ಶಿವಮೊಗ್ಗ

ಗೋವಾ ವಿರುದ್ಧ ಕೇರಳ ತಂಡಕ್ಕೆ ಭರ್ಜರಿ ಜಯ

Published On :

ಭದ್ರಾವತಿ: ಭದ್ರಾವತಿಯ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಅಂತರರಾಜ್ಯ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಕೇರಳ ತಂಡವು ಗೋವಾ ತಂಡದ ವಿರುದ್ಧ 38 ರನ್ಗಳ ವಿಜಯ ಸಾಧಿಸಿದೆ.
  ಈ ಮೂಲಕ ನಾಲ್ಕು ಅಂಕಗಳನ್ನು ಗಳಿಸಿತಲ್ಲದೆ ರಾಂಚಿಯಲ್ಲಿ ಮಾ.25ರಿಂದ ಪ್ರಾರಂಭವಾಗಲಿರುವ ಅಂತಿಮ ಸುತ್ತಿನ ಪಂದ್ಯಗಳಲ್ಲಿ ಕರ್ನಾಟಕ ತಂಡದೊಂದಿಗೆ ದಕ್ಷಿಣ ವಲಯದಿಂದ ಭಾಗವಹಿಸುವ ಅರ್ಹತೆ ಪಡೆಯಿತು.
   ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಕೇರಳ ತಂಡವು ನಿಗದಿತ 20 ಓವರುಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 146 ರನ್ ಗಳಿಸಿತು. ಆರಂಭ ಆಟಗಾರ ವಿ.ಎ. ಜಗದೀಶ್ (60) ಮತ್ತು ರಾಕೇಶ್ (21) ತಂಡದು ಉತ್ತಮ ಮೊತ್ತಕ್ಕೆ ಕಾರಣರಾದರು.
  ಜಗದೀಶ್ ಅವರು ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ ರೋಹನ್ ಜತೆ ಮೂರನೇ ವಿಕೆಟ್ ಜತೆಯಾಟದಲ್ಲಿ 46 ಎಸೆತಗಳಲ್ಲಿ 44 ರನ್ಗಳ ಪಾಲುದಾರಿಕೆಗೆ ಕಾರಣರಾದರು.
    ರೋಹನ್ ಪ್ರೇಮ್ ಅವರ ವೈಯುಕ್ತಿಕ ಕಾಣಿಕೆ 16 ಓಟಗಳು. ಗೋವಾ ತಂಡದ ಡಿ.ಡಬ್ಲ್ಯೂ. ಮಿಸಾಲ್, ಎಸ್.ಎ. ಬಡಿಉಜ್ ಮಾಮ ಮತ್ತು ಶದಬಾದ್ ಜಕಾತಿ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
147 ರನ್ಗಳ ಗುರಿಯನ್ನು ಬೆನ್ನಟ್ಟಿದ ಗೋವಾ ತಂಡ 6 ರ್ನ್ ಗಳಾಗುವಷ್ಟರಲ್ಲಿ ಆರಂಭ ಆಟಗಾರ ಎಸ್.ಎಸ್. ಯಾದವ್ ಅವರ ವಿಕೆಟ್ ಕಳೆದುಕೊಂಡಿತು.
   ಅನುಭವಿ ಆಟಗಾರ ಎಸ್.ಅಸ್ನೋಡಿಕರ್ ಯಾವುದೇ ರನ್ ಗಳಿಸದೆ ವಾರಿಯರ್ ಅವರ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಸುರೇಂದ್ರನ್ ಅವರಿಗೆ ಕ್ಯಾಚಿತ್ತು ಔಟಾದರು.
ನಂತರ ಆರ್.ಯು. ಶುಕ್ಲ ಮತ್ತು ರೀಗನ್ ಪಿಂಟೋ ನಾಲ್ಕನೇ ವಿಕೆಟ್ ಜತೆಯಾಟದಲ್ಲಿ 48 ರನ್ ಕಲೆಹಾಕಿ ತಂಡದ ಮೊತ್ತವನ್ನು ನಾಲ್ಕು ವಿಕೆಟ್ ನಷ್ಟಕ್ಕೆ 71ಕ್ಕೆ ಕೊಂಡೊಯ್ದರಾದರೂ ನಂತರ ಗೋವಾದ ಬ್ಯಾಟ್ಸ್ಮನ್ಗಳು ತರಗೆಲೆಗಳಂತೆ ಉದುರಿ 19.3 ಓವರುಗಳಲ್ಲಿ 108 ಓಟಗಳಿಗೆ ಆಲ್ಔಟ್ ಆದರು..
ಸಂಕ್ಷಿಪ್ತ ಸ್ಕೋರ್
ಕೇರಳ 20 ಓವರುಗಳಲ್ಲಿ 9 ವಿಕೆಟಟ್ನಷ್ಟಕ್ಕೆ 146
ವಿ.ಎ. ಜಗದೀಶ್ 60, ಕೆ.ಜೆ. ರಾಕೇಶ್ 21
ಡಿ.ಡಬ್ಲ್ಯೂ. ಮಿಸಾಲ್ 2-16, ಎಸ್.ಎ. ಬಡಿಉಜ್ ಮಾಮ 2-26, ಶದಬಾದ್ ಜಕಾತಿ (2-30)
ಗೋವಾ- 19.3 ಓವರುಗಳಲ್ಲಿ 108
ರೀಗನ್ ಪಿಂಟೋ 33, ಆರ್.ಯು. ಶುಕ್ಲ 29, ಪಿ. ಪ್ರಶಾಂತ್ (4-13, ಎಸ್.ಎಸ್. ವಾರಿಯರ್ (3-19)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.