ಯಾಸ: ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಸರಿಯಾದ ಪ್ರಮಾಣದಲ್ಲಿ ಸಿಗದಿರುವುದು ವಿಪರ್ಯಾಸ. ಆದರೆ, ಇದನ್ನು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ನಿರ್ದೇಶನಾಲಯಗಳು ಸರಿದೂಗಿಸಿಕೊಂಡು ಹೋಗುತ್ತಿರುವುದು ಸಂತಸ ತಂದಿದೆ ಎಂದರು.
ಪ್ರಥಮ ಸ್ಥಾನ: ಭಾರತಕ್ಕೆ ತನ್ನದೇ ಆದ ಇತಿಹಾಸವಿದ್ದು, ಕಲೆ, ಸಾಹಿತ್ಯದಲ್ಲಿ ಸಂಸ್ಕೃತಿಗಳಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇಂತಹ ಇತಿಹಾಸವನ್ನು ನಾವಿಂದು ಮರೆತ್ತಿದ್ದೇವೆ ಎಂದ ಅವರು, ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಕ್ಷಣದಿಂದಲ್ಲೇ ಅವರಿಗೆ ಸ್ವಾತಂತ್ರ್ಯ ನೀಡಿದ್ದೇವೆ. ಆದರೂ ಮಹಿಳೆಯರಿಗೆ ಇಂದು ರಕ್ಷಣೆ ನೀಡುವ ಅಗತ್ಯವಿದೆ ಎಂದರು.
ಹುಬ್ಬಳ್ಳಿಯ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ. ಟಿ.ಆರ್. ಸುಬ್ರಹ್ಮಣ್ಯ, ನವದೆಹಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ ದೂರ ಶಿಕ್ಷಣ ನಿರ್ದೇಶನಾಲಯದ ಡಾ. ಭರತ್ ಭೂಷಣ್, ಕುವೆಂಪು ವಿವಿ ಕುಲಪತಿ ಎಸ್.ಎ. ಬಾರಿ, ಕುಲಸಚಿವ ಪ್ರೊ. ಎ.ರಾಮೇಗೌಡ, ಪ್ರೊ. ಎಚ್.ಎಸ್. ಬೋಜ್ಯಾನಾಯ್ಕ, ಪ್ರೊ. ಆರ್. ಹಿರೇಮಣಿ ನಾಯಕ್, ದೂ.ಶಿ. ನಿರ್ದೇಶಕ ಡಾ.ಎಂ. ವೆಂಕಟೇಶ್ವರಲು ಮೊದಲಾದರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.